Rameshwaram Cafe blast, train attack: ದೇಶದುದ್ದಕ್ಕೂ ರೈಲುಗಳ ಮೇಲೆ ದಾಳಿ ನಡೆಸುವಂತೆ ಪಾಕಿಸ್ತಾನಿ ಉಗ್ರನ ಕರೆ ; ರಾಮೇಶ್ವರ ಕೆಫೆ ಸ್ಫೋಟದ ಸಂಚುಕೋರನಿಂದ ಮತ್ತೊಂದು ಟಾರ್ಗೆಟ್ 

28-08-24 11:12 pm       HK News Desk   ದೇಶ - ವಿದೇಶ

ದೇಶದುದ್ದಕ್ಕೂ ರೈಲುಗಳ ಮೇಲೆ ದಾಳಿ ನಡೆಸುವಂತೆ ಪಾಕಿಸ್ತಾನಿ ಉಗ್ರ ಫರ್ಹಾತುಲ್ಲಾ ಘೋರಿ, ಭಾರತದಲ್ಲಿ ಕಾರ್ಯಾಚರಣೆ ನಡೆಸುವ ಸ್ಲೀಪರ್ ಸೆಲ್‌ಗಳಿಗೆ ಸೂಚನೆ ನೀಡುವ ವಿಡಿಯೋ ಬೆಳಕಿಗೆ ಬಂದಿದೆ.

ನವದೆಹಲಿ, ಆಗಸ್ಟ್‌ 28: ದೇಶದುದ್ದಕ್ಕೂ ರೈಲುಗಳ ಮೇಲೆ ದಾಳಿ ನಡೆಸುವಂತೆ ಪಾಕಿಸ್ತಾನಿ ಉಗ್ರ ಫರ್ಹಾತುಲ್ಲಾ ಘೋರಿ, ಭಾರತದಲ್ಲಿ ಕಾರ್ಯಾಚರಣೆ ನಡೆಸುವ ಸ್ಲೀಪರ್ ಸೆಲ್‌ಗಳಿಗೆ ಸೂಚನೆ ನೀಡುವ ವಿಡಿಯೋ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಭಾರತದ ಗುಪ್ತಚರ ಸಂಸ್ತೆಗಳು ಹೈ ಅಲರ್ಟ್ ಘೋಷಿಸಿವೆ. 

ಹೈದ್ರಾಬಾದ್ ಮೂಲದವನಾದರೂ ಹಲವು ವರ್ಷಗಳಿಂದ ಪಾಕಿಸ್ತಾನದಲ್ಲಿ ನೆಲೆಸಿರುವ ಘೋರಿ, ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆಯ (ಐಎಸ್‌ಐ) ನೆರವಿನಿಂದ ಸ್ಲೀಪರ್ ಸೆಲ್ ಮೂಲಕ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಸಂಚು ರೂಪಿಸಿದ್ದ ಎಂದು ಹೇಳಲಾಗಿತ್ತು. 

ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರ ಮತ್ತು ದೇಶದ ಇತರೆ ಭಾಗಗಳಲ್ಲಿ ಭಾರಿ ಪ್ರಮಾಣದಲ್ಲಿ ರೈಲುಗಳ ಮೇಲೆ ದಾಳಿ ನಡೆಸುವಂತೆ ತನ್ನ ಬೆಂಬಲಿಗರಿಗೆ ಸಲಹೆ ನೀಡಿದ್ದಾನೆ. ಭಾರತದ ಮೂಲಸೌಕರ್ಯ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಪೂರೈಕೆ ಸರಪಣಿಯನ್ನು ಗುರಿಯಾಗಿಸಬೇಕು ಎಂದಿದ್ದು, ಶಸ್ತ್ರಾಸ್ತ್ರಗಳ ಬಳಕೆ ಜತೆಗೆ, ಹೆಚ್ಚಿನ ಹಾನಿ ಮಾಡಬಲ್ಲ ವಿಧಾನಗಳನ್ನು ಬೆಂಬಲಿಗರಿಗೆ ವಿವರಿಸಿದ್ದಾನೆ. 

ಪೆಟ್ರೋಲ್ ಪೈಪ್‌ಲೈನ್‌ಗಳು, ಸರಕು ಸಾಗಾಣಿಕೆ ಸರಪಣಿಗಳ ಮೇಲೆ ದಾಳಿ ನಡೆಸಬೇಕು. ರೈಲ್ವೇ ಮಾರ್ಗಗಳು ಅವರ ಸಾರಿಗೆ ವ್ಯವಸ್ಥೆಗೆ ಹಾನಿ ಮಾಡಿ. ಇದು ದೇಶದಲ್ಲಿ ಅರಾಜಕತೆ ಮೂಡಿಸುತ್ತದೆ. ಸರ್ಕಾರವು ಇಡಿ ಮತ್ತು ಎನ್‌ಐಎ ಮೂಲಕ ನಮ್ಮ ಆಸ್ತಿಗಳನ್ನು ಗುರಿಯಾಗಿಸುತ್ತಿದೆ. ಆದರೆ ಅದು ದೃಢವಾಗಿದೆ. ಶೀಘ್ರದಲ್ಲಿಯೇ ಅಥವಾ ಮುಂದೆ ನಾವು ಅಧಿಕಾರವನ್ನು ಆಕ್ರಮಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾನೆ. 

ಫರ್ಹಾತುಲ್ಲ ಘೋರಿ ಮತ್ತು ಆತನ ಅಳಿಯ ಶಾಹಿದ್ ಫೈಸಲ್‌ಗೆ ದಕ್ಷಿಣ ಭಾರತದ ಸ್ಲೀಪರ್‌ ಸೆಲ್ ಗಳ ಪ್ರಬಲ ನೆಟ್‌ವರ್ಕ್ ಇದೆ. ರಾಮೇಶ್ವರಂ ಕೆಫೆ ಸ್ಫೋಟದ ಪ್ರಮುಖ ಆರೋಪಿಗಳಾದ ಅಬ್ದುಲ್ ಮತೀನ್, ಅಹ್ಮದ್ ತಾಹಾ ಹಾಗೂ ಮುಸ್ಸಾವೀರ್ ಹುಸೇನ್ ಶಾಜಿಬ್ ಇಬ್ಬರ ಜತೆಗೂ ಫೈಸಲ್ ಸಂಪರ್ಕದಲ್ಲಿದ್ದ. ಈ ದಾಳಿಯ ಸ್ವರೂಪವನ್ನು ಆತನೇ ನಿರ್ಧರಿಸಿದ್ದ ಎಂದು ಹೇಳಲಾಗಿದೆ.

Intelligence agencies in India are on high alert after coming across a video that showed terrorist Farhatullah Ghori asking the sleeper cells in India to carry out attacks on trains across the country. Sources have informed India Today that Ghori, a fugitive jihadist who is currently based in Pakistan, orchestrated the blast in Bengaluru's Rameshwaram Cafe through a sleeper cell with the support of Pakistan's Inter-Services Intelligence (ISI).