ಬ್ರೇಕಿಂಗ್ ನ್ಯೂಸ್

Satish Kumpala, Mangalore: ಉಸ್ತುವಾರಿ ಸಚಿವರು ಎಲ್ಲಿ ನಿದ್ದೆ ಮಾಡುತ್ತಿದ್ದಾರೆ, ಕಿಡಿಗೇಡಿ ಸವಾಲು ಹಾಕಿದ್ದನ್ನು ಪ್ರಶ್ನಿಸಿದರೆ ಎಫ್ಐಆರ್ ದಾಖಲಿಸುತ್ತಾರೆ, ಪ್ಯಾಲೆಸ್ತೀನ್ ಧ್ವಜ ಹಾರಿಸಿದ್ರೆ ಕೇಸು ಮಾಡಲ್ಲ, ಶರಣ್ ಪಂಪ್ವೆಲ್ ಮಾತಾಡಿದ್ದರಲ್ಲಿ ತಪ್ಪೇನಿದೆ ? ಸತೀಶ್ ಕುಂಪಲ ಪ್ರಶ್ನೆ    |    Brijesh Chowta, Msez, JBF: ಎಂಎಸ್ಇಝೆಡ್‌ ಗೆ ಭೂಮಿ ಕೊಟ್ಟಿದ್ದ ಜೆಬಿಎಫ್ ಕಂಪೆನಿ ಕುಟುಂಬಸ್ಥರಿಗೆ ಕೊನೆಗೂ ಜಿಎಂಪಿಎಲ್‌ ನಲ್ಲಿ ಉದ್ಯೋಗ ; ಸಂಸದ ಕ್ಯಾ.ಚೌಟ ಮನವಿಗೆ ತುರ್ತು ಸ್ಪಂದಿಸಿ ಸಮಸ್ಯೆ ಬಗೆಹರಿಸಿದ ಕೇಂದ್ರ ಪೆಟ್ರೋಲಿಯಂ ಸಚಿವ    |    Udupi, Sunil Kumar, Kota srinivas, CM: ರಾಜ್ಯ ಸರ್ಕಾರದಿಂದ ಕರಾವಳಿ ಜಿಲ್ಲೆಗಳ ನಿರ್ಲಕ್ಷ್ಯ ; ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುತ್ತೇವೆ, ಎರಡು ಜಿಲ್ಲೆಗಳಲ್ಲಿ ಜನಾಂದೋಲನಕ್ಕೆ ನಿರ್ಧಾರ    |   

Sitaram Yechury death; 40 ವರ್ಷಗಳಿಂದ ದೇಶದ ರಾಜಕಾರಣದಲ್ಲಿದ್ದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನ 

12-09-24 09:12 pm       HK News Desk   ದೇಶ - ವಿದೇಶ

ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್​ವಾದ) ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ನಾಯಕರಾದ ಸೀತಾರಾಂ ಯೆಚೂರಿ (72) ಅವರು ಅನಾರೋಗ್ಯದ ಬಳಿಕ ದೆಹಲಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ನವದೆಹಲಿ, ಸೆ.12: ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್​ವಾದ) ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ನಾಯಕರಾದ ಸೀತಾರಾಂ ಯೆಚೂರಿ (72) ಅವರು ಅನಾರೋಗ್ಯದ ಬಳಿಕ ದೆಹಲಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಆಗಸ್ಟ್ 19ರಂದು ನ್ಯುಮೋನಿಯಾ, ಎದೆ ಸೋಂಕಿನ ಚಿಕಿತ್ಸೆಗಾಗಿ ಅವರನ್ನು ನವದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್​ನಲ್ಲಿ ಇರಿಸಿದ್ದ ವೈದ್ಯರು, ಅವರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. 

40 ವರ್ಷಗಳಿಂದ ದೇಶದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಅವರು, 32 ವರ್ಷಗಳಿಂದ ಸಿಪಿಎಂ ಕೇಂದ್ರೀಯ ಸಮಿತಿ ಪಾಲಿಟ್ ಬ್ಯೂರೊ ಸದಸ್ಯರಾಗಿದ್ದರು. 2015ರಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2005-2017ರ ವರೆಗೆ ಪಶ್ಚಿಮ ಬಂಗಾಳದಿಂದ ರಾಜ್ಯಸಭಾ ಸದಸ್ಯರಾಗಿಯೂ ಆಯ್ಕೆಗೊಂಡಿದ್ದರು.

1952ರ ಆಗಸ್ಟ್‌ 12ರಂದು ಚೆನ್ನೈನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರ ಮೂಲ ಹೆಸರು, ಯೆಚೂರಿ ಸೀತಾರಾಮ ರಾವ್. ಸಿಪಿಎಂನ ಮೊದಲ ಪ್ರಧಾನ ಕಾರ್ಯದರ್ಶಿ ಪಿ. ಸುಂದರಯ್ಯ (ಸುಂದರ ರಾಮ ರೆಡ್ಡಿ) ಅವರಿಂದ ಪ್ರಭಾವಿತರಾಗಿ, ತಮ್ಮ ಹೆಸರಿನಲ್ಲಿದ್ದ ಜಾತಿ ಸೂಚಕ ನಾಮವನ್ನು ತೆಗೆದು ಸೀತಾರಾಂ ಯೆಚೂರಿ ಎಂದು ಬದಲಿಸಿದ್ದರು. ಕಮ್ಯುನಿಸ್ಟ್ ತತ್ವಗಳ ವಿಚಾರದಲ್ಲಿ ಅವರು ನಿಷ್ಠುರವಾದಿಯಾಗಿದ್ದರು.

Veteran Left leader and CPM general secretary Sitaram Yechury died this afternoon. He was 72 and was undergoing treatment for pneumonia at Delhi's All India Institute of Medical Sciences (AIIMS). The CPM leader was admitted to the emergency ward of AIIMS on August 19 and later shifted to the Intensive Care Unit (ICU).