ಬ್ರೇಕಿಂಗ್ ನ್ಯೂಸ್
18-09-24 11:03 am HK News Desk ದೇಶ - ವಿದೇಶ
ಜಿಂಬಾಬ್ವೆ , ಸೆ 17: ಆಫ್ರಿಕಾ ಖಂಡದ ದಕ್ಷಿಣ ಭಾಗದ ದೇಶಗಳು ಕಂಡರಿಯದ ಬರಗಾಲ ಎದುರಿಸುತ್ತಿವೆ. ಜನರು ಹಸಿವಿನಿಂದ ವಿಲವಿಲ ಒದ್ದಾಡುವ ಪರಿಸ್ಥಿತಿ ತಲೆದೋರಿದೆ. ಜನರ ಹಸಿವು ನೀಗಿಸುವ ಉದ್ದೇಶದಿಂದ ಇದೀಗ ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳು ನೂರಾರು ಕಾಡಾನೆಗಳು ಹಾಗು ಇತರೆ ಪ್ರಾಣಿಗಳ ಹತ್ಯೆಗೆ ನಿರ್ಧಾರ ಕೈಗೊಂಡಿವೆ. ಇವುಗಳ ಮಾಂಸದಿಂದ ಜನರ ಹಸಿವು ನೀಗಿಸಲು ಮುಂದಾಗಿವೆ.
"ನಾವು ಸುಮಾರು 200 ಆನೆಗಳನ್ನು ಕೊಲ್ಲುತ್ತೇವೆ. ಅವುಗಳ ಮಾಂಸವನ್ನು ಅವಶ್ಯವಿರುವ ಸಮುದಾಯಗಳ ಜನರಿಗೆ ಹಂಚುತ್ತೇವೆ" ಎಂದು ಜಿಂಬಾಬ್ವೆ ಸೋಮವಾರ ತಿಳಿಸಿದೆ. ಇದೇ ರೀತಿ ನಮೀಬಿಯಾ ದೇಶ ಕೂಡಾ ವಾರದ ಹಿಂದೆ ಇಂಥದ್ದೇ ಕ್ರಮಕ್ಕೆ ಮುಂದಾಗಿತ್ತು. 700ಕ್ಕೂ ಹೆಚ್ಚು ಕಾಡುಪ್ರಾಣಿಗಳನ್ನು ಕೊಲ್ಲಲು ನಿರ್ಧರಿಸಿತ್ತು. ಈ ಪೈಕಿ 83 ಆನೆಗಳನ್ನು ಕೊಲ್ಲುವ ಕಾರ್ಯ ಅಲ್ಲಿ ನಡೆಯುತ್ತಿದೆ.
ಜಿಂಬಾಬ್ವೆ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ನಿರ್ವಹಣಾ ಪ್ರಾಧಿಕಾರದ ವಕ್ತಾರ ತಿನಶೆ ಫರವೊ ಪ್ರತಿಕ್ರಿಯಿಸಿ, "ನಾವು ಅವಶ್ಯವಿರುವ ಸಮುದಾಯದ ಜನರಿಗೆ ಪ್ರಾಣಿಗಳನ್ನು ಬೇಟೆಯಾಡಲು ಅನುಮತಿ ನೀಡುತ್ತೇವೆ. ಅದೇ ರೀತಿ ಹಂಚಿಕೆಯಾದ 200 ಪ್ರಾಣಿಗಳನ್ನು ನಮ್ಮ ಪ್ರಾಧಿಕಾರ ಕೊಲ್ಲಲಿದೆ. ಅನುಮತಿ ಪತ್ರ ವಿತರಿಸಿದ ನಂತರ ಪ್ರಾಣಿಗಳನ್ನು ಹತ್ಯೆ ಮಾಡುವ ಕೆಲಸ ಪ್ರಾರಂಭಿಸುತ್ತೇವೆ" ಎಂದು ಹೇಳಿದರು
ಈ ಆನೆಗಳನ್ನು ಜನರು ಬದುಕಲು ಕಷ್ಟಪಡುತ್ತಿರುವ ಪ್ರದೇಶಗಳಿಗೆ ಕೊಂಡೊಯ್ಯಲಾಗುವುದು ಎಂದು ಫರವೊ ತಿಳಿಸಿದರು. ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿರುವ ಹಾಗು ಮಾನವ ಮತ್ತು ವನ್ಯಜೀವಿಗಳ ನಡುವೆ ಆಹಾರ ಮತ್ತು ನೀರಿಗೆ ಸಂಘರ್ಷ ನಡೆಯುತ್ತಿರುವ ದೇಶದ ಪಶ್ಚಿಮ ಶುಷ್ಕ ಪ್ರದೇಶವಾದ ಹ್ವಾಂಗೆ ರಾಷ್ಟ್ರೀಯ ಉದ್ಯಾನವನ ಮುಂತಾದೆಡೆ ಆನೆಗಳ ಹತ್ಯೆ ಕೆಲಸ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದರು.
ಹ್ವಾಂಗೆ ಪ್ರದೇಶ 45,000ಕ್ಕೂ ಹೆಚ್ಚು ಆನೆಗಳನ್ನು ಹೊಂದಿದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಕೇವಲ 15,000 ಆನೆಗಳನ್ನು ಹೊಂದುವ ಸಾಮರ್ಥ್ಯವಷ್ಟೇ ಇದೆ. ದೇಶದಲ್ಲಿ ಒಟ್ಟು 100,000 ಆನೆಗಳಿದ್ದು, ಇದು ದೇಶದ ರಾಷ್ಟ್ರೀಯ ಉದ್ಯಾನವನ ಸಾಮರ್ಥ್ಯದ ಎರಡು ಪಟ್ಟು ಹೆಚ್ಚು ಎಂದು ಉದ್ಯಾನವನದ ಅಧಿಕಾರಿಗಳು ಹೇಳಿದ್ದಾರೆ.
ಎಲ್ ನಿನೋ ಹವಾಮಾನ ಪ್ರಕ್ರಿಯೆಯು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಉದ್ಯಾನವನದ ಅಧಿಕಾರಿಗಳು ಕಳೆದ ಡಿಸೆಂಬರ್‌ನಲ್ಲಿ ಹೇಳಿರುವಂತೆ, ಬರಗಾಲದಿಂದಾಗಿ 100ಕ್ಕೂ ಹೆಚ್ಚು ಆನೆಗಳನ್ನು ಸಾವನ್ನಪ್ಪಿವೆ. ದೇಶವು ಮುಂಬರುವ ದಿನಗಳಲ್ಲಿ ಅತ್ಯಂತ ಹೆಚ್ಚು ತಾಪಮಾನ ಎದುರಿಸಲಿದ್ದು, ನೀರು, ಆಹಾರ ಸಿಗದೆ ಇನ್ನೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಫರವೊ ತಿಳಿಸಿದರು.
ಜಿಂಬಾಬ್ವೆಯ ಪರಿಸರ ಖಾತೆ ಸಚಿವೆ ಸಿಥೆಂಬಿಸೊ ನ್ಯಾನಿ, ಕಳೆದ ವಾರ ಸಂಸತ್ತಿನಲ್ಲಿ ಮಾತನಾಡುತ್ತಾ, ದೇಶದಲ್ಲಿ ನಮ್ಮ ಅವಶ್ಯಕತೆಗಿಂತ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಇವುಗಳನ್ನು ನಮ್ಮ ಅರಣ್ಯ ಪ್ರದೇಶಗಳು ತಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಆನೆಗಳನ್ನು ಕೊಲ್ಲಲು ಅನುಮತಿ ನೀಡಿದ್ದೇನೆ ಎಂದು ಹೇಳಿದ್ದಾರೆ. ಆನೆಗಳನ್ನು ಕೊಂದು ಅವುಗಳ ಮಾಂಸವನ್ನು ಒಣಗಿಸಿ ಪೊಟ್ಟಣದಲ್ಲಿ ಪ್ಯಾಕ್ ಮಾಡಿ ಅವಶ್ಯವಿರುವ ಸಮುದಾಯದ ಜನರಿಗೆ ವಿತರಿಸುತ್ತೇವೆ. ಈ ಮೂಲಕ ಹಸಿವಿನಿಂದ ನರಳುತ್ತಿರುವ ಜನರಿಗೆ ಕೆಲವು ಪ್ರಮಾಣದ ಪ್ರೋಟೀನ್ ದೊರೆಯುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು.
Zimbabwe and Namibia are set to kill hundreds of elephants and other animals to help fight hunger among their citizens as both countries face severe drought. Zimbabwe announced on Monday that it will allow the killing of 200 elephants to distribute their meat to needy communities. Namibia has already begun the process to kill over 700 wild animals, including 83 elephants, under a plan revealed three weeks ago.
10-12-24 10:47 pm
HK News Desk
Panchamasali Protest, Belagavi: ಬೆಳಗಾವಿ ಸುವರ್...
10-12-24 10:32 pm
Murudeshwara beach drowning bhatkal: ಮುರ್ಡೇಶ್...
10-12-24 10:03 pm
SM krishna school holiday: ಎಸ್ಸೆಂ ಕೃಷ್ಣ ನಿಧನ...
10-12-24 11:48 am
SM Krishna Death, Wikipedia; ಬೆಂಗಳೂರಿಗೆ 'ಸಿಲಿ...
10-12-24 11:34 am
10-12-24 10:57 pm
HK News Desk
Idli Guru, Franchise Fraud, Owner Karthik She...
09-12-24 10:12 pm
Assad dynasty; ಸಿರಿಯಾದಲ್ಲಿ 54 ವರ್ಷಗಳ ವಂಶಾಡಳಿತ...
09-12-24 12:17 pm
ಮೇಕ್ ಇನ್ ಇಂಡಿಯಾ ಬಗ್ಗೆ ಪುಟಿನ್ ಮೆಚ್ಚುಗೆ ; ಭಾ...
05-12-24 11:00 pm
Devendra Fadnavis, Maharashtra New CM; 'ಮಹಾ'...
04-12-24 01:29 pm
10-12-24 09:37 pm
Mangalore Correspondent
Ranjith Ballal Bike Accident, Kundapur, Manga...
09-12-24 11:05 pm
Swamiji, Mangalore, Waqf: ಬಾಂಗ್ಲಾ ವಿರುದ್ಧ ಇಸ್...
09-12-24 07:40 pm
Ullal, Mangalore, Accident, Netravathi bridge...
09-12-24 06:03 pm
ಜೋಕಾಲಿಗೆ ಸಿಲುಕಿ 3ನೇ ತರಗತಿ ಬಾಲಕಿ ಸಾವಿನ ಸುದ್ದಿಗ...
09-12-24 03:26 pm
10-12-24 11:18 pm
Mangalore Correspondent
Mangalore crime, Kadri police, robbery: ಕಂಕನಾ...
10-12-24 06:46 pm
ಕೇವಲ ಎಂಟು ತಿಂಗಳಲ್ಲಿ 300ಕ್ಕೂ ಹೆಚ್ಚು ಯುವಕರಿಗೆ ವ...
10-12-24 03:59 pm
Chikkamagaluru murder: ಸೋಶಿಯಲ್ ಮೀಡಿಯಾದಲ್ಲಿ ಪರ...
08-12-24 05:02 pm
ಷೇರು ಹೂಡಿಕೆ ಹೆಸರಲ್ಲಿ ಸೈಬರ್ ವಂಚಕರ ಮೋಸ ; ನಕಲಿ ಟ...
07-12-24 09:48 pm