ಬ್ರೇಕಿಂಗ್ ನ್ಯೂಸ್
19-09-24 11:42 am HK News Desk ದೇಶ - ವಿದೇಶ
ನವದೆಹಲಿ, ಸೆ.19: ಪೇಜರ್ ಸ್ಫೋಟದಿಂದ ಕಂಗೆಟ್ಟಿರುವ ಲೆಬನಾನ್ ರಾಜಧಾನಿ ಬೀರತ್ ನಲ್ಲಿ ಹೆಜ್ಬುಲ್ಲಾ ಉಗ್ರರು ಬಳಸುತ್ತಿದ್ದ ವಾಕಿಟಾಕಿ ಮತ್ತು ಸೋಲಾರ್ ಸಲಕರಣೆಗಳು ದಿಢೀರ್ ಸ್ಫೋಟಗೊಂಡಿದ್ದು, 20 ಜನರು ಮೃತಪಟ್ಟು, 450ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಮೆಸೆಂಜರ್ ಆಗಿ ಬಳಸುತ್ತಿದ್ದ ಪೇಜರ್ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡು 12 ಜನ ಸಾವನ್ನಪ್ಪಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ದೇಶಾದ್ಯಂತ ಎಲೆಕ್ಟ್ರಾನಿಕ್ಸ್ ಸಂವಹನ ಸಾಧನಗಳಾದ ವಾಕಿಟಾಕಿ ಬ್ಲಾಸ್ಟ್ ಆಗಿದ್ದು ಹೆಜ್ಬುಲ್ಲಾ ಬಂಡುಕೋರರನ್ನು ನಿಂತಲ್ಲೇ ಉಡುಗಿಸಿ ಹಾಕಿದೆ. ಹೆಜ್ಬುಲ್ಲಾವನ್ನು ಗುರಿಯಾಗಿಸಿ ಇಸ್ರೇಲ್ ಈ ದಾಳಿ ನಡೆಸಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ, 'ನಾವು ಯುದ್ಧದ ಹೊಸ ತಂತ್ರಗಾರಿಕೆಯನ್ನು ಆರಂಭಿಸಿದ್ದೇವೆ. ದೇಶದ ಉತ್ತರ ಭಾಗಗಳಿಗೆ ಸೇನೆ ಹಾಗೂ ಸಂಪನ್ಮೂಲಗಳನ್ನು ಕಳುಹಿಸುತ್ತಿದ್ದೇವೆ. ಇಸ್ರೇಲ್ನ ಉತ್ತರ ಭಾಗದ ಜನರು ಸುರಕ್ಷಿತವಾಗಿ ಮನೆಗೆ ಮರಳಲು ಎಲ್ಲ ಕ್ರಮ ಕೈಗೊಳ್ಳಲು ಭದ್ರತಾ ವ್ಯವಸ್ಥೆ ಬಲಿಷ್ಠಗೊಳಿಸಿದ್ದೇವೆ ಎಂದು ಇಸ್ರೇಲ್ ರಕ್ಷಣಾ ಸಚಿವರು ಪೋಸ್ಟ್ ಮಾಡಿದ್ದಾರೆ.
ವಿಶೇಷ ಅಂದರೆ, ಮಂಗಳವಾರ ಪೇಜರ್ ಸ್ಫೋಟ ದಿಂದ ಮೃತಪಟ್ಟ ಹೆಜ್ಬುಲ್ಲಾ ಸಂಘಟನೆಯ ನಾಲ್ವರು ಪ್ರಮುಖರ ಅಂತಿಮ ಸಂಸ್ಕಾರ ಬೈರೂತ್‌ನಲ್ಲಿ ನಡೆಯುತ್ತಿದ್ದಾಗಲೇ ವಾಕಿಟಾಕಿ ಸ್ಫೋಟಗೊಂಡಿದೆ. ಅಂತ್ಯ ಸಂಸ್ಕಾರಕ್ಕೂ ಮುನ್ನ ಮೆರವಣಿಗೆ ಹೋಗುತ್ತಿದ್ದಾಗ ದಿಢೀರ್ ವಾಕಿ-ಟಾಕಿಗಳು ಸ್ಫೋಟಗೊಂಡಿವೆ. ಹಲವರು ಗಾಯಗೊಂಡಿದ್ದು, ಜಾಲತಾಣಗಳಲ್ಲಿ ಇದರ ವೀಡಿಯೋ ವೈರಲ್ ಆಗಿದೆ. ಪೇಜರ್ ಸ್ಫೋಟದಿಂದ ಮೃತರಲ್ಲಿ ಲೆಬನಾನ್ ಸಂಸದನೊಬ್ಬನ ಮಗನೂ ಸೇರಿದ್ದ. ಅಭಿಮಾನಿಗಳು ಶವವನ್ನು ವಾಹನದಲ್ಲಿಟ್ಟು ನಮನ ಸಲ್ಲಿಸುತ್ತಿದ್ದಾಗ ವಾಕಿ ಟಾಕಿ ಹಿಡಿದುಕೊಂಡಿದ್ದವರು ಸ್ಫೋಟಿಸಿದ್ದು ಜನರು ಬೆಚ್ಚಿಬಿದ್ದಿದ್ದಾರೆ.
ಲೆಬನಾನ್‌ನಲ್ಲಿ ವಾಕಿ ಟಾಕಿ ಸ್ಫೋಟ ನಂತರ ಗಾಯಗೊಂಡವರನ್ನು ರಕ್ಷಿಸಲು ಮತ್ತು ಸ್ಥಳಾಂತರಿಸಲು ಲೆಬನಾನಿನ ರೆಡ್‌ಕ್ರಾಸ್ ಇನ್ನಿತರ ಸಂಘಟನೆಗಳ ಸ್ವಯಂಸೇವಕರು ಆಂಬುಲೆನ್ಸ್ ಜೊತೆಗೆ ಶ್ರಮಿಸಿದ್ದಾರೆ. ವಾಕಿ ಟಾಕಿಗಳು ಮತ್ತು ಸೋಲಾರ್ ಬ್ಯಾಟರಿಗಳು ಸ್ಫೋಟಗೊಂಡ ಪರಿಣಾಮ 60 ಮನೆಗಳು ಮತ್ತು ಅಂಗಡಿಗಳು ಬೆಂಕಿ ಹತ್ತಿಕೊಂಡು ಸುಟ್ಟುಹೋಗಿವೆ. ಅಂಗಡಿ, ಮನೆಗಳಲ್ಲಿ ಬಳಸುತ್ತಿದ್ದ ಲೀಥಿಯಂ ಬ್ಯಾಟರಿ ಹೊತ್ತಿ ಉರಿದಿದೆ. ಬ್ಯಾಟರಿ ಚಾಲಿತ ಕಾರುಗಳು ಕೂಡ ದಿಢೀರ್ ಬೆಂಕಿ ಹತ್ತಿಕೊಂಡು ಸುಟ್ಟು ಹೋಗಿವೆ. 15 ಕಾರುಗಳು ಮತ್ತು 50ಕ್ಕೂ ಹೆಚ್ಚು ಮೋಟರ್ ಸೈಕಲ್‌ಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಅಪ್ರಚೋದಿತ ದಾಳಿಯಾದ ಬಳಿಕ ಗಾಜಾ ಪಟ್ಟಿ, ಪ್ಯಾಲೆಸ್ತೀನ್, ಲೆಬನಾನ್, ಹೆಜ್ಬುಲ್ಲಾ ಮತ್ತು ಹೌತಿ ಬಂಡುಕೋರ ಉಗ್ರರ ಮೇಲೆ ಇಸ್ರೇಲ್ ಪ್ರತಿ ದಾಳಿ ನಡೆಸುತ್ತಿದೆ. ನೇರ ಮತ್ತು ಗೆರಿಲ್ಲಾ ಯುದ್ಧ ತಂತ್ರಗಾರಿಕೆಯಿಂದ ಸುತ್ತಮುತ್ತಲಿನ ರಾಷ್ಟ್ರಗಳು ಬೆಚ್ಚಿ ಬಿದ್ದಿವೆ. ಇದೀಗ ತಂತ್ರಜ್ಞಾನ ಆಧರಿಸಿ ಉಗ್ರರು ಬಳಸುವ ಸಾಧನಗಳನ್ನೇ ಇಸ್ರೇಲ್ ಸೈನಿಕರು ಸ್ಫೋಟಿಸುತ್ತಿದ್ದಾರೆ. ಈವರೆಗೆ 41 ಸಾವಿರ ಪ್ಯಾಲೆಸ್ತೇನಿಯರು ಹತರಾಗಿದ್ದಾರೆ ಎಂಂದು ಗಾಜಾ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಇಸ್ರೇಲ್ ಈವರೆಗೆ 17 ಸಾವಿರ ಉಗ್ರರನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ.
Walkie-talkies and solar equipment exploded in Beirut and other parts of Lebanon on Wednesday in an apparent second wave of attacks targeting devices a day after pagers used by Hezbollah blew up, state media and officials for the militant group said. At least 20 people were killed and more than 450 wounded in the second wave, the Health Ministry said.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm