ಬ್ರೇಕಿಂಗ್ ನ್ಯೂಸ್

Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ದೌರ್ಜನ್ಯ ; ಬೇಕಲ ಶಿಕ್ಷಣಾಧಿಕಾರಿ, ರೈಲ್ವೇ ಉದ್ಯೋಗಿ, ಜಮಾತೆ ಇಸ್ಲಾಮಿ, ಲೀಗ್ ಕಾರ್ಯಕರ್ತರು ಸೇರಿ ಹತ್ತು ಮಂದಿ ಪೊಲೀಸ್ ಬಲೆಗೆ, ಕಾಸರಗೋಡಿನಲ್ಲಿ ಸಂಚಲನ ಮೂಡಿಸಿದ ಪ್ರಕರಣ     |    ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆ    |    Mahesh Shetty Timarodi, Arms, FIR: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿಯಲ್ಲಿ ಮತ್ತೊಂದು ಎಫ್ಐಆರ್, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲು    |   

Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ದೌರ್ಜನ್ಯ ; ಬೇಕಲ ಶಿಕ್ಷಣಾಧಿಕಾರಿ, ರೈಲ್ವೇ ಉದ್ಯೋಗಿ, ಜಮಾತೆ ಇಸ್ಲಾಮಿ, ಲೀಗ್ ಕಾರ್ಯಕರ್ತರು ಸೇರಿ ಹತ್ತು ಮಂದಿ ಪೊಲೀಸ್ ಬಲೆಗೆ, ಕಾಸರಗೋಡಿನಲ್ಲಿ ಸಂಚಲನ ಮೂಡಿಸಿದ ಪ್ರಕರಣ 

18-09-25 11:44 am       HK News Desk   ಕ್ರೈಂ

ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾಗಿದ್ದ ಅಪ್ರಾಪ್ತ ಬಾಲಕನ ಮೇಲೆ ಸಲಿಂಗರತಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬೇಕಲ ಉಪ ವಿಭಾಗ ಶಿಕ್ಷಣಾಧಿಕಾರಿ ಸಹಿತ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಕಾಸರಗೋಡು, ಸೆ.18 : ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾಗಿದ್ದ ಅಪ್ರಾಪ್ತ ಬಾಲಕನ ಮೇಲೆ ಸಲಿಂಗರತಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬೇಕಲ ಉಪ ವಿಭಾಗ ಶಿಕ್ಷಣಾಧಿಕಾರಿ ಸಹಿತ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಬೇಕಲ ಉಪ ವಿಭಾಗದ ಶಿಕ್ಷಣಾಧಿಕಾರಿ ಸೈನುದ್ದೀನ್ ವಿ.ಕೆ. (52), ರೈಲ್ವೇ ಉದ್ಯೋಗಿ, ರಾಜ್ಯ ಮಟ್ಟದ ಫುಟ್ಬಾಲ್ ತರಬೇತಿದಾರ ಪಿಲಿಕೋಡ್ ನಿವಾಸಿ ಚಿತ್ರರಾಜ್ (48),  ತ್ರಿಕರಿಪುರದ ವಲ್ಲಕಾಡ್ ಮೂಲದ ಜಮಾತೆ ಇಸ್ಲಾಮಿ ಕಾರ್ಯಕರ್ತ ಕುಂಞಹ್ಮದ್(55), ಪಿಲಿಕೋಡ್ ಪಂಚಾಯತಿ ವೆಲ್ಲಚಾಲ್ ನಿವಾಸಿ ಸುಕೇಶ್ (30), ಚಂದೇರಾ ನಿವಾಸಿ ಅಫ್ಸಲ್(23), ಚೀಮೇನಿ ನಿವಾಸಿ ಶಿಜಿತ್ (36), ತ್ರಿಕರಿಪುರದ ವಡಕೆ ಕೊವ್ವಲ್‌ನ ರಾಯೀಸ್ (30), ಪಡನ್ನಕ್ಕಾಡ್‌ನ ರಂಜಾನ್ (64) ಹಾಗೂ ಚೀಮೇನಿಯ ನಾರಾಯಣನ್ ಚಂಬ್ರಕಾನಂ (60) ಬಂಧಿತ ಆರೋಪಿಗಳಾಗಿದ್ದಾರೆ.

ಕಾಸರಗೋಡು, ಕಣ್ಣೂರು, ಕೋಝಿಕೋಡ್ ಮತ್ತು ಎರ್ನಾಕುಲಂ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ದಾಖಲಾಗಿರುವ 16 ಪ್ರಕರಣಗಳಲ್ಲಿ ಒಟ್ಟಾರೆಯಾಗಿ 16 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಬಾಲಕ ವಯಸ್ಕರಿಗೆ ಮಾತ್ರ ನಿಗದಿಯಾಗಿದ್ದ ಡೇಟಿಂಗ್ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡಿದ್ದು ತನಗೆ 18 ವರ್ಷ ಎಂದು ತೋರಿಸಿದ್ದ. ಆ್ಯಪ್ ಮೂಲಕ ಸಂಪರ್ಕ ಸಾಧಿಸಿದ್ದ 16 ಮಂದಿ ಈ ಬಾಲಕನ ಮೇಲೆ ಕಳೆದ ಎರಡು ವರ್ಷಗಳಿಂದ ಸಲಿಂಗರತಿ ದೌರ್ಜನ್ಯ ಎಸಗಿದ್ದಾರೆ. 

ಚಂದೇರಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಂಟು ಪ್ರಕರಣಗಳಲ್ಲಿ ಹತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಎರ್ನಾಕುಲಂ, ಕಣ್ಣೂರು, ಕೋಜಿಕ್ಕೋಡ್ ಜಿಲ್ಲೆಗಳಲ್ಲಿ ಆರು ಪ್ರಕರಣ ದಾಖಲಾಗಿದೆ. ‌ಆರೋಪಿಗಳ ಪೈಕಿ ತ್ರಿಕ್ಕರಿಪುರ ಮೂಲದ ಯುವ ಲೀಗ್ ನಾಯಕ ಸಿರಾಜುದ್ದೀನ್ ನಿರೀಕ್ಷಣ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾನೆ. 

ಪ್ರಕರಣದಲ್ಲಿ ಬಂಧಿತರಾಗಿರುವ ಬೇಕಲ ಉಪಜಿಲ್ಲಾ ಶಿಕ್ಷಣಾಧಿಕಾರಿ ವಿ.ಕೆ.ಸೈನುದ್ದೀನ್‌ ಅವರನ್ನು ಶಿಕ್ಷಣ ಸಚಿವ ವಿ.ಶಿವನ್‌ ಕುಟ್ಟಿ ಸೂಚನೆ ಮೇರೆಗೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪಡನ್ನಕ್ಕಾಡು ನಿವಾಸಿ ಸೈನುದ್ದೀನ್‌‌ನನ್ನು ಪೋಕ್ಸೋ ಕಾಯಿದೆಯಡಿ ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿಯನ್ನು ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 

ಇದೇ ವೇಳೆ, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಆರ್‌ಪಿಎಫ್ ಅಧಿಕಾರಿ ಚಿತ್ರರಾಜ್ ಬಂಧನ ಎಂಬ ಮಾಧ್ಯಮಗಳಲ್ಲಿ ಬಂದ ವರದಿ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ಆರೋಪಿ ಚಿತ್ರರಾಜ್ ಸೇವೆಯಲ್ಲಿರುವ ಆರ್‌ಪಿಎಫ್ ಅಧಿಕಾರಿಯಲ್ಲ ಮತ್ತು ರೈಲ್ವೆ ರಕ್ಷಣಾ ಪಡೆಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. 

ಇತ್ತೀಚೆಗೆ ಬಾಲಕನಲ್ಲಿ ಬದಲಾದ ನಡವಳಿಕೆ ಮತ್ತು ಅಪರಿಚಿತ ವ್ಯಕ್ತಿಗಳ ಸಂಪರ್ಕದಿಂದಾಗಿ ತಾಯಿ ಅನುಮಾನಗೊಂಡು ಪ್ರಶ್ನೆ ಮಾಡಿದ್ದರು. ಈ ವೇಳೆ, ಬಾಲಕ ತನ್ನನ್ನು ಹಲವಾರು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದು ಇದರಂತೆ ತಾಯಿ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ.

A shocking case of child sexual abuse has rocked Kasargod, where police have arrested 10 individuals, including a sub-divisional education officer, a railway employee, a football coach, and political workers linked to Jamaat-e-Islami and the Muslim League.