CM Chandrababu Naidu, Tirupati laddoos: ತಿರುಪತಿ ಲಡ್ಡು ತಯಾರಿಗೆ ಪ್ರಾಣಿಜನ್ಯ ಕೊಬ್ಬು, ಮೀನಿನೆಣ್ಣೆ ಬಳಕೆ ; ದೇಶದಲ್ಲಿ ಸಂಚಲನ ಸೃಷ್ಟಿಸಿದ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ 

19-09-24 09:51 pm       HK News Desk   ದೇಶ - ವಿದೇಶ

ತಿರುಪತಿ ವೆಂಕಟರಮಣ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ಭಾರೀ ಫೇಮಸ್. ಲಕ್ಷಾಂತರ ಭಕ್ತರು ಲಡ್ಡುಗಳನ್ನೇ ಪ್ರಸಾದ ರೂಪದಲ್ಲಿ ಪಡೆಯುತ್ತಾರೆ.

ಹೈದರಾಬಾದ್, ಸೆ.19: ತಿರುಪತಿ ವೆಂಕಟರಮಣ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ಭಾರೀ ಫೇಮಸ್. ಲಕ್ಷಾಂತರ ಭಕ್ತರು ಲಡ್ಡುಗಳನ್ನೇ ಪ್ರಸಾದ ರೂಪದಲ್ಲಿ ಪಡೆಯುತ್ತಾರೆ. ಆದರೆ ಈ ಲಡ್ಡುವನ್ನು ತಯಾರಿಸಲು ದನದ ಕೊಬ್ಬು, ಮೀನಿನ ಎಣ್ಣೆ ಬಳಸಲಾಗುತ್ತಿತ್ತು ಎನ್ನುವುದು ಪರೀಕ್ಷೆಯಲ್ಲಿ ದೃಢವಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. 

ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಬುಧವಾರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಆಘಾತಕಾರಿ ಟೆಸ್ಟ್‌ ರಿಪೋರ್ಟ್‌ ಹೊರ ಬಂದಿದ್ದು ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ, ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿ ಪಕ್ಷ ಈ ಆರೋಪವನ್ನು ನಿರಾಕರಿಸಿದೆ. ತಿರುಪತಿ ಲಡ್ಡು ಪ್ರಸಾದವನ್ನು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ತಯಾರಿಸುತ್ತದೆ. 

Making of Special Tirumala Tirupati Laddu Recipe - World Famous Indian  Sweet | Live Food

"ತಿರುಮಲ ಲಡ್ಡುವನ್ನು ಗುಣಮಟ್ಟ ರಹಿತ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬನ್ನು ಇದಕ್ಕಾಗಿ ಬಳಸಿದ್ದಾರೆ ಎಂದು ನಾಯ್ಡು ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದು ಸಂಕಲನಕ್ಕೆ ಕಾರಣವಾಗಿದೆ. ಅಲ್ಲದೆ, ಈಗ ಶುದ್ಧ ತುಪ್ಪವನ್ನು ಲಡ್ಡು ತಯಾರಿಕೆ ಬಳಸಲಾಗುತ್ತಿದೆ ಮತ್ತು ದೇವಸ್ಥಾನದಲ್ಲಿ ಎಲ್ಲವನ್ನೂ ಶುದ್ಧೀಕರಿಸಲಾಗಿದೆ. ಇದು ಸುಧಾರಿತ ಮತ್ತು ಗುಣಮಟ್ಟದ ಬದಲಾವಣೆಗೆ ಕಾರಣವಾಗುತ್ತದೆ ಎಂದು ನಾಯ್ಡು ತಿಳಿಸಿದ್ದಾರೆ.

ಹಿರಿಯ ವೈಎಸ್‌ಆರ್‌ಸಿಪಿ ನಾಯಕ ಮತ್ತು ಮಾಜಿ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ನಾಯ್ಡು ಸಿಎಂ ಚಂದ್ರಬಾಬು ನಾಯ್ಡು ಆರೋಪವನ್ನು "ದುರುದ್ದೇಶಪೂರಿತ" ಎಂದು ಬಣ್ಣಿಸಿದ್ದಾರೆ ಮತ್ತು ಟಿಡಿಪಿ ವರಿಷ್ಠರು "ರಾಜಕೀಯ ಲಾಭಕ್ಕಾಗಿ ಯಾವುದೇ ಹಂತಕ್ಕೆ ಇಳಿಯುತ್ತಾರೆ" ಎಂದು ಆರೋಪಿಸಿದ್ದಾರೆ.

Andhra Pradesh Chief Minister N Chandrababu Naidu has accused the previous YSRCP government of using substandard ingredients, including animal fat, in the preparation of the famed Tirupati laddoos, a sacred sweet offered at the Sri Venkateswara temple in Tirupati.