ಬ್ರೇಕಿಂಗ್ ನ್ಯೂಸ್
25-09-24 05:36 pm HK News Desk ದೇಶ - ವಿದೇಶ
Photo credits : Manorama web
ಅಂಕೋಲಾ, ಸೆ.25: ಅಂಕೋಲಾದ ಶಿರೂರು ಬಳಿಯ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದ ಲಾರಿ ಮತ್ತು ಅದರ ಚಾಲಕ ಕೇರಳದ ಅರ್ಜುನ್ ಮೃತದೇಹ ಕಡೆಗೂ 72 ದಿನಗಳ ಬಳಿಕ ಪತ್ತೆಯಾಗಿದೆ. ನದಿಯ ಆಳದಲ್ಲಿರುವ ಲಾರಿಯ ಒಳಗಡೆ ಅರ್ಜುನ್ ಮೃತದೇಹದ್ದು ಎನ್ನಲಾದ ಕಳೇಬರದ ಅವಶೇಷ ಪತ್ತೆಯಾಗಿದೆ. ಸ್ಥಳದಲ್ಲಿ ಮುಳುಗು ತಜ್ಞರು, ಜಿಲ್ಲಾಡಳಿತದ ಅಧಿಕಾರಿಗಳು, ಕೇರಳದ ಅರ್ಜುನ್ ಕುಟುಂಬಸ್ಥರು ಬೀಡು ಬಿಟ್ಟಿದ್ದಾರೆ.
ಜುಲೈ 16ರಂದು ಗುಡ್ಡ ಕುಸಿತ ನಡೆದ ಬಳಿಕ ಭಾರೀ ಮಳೆಯ ನಡುವೆ ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆದಿತ್ತು. ಕೇರಳದ ಮಾಧ್ಯಮಗಳು ಅರ್ಜುನ್ ಬರುವಿಕೆಗಾಗಿ ಮನ ಮಿಡಿಯುವ ರೀತಿಯ ಸುದ್ದಿಗಳನ್ನು ಬಿತ್ತರಿಸಿತ್ತು. 24 ಗಂಟೆಗಳ ಕಾಲ ಮಲಯಾಳ ಮಾಧ್ಯಮಗಳ ಸುದ್ದಿ ಪ್ರಸಾರದಿಂದ ಶಿರೂರು ಗುಡ್ಡ ಕುಸಿತ ದೇಶದ ಗಮನ ಸೆಳೆಯುವಂತಾಗಿತ್ತು. ಆನಂತರ, ವಯನಾಡು ಗುಡ್ಡ ಕುಸಿತದ ಘಟನೆಯ ಬಳಿಕ ಶಿರೂರು ಕಾರ್ಯಾಚರಣೆ ನಿಂತಿದ್ದಲ್ಲದೆ, ಮಲಯಾಳ ಮಾಧ್ಯಮಗಳ ಕಣ್ಣು ಕೂಡ ವಯನಾಡಿನತ್ತ ತಿರುಗಿತ್ತು. ಇತ್ತ ಕರ್ನಾಟಕ ಸರಕಾರವೂ ಭಾರೀ ಮಳೆಯ ಕಾರಣವೊಡ್ಡಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.
ಇದೀಗ ಮಳೆ ಕಡಿಮೆಯಾಗುತ್ತಿದ್ದಂತೆ ನದಿಯಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಹೀಗಾಗಿ ಉಡುಪಿಯ ಈಶ್ವರ್ ಮಲ್ಪೆ ತಂಡದವರು ಮತ್ತು ಕಾರವಾರ ಜಿಲ್ಲಾಡಳಿತ ಗೋವಾದ ಬಾರ್ಚ್ ತರಿಸಿಕೊಂಡು ಶನಿವಾರದಿಂದ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿಸಿತ್ತು. ಮೊದಲ ದಿನವೇ ನದಿಯಾಳದಲ್ಲಿ ಲಾರಿಯ ಅವಶೇಷ ಪತ್ತೆಯಾಗಿತ್ತು. ಇದೀಗ ಅದರೊಳಗೆ ಅರ್ಜುನ್ ಮೃತದೇಹದ ಕುರುಹು ಇರುವುದನ್ನು ಅಂದಾಜು ಮಾಡಲಾಗಿದೆ. ಸ್ಥಳದಲ್ಲಿ ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್ ಮಾಲೀಕ ಮುನಾಫ್ ಆರು ದಿನಗಳಿಂದಲೂ ಇದ್ದು, ನನಗೆ ಟ್ರಕ್ ಮುಖ್ಯವಲ್ಲ, ಅರ್ಜುನ್ ಪತ್ತೆ ಮುಖ್ಯ. ಆತನ ಕಳೇಬರವನ್ನಾದರೂ ಒಯ್ದು ಆತನ ಕುಟುಂಬದ ಮುಂದಿಡುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.
ಅರ್ಜುನ್ ಮತ್ತೆ ಬರುವುದಿಲ್ಲ ಅನ್ನುವುದು ಗೊತ್ತು. ಆದರೆ ಆತನಿಗೆ ಸೇರಿದ ಏನಾದರೂ ಅವಶೇಷ ಸಿಗಬೇಕಲ್ಲ ಅನ್ನುವ ಕುತೂಹಲ ಇತ್ತು. ಅದಕ್ಕಾಗಿ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಸ್ಥಳದಲ್ಲಿರುವ ಅರ್ಜುನ್ ಭಾವ ಜಿತಿನ್ ಹೇಳುತ್ತಾರೆ. ಜುಲೈ 17ರ ಘಟನೆ ಬಳಿಕ ಸ್ಥಳದಲ್ಲಿದ್ದ ಎರಡು ಟ್ಯಾಂಕರ್, ಒಂದು ಲಾರಿ ಸೇರಿದಂತೆ ಅಲ್ಲಿದ್ದ ಹತ್ತಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದರು ಎನ್ನಲಾಗಿತ್ತು. ಅದರಲ್ಲಿ ಅಲ್ಲಿಯೇ ಹೊಟೇಲ್ ನಡೆಸುತ್ತಿದ್ದ ಒಂದೇ ಕುಟುಂಬದ ಐವರು ಸದಸ್ಯರೂ ಇದ್ದರು. ಆ ಪೈಕಿ ಎಂಟು ಮಂದಿಯ ಮೃತದೇಹ ಕಾರ್ಯಾಚರಣೆಯಲ್ಲಿ ಪತ್ತೆಯಾಗಿತ್ತು. ಅರ್ಜುನ್ ಸೇರಿದಂತೆ ಇನ್ನಿಬ್ಬರ ಕುರುಹು ಪತ್ತೆಯಾಗಿರಲಿಲ್ಲ. ಇದೀಗ ಅರ್ಜುನ್ ಕಳೇಬರ ಎನ್ನಲಾಗುತ್ತಿದ್ದರೂ, ಅದು ಆತನದ್ದೇ ಎನ್ನಲು ಸಿಕ್ಕಿರುವ ಅಸ್ಥಿಪಂಜರ ಅಥವಾ ಎಲುಬಿನ ತುಂಡುಗಳನ್ನು ಡಿಎನ್ಎ ಟೆಸ್ಟ್ ಮಾಡಬೇಕಾಗುತ್ತದೆ. ಕಾರವಾರ ಜಿಲ್ಲಾಡಳಿತ ಸಿಕ್ಕಿರುವ ಎಲುಬಿನ ತುಂಡುಗಳನ್ನು ಡಿಎನ್ಎ ಟೆಸ್ಟ್ ಮಾಡಿಯೇ ಕುಟುಂಬಕ್ಕೆ ಹಸ್ತಾಂತರಿಸಲು ಮುಂದಾಗಿದೆ.
Ankola landslide, truck driver Arjun body recovered from Gangavali river on 72nd day. The truck’s owner, Manaf, confirmed that the cabin lifted from the river was indeed from his truck, marking the end of a 72-day-long wait. According to Manaf, a body, which is suspected to be Arjun's, was also found inside the vehicle. Authorities are attempting to bring the cabin to the river bank for further examination.
04-10-24 09:18 pm
HK News Desk
ಬೆಂಗಳೂರು ; 3 ಪ್ರತಿಷ್ಠಿತ ಕಾಲೇಜುಗಳಿಗೆ ಹುಸಿ ಬಾಂ...
04-10-24 08:25 pm
Dinesh Gundu Rao, Savarkar: ಸಾವರ್ಕರ್ ಮಾಂಸಾಹಾರ...
04-10-24 12:38 pm
Vijay Tata, HD Kumaraswamy, Ramesh Gowda: ಚನ್...
04-10-24 12:02 pm
Lawyer Jagadish, Big Boss Kannada: ಬಿಗ್ ಬಾಸ್...
03-10-24 08:37 pm
05-10-24 06:40 pm
HK News Desk
Tirupati laddu row, CBI: ತಿರುಪತಿ ಲಡ್ಡಿನಲ್ಲಿ ಕ...
04-10-24 07:10 pm
Isha foundation raid, Court: ಇಶಾ ಫೌಂಡೇಶನ್ ಆಶ್...
02-10-24 02:10 pm
Israel-Iran war: ಇಸ್ರೇಲ್ ಮೇಲೆ ಮುಗಿಬಿದ್ದ ಇರಾನ್...
02-10-24 11:43 am
Fire in Thailand: ಥಾಯ್ಲೆಂಡ್ ; ಸ್ಕೂಲ್ ಬಸ್ ಟಯರ...
01-10-24 07:36 pm
05-10-24 10:54 pm
Mangalore Correspondent
Mangalore crime, Arun Ullal: ಬೇರೆಯವರ ಹಾಲ್ ಗಳಲ...
05-10-24 10:06 pm
Mangalore Pradeep Acharya, powerlifting: ಕಾಮನ...
05-10-24 07:11 pm
Mangalore News, Israel Travels Bus: ಇಸ್ರೇಲ್ ಟ...
05-10-24 04:42 pm
Nalin Kateel, Mangalore: ನಮ್ಮನ್ನು 40 ಪರ್ಸೆಂಟ್...
05-10-24 03:54 pm
05-10-24 08:26 pm
Mangalore Correspondent
ಬೆಂಗಳೂರು ಏರ್ಪೋರ್ಟಲ್ಲಿ ಸಿಕ್ಕಿಬಿದ್ದಿದ್ದೇನೆ, ದೊಡ...
03-10-24 10:49 pm
BMTC Conductor Stabbed, Bangalore crime; ಫುಟ್...
02-10-24 05:44 pm
CCB Mangalore Police, Drugs: ತಲಪಾಡಿ ಗಡಿಭಾಗದಲ್...
02-10-24 04:45 pm
Vardhman Group, Digital Arrest, Fraud; ವರ್ಧಮಾ...
02-10-24 04:03 pm