ಬ್ರೇಕಿಂಗ್ ನ್ಯೂಸ್
30-09-24 11:03 pm HK News Desk ದೇಶ - ವಿದೇಶ
ಅಹಮದಾಬಾದ್, ಸೆ 30: ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಅವರ ಫೋಟೋ ಉಪಯೋಗಿಸಿಕೊಂಡು ಗುಜರಾತ್‌ನ ಅಹಮದಾಬಾದ್‌ನ ಚಿನ್ನದ ವ್ಯಾಪಾರಿಗೆ ಇಬ್ಬರು 1.30 ಕೋಟಿ ಉಂಡೆನಾಮ ತಿಕ್ಕಿದ್ದಾರೆ.
ಹೌದು, ಕೇಳಲು ಇದು ವಿಚಿತ್ರವಾದರೂ ಸತ್ಯ. ಅಹಮದಾಬಾದ್‌ನ ಮಾಣಿಕ್ ಚೌಕ್‌ನ ಚಿನ್ನದ ವ್ಯಾಪಾರಿ ಮೆಹುಲ್ ಠಕ್ಕರ್ ಅವರ ಬಳಿ ಎರಡು ಕೆಜಿ ಚಿನ್ನ ಖರೀದಿಗೆ ಖತರ್ನಾಕ್ ಕಳ್ಳರಿಬ್ಬರು 1.60 ಕೋಟಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದ್ರಂತೆ ಮೊದಲ ಕಂತಿನಲ್ಲಿ 1.30 ಕೋಟಿ ಎರಡನೇ ಕಂತಿನಲ್ಲಿ 30 ಲಕ್ಷ ಕೊಡುವುದಾಗಿ ಹೇಳಿದ್ದರು. ಆ ನಂತರ ಕೊಟ್ಟಿರುವ ಮಾತಿನಂತೆ 1.30 ಕೋಟಿ ಹಣ ನೀಡಲು ಬ್ಯಾಗ್ ಸಮೇತ ಬಂದಿದ್ದರು. ಆದರೆ, ಆ ಬ್ಯಾಗ್ ನಲ್ಲಿ ಅಸಲಿ ಹಣವನ್ನು ಇಡದ ಇಬ್ಬರು ಮೆಹುಲ್ ಠಕ್ಕರ್ ಅವರನ್ನು ನಂಬಿಸಲು 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳ ಮೇಲೆ ಕೆಲ ಅಸಲಿ ನೋಟುಗಳನ್ನು ಇಟ್ಟಿದ್ದರು. ಆ ನಂತರ ಮೆಹುಲ್ ಠಕ್ಕರ್ ಅವರ ನಂಬಿಕೆಯನ್ನು ಗಳಿಸಿದ ಇಬ್ಬರು, ಇನ್ನೊಂದು ಅಂಗಡಿಯಲ್ಲಿ ಚಿನ್ನ ಖರೀದಿಸಬೇಕಿದೆ ಎಂದು ಕಾಲ್ಕಿತ್ತರು.

ಹೀಗೆ ಹಣ ಸಿಕ್ಕ ಖುಷಿಯಲ್ಲಿ ಯಂತ್ರದ ಸಹಾಯದಿಂದ ಹಣ ಎಣಿಸಲು ಮೆಹುಲ್ ಠಕ್ಕರ್ ಮತ್ತು ಅಂಗಡಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಭರತ್ ಜೋಶಿ ಮುಂದಾಗಿದ್ದಾರೆ. 26 ಕಟ್ಟುಗಳಿದ್ದ 500 ರೂಪಾಯಿಯಲ್ಲಿ ಮಹಾತ್ಮಾ ಗಾಂಧೀಜಿಯ ಬದಲು ಅನುಪಮ್ ಖೇರ್ ಫೋಟೋ ಕಂಡು ಬೆಚ್ಚಿ ಬಿದ್ದಿದ್ದಾರೆ. ಅಹಮದಾಬಾದ್‌ನ ನವರಂಗ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆಪ್ಟೆಂಬರ್ 24ರಂದು ಈ ವಂಚನೆ ನಡೆದಿದ್ದು ಸದ್ಯ ಮೆಹುಲ್ ಠಕ್ಕರ್ ಅವರ ಅಂಗಡಿಯ ಬಳಿ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಗುರುತಿಸಿದ್ದಾರೆ. ಬಂಧನಕ್ಕೆ ಬೆಲೆ ಬೀಸಿದ್ದಾರೆ.
ಸದ್ಯಕ್ಕೆ ಅನುಪಮ್ ಖೇರ್ ಫೋಟೋ ಇರುವ 500 ರೂಪಾಯಿ ಮುಖಬೆಲೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಟ್ರೋಲಿಗರಿಗೆ ಆಹಾರವೂ ಆಗಿದೆ. ಇನ್ನೂ ಮಹಾತ್ಮಾ ಗಾಂಧಿ ಅವರ ಬದಲು ತಮ್ಮ ಭಾವಚಿತ್ರವನ್ನು 500 ರೂಪಾಯಿ ಮೇಲಿರುವುದನ್ನು ನೋಡಿರುವ ಅನುಪಮ್ ಖೇರ್, ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಈ ಪ್ರಕರಣದ ಕುರಿತು ಬರೆದುಕೊಂಡಿದ್ಧಾರೆ.ಇದೊಳ್ಳೆ ಕಥೆ ಐನೂರು ರೂಪಾಯಿ ಫೋಟೊ ಮೇಲೆ ಗಾಂಧೀಜಿಯ ಬದಲು ನನ್ನ ಫೋಟೊ, ಇಲ್ಲಿ ಏನ್ ಬೇಕಾದರೂ ಆಗಬಹುದು ಎಂದಿದ್ದಾರೆ. ಟಿವಿ9 ಗುಜರಾತ್ ನ ವರದಿಯನ್ನೂ ಕೂಡ ಅನುಪಮ್ ಖೇರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Actor Anupam Kher expressed shock after an Ahmedabad trader was duped with fake ₹500 notes which featured the photo of the actor instead of Mahatma Gandhi.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:46 am
HK News Staffer
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
15-09-26 10:31 am
HK News Staffer
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am