ರಷ್ಯಾ ನಿರ್ಮಿತ ರೈಫಲ್ ಹಿಡಿದು 'ಇಸ್ರೇಲ್ ಹೆಚ್ಚು ಕಾಲ ಉಳಿಯಲ್ಲ' ಎಂದ ಇರಾನ್ ಮುಖ್ಯಸ್ಥ ಅಯತೊಲ್ಲಾ ಖೊಮೇನಿ

05-10-24 06:40 pm       HK News Desk   ದೇಶ - ವಿದೇಶ

'ಇನ್ನು ಹೆಚ್ಚು ದಿನ ಇಸ್ರೇಲ್‌ ಉಳಿಯುವುದಿಲ್ಲ’ ಎಂದು ಇರಾನ್‌ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖೊಮೇನಿ ಹೇಳಿದ್ದಾರೆ. ಐದು ವರ್ಷಗಳಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಶುಕ್ರವಾರ ಟೆಹರಾನ್‌ನ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಅವರು ಮಾತನಾಡಿದರು.

ನವದೆಹಲಿ, ಅ.5: 'ಇನ್ನು ಹೆಚ್ಚು ದಿನ ಇಸ್ರೇಲ್‌ ಉಳಿಯುವುದಿಲ್ಲ’ ಎಂದು ಇರಾನ್‌ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖೊಮೇನಿ ಹೇಳಿದ್ದಾರೆ. ಐದು ವರ್ಷಗಳಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಶುಕ್ರವಾರ ಟೆಹರಾನ್‌ನ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಅವರು ಮಾತನಾಡಿದರು. 

ಖೊಮೇನಿ ಅವರು, ಇಸ್ರೇಲ್‌ ವಿರುದ್ಧ ಪ್ಯಾಲೆಸ್ತೀನಿಯರು ಮತ್ತು ಲೆಬನಾನಿಗರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಜೊತೆಗೆ ಇತ್ತೀಚೆಗೆ ಇಸ್ರೇಲ್‌ ಮೇಲೆ ಇರಾನ್‌ ನಡೆಸಿದ ಕ್ಷಿಪಣಿ ದಾಳಿಯನ್ನು “ಸಾರ್ವಜನಿಕ ಸೇವೆ’ ಎಂದೂ ಬಣ್ಣಿಸಿದರು. ಹಮಾಸ್‌ ಅಥವಾ ಹೆಜ್ಬುಲ್ಲಾ ವಿರುದ್ಧ ಇಸ್ರೇಲ್‌ ಹೆಚ್ಚು ಕಾಲ ಬಾಳಿಕೆ ಬರಲ್ಲ ಎಂದು ಖೊಮೇನಿ ಹೇಳುತ್ತಿದ್ದಂತೆ, ಮಸೀದಿ ಆವರಣದಲ್ಲಿ ಸೇರಿದ್ದ ಸಾವಿರಾರು ಜನರು “ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಘೋಷಣೆ ಮೊಳಗಿಸಿದರು.

ಐತಿಹಾಸಿಕ ಇಮಾಮ್ ಖೊಮೇನಿ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಸಾವಿರಾರು ಇರಾನಿಯನ್ನರನ್ನು ಉದ್ದೇಶಿಸಿ ಮಾತನಾಡಿದ ಖೊಮೇನಿ ಅವರು  ರಷ್ಯಾ ನಿರ್ಮಿತ ಡ್ರಾಗುನೋವ್ ರೈಫಲ್ ಹಿಡಿದಿದ್ದರು. ಪ್ರತಿಭಟನೆ ನಡೆಸುತ್ತಿರುವ ಲೆಬನಾನ್‌ ಮತ್ತು ಪ್ಯಾಲೆಸ್ತೀನಿಯರ ಬಗ್ಗೆ ಆಕ್ಷೇಪಿಸಲು ಯಾವುದೇ ಅಂತಾರಾಷ್ಟ್ರೀಯ ಕಾನೂನುಗಳಿಗೆ ಅವಕಾಶವಿಲ್ಲ ಎಂದರು. ಭಾಷಣದಲ್ಲಿ ಖೊಮೇನಿ ಇತ್ತೀಚೆಗೆ ಇಸ್ರೇಲ್‌ ದಾಳಿಗೆ ಸಾವನ್ನಪ್ಪಿದ ಹೆಜ್ಬುಲ್ಲಾ ಮುಖ್ಯಸ್ಥ ನಸ್ರುಲ್ಲಾನನ್ನೂ ಹಾಡಿ ಹೊಗಳಿದರು. ವಿಶೇಷವೆಂದರೆ, ಈ ಭಾಷಣದ ವೇಳೆ ಖೊಮೇನಿ ಅವರು ತಮ್ಮ ಪಕ್ಕದಲ್ಲೇ ಗನ್‌ವೊಂದನ್ನು ಇರಿಸಿಕೊಂಡಿದ್ದು ಎಲ್ಲರ ಗಮನ ಸೆಳೆಯಿತು.

Iranian Supreme Leader Ayatollah Ali Khamenei delivered a rare Friday sermon defending this week’s missile attack on Israel that deepened fears of a regional war, while praising the “logical and legal” Hamas-led October 7 invasion and massacre in southern Israel that sparked the war in Gaza and fueled violence throughout the Middle East.