ಬ್ರೇಕಿಂಗ್ ನ್ಯೂಸ್
10-10-24 01:00 pm HK News Desk ದೇಶ - ವಿದೇಶ
ನವದೆಹಲಿ, ಅ.10: ಭಾರತ ಕಂಡ ಅಪರೂಪದ ಕೈಗಾರಿಕಾ ದಿಗ್ಗಜ, ಟಾಟಾ ಸಮೂಹ ಸಂಸ್ಥೆಯನ್ನು ಬಹುರಾಷ್ಟ್ರೀಯ ಸಂಸ್ಥೆಯಾಗಿ ಬೆಳೆಸಿ ಟಾಟಾ ಹೆಸರನ್ನು ಹೊಸ ಬ್ರಾಂಡ್ ಆಗಿ ಮಾಡಿದ್ದ ರತನ್ ನಾವಲ್ ಟಾಟಾ (86) ಇನ್ನಿಲ್ಲ. 86 ವರ್ಷದ ರತನ್ ಟಾಟಾ ಅವರು ವಯೋಸಹಜ ಕಾಯಿಲೆಯಿಂದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಅ.9ರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ನಾವಲ್ ಟಾಟಾ – ಸೂನಿ ಟಾಟಾ ಅವರ ಮಗನಾಗಿ 1937ರ ಡಿಸೆಂಬರ್ 28ರಂದು ಜನಿಸಿದ್ದ ರತನ್ ಟಾಟಾ ಅವರು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ವಾಸ್ತುಶಿಲ್ಪ ವಿಷಯದಲ್ಲಿ ಬಿಎಸ್ ಪದವಿ ಪಡೆದಿದ್ದರು. ವಿಶೇಷ ಅಂದ್ರೆ, ಇವರಿಗೆ ಹತ್ತು ವರ್ಷದವರಿದ್ದಾಗ ತಂದೆ-ತಾಯಿ ಪರಸ್ಪರ ವಿಚ್ಛೇದನ ಪಡೆದು ಮಗುವನ್ನು ಅನಾಥಾಶ್ರಮಕ್ಕೆ ಸೇರಿಸಿದ್ದರು. ಇದನ್ನು ತಿಳಿದ ಅಜ್ಜಿ ತಾನೇ ಆ ಮಗುವನ್ನು ದತ್ತು ಪಡೆದು ಮರಳಿ ತಮ್ಮ ಮನೆಗೆ ಕರೆಸಿ ಸಾಕಿ ಸಲಹಿದ್ದರು. ತಂದೆ ನಾವಲ್ ಟಾಟಾ ಅವರು ಬಳಿಕ ಬೇರೆ ಮದುವೆಯಾಗಿ ಮಗುವನ್ನೂ ಪಡೆದರು. ಆ ಮಗುವಿನ ಹೆಸರು ನೋಯಲ್ ಟಾಟಾ ಎಂದಾಗಿತ್ತು. ನೋಯಲ್ ಟಾಟಾ ಮತ್ತು ರತನ್ ಟಾಟಾ ಜೊತೆ ಜೊತೆಯಾಗಿಯೇ ಬೆಳೆದಿದ್ದರು. ಆದರೆ ಉದ್ಯಮದಲ್ಲಿ ಯಶಸ್ಸು ಸಾಧಿಸಿದ್ದು ರತನ್ ಟಾಟಾ.
1870ರ ಸಂದರ್ಭದಲ್ಲಿ ರತನ್ ಟಾಟಾ ಅವರ ಅಜ್ಜ ಜೆಮ್ಶೆಡ್ ಜೀ ಟಾಟಾ ಅವರಿಂದ ಸ್ಥಾಪನೆಯಾದ ಟಾಟಾ ಸಂಸ್ಥೆ ಮೊದಲಿಗೆ ಮುಂಬೈನಲ್ಲಿ ಜವಳಿ ವ್ಯಾಪಾರದಲ್ಲಿ ತೊಡಗಿತ್ತು. ಆನಂತರ, ಬ್ರಿಟಿಷರ ಕಾಲದಲ್ಲಿಯೇ ಬೇರೆ ಬೇರೆ ವ್ಯಾಪಾರ, ಉದ್ಯಮಗಳನ್ನು ಸ್ಥಾಪಿಸುತ್ತ ಬೆಳೆದಿತ್ತು. ಜೆಮ್ಶಡ್ ಜೀ ಟಾಟಾ ಬಳಿಕ ಮಗ ಜೆಆರ್ ಡಿ ಟಾಟಾ ಉದ್ಯಮವನ್ನು ದೊಡ್ಡ ಮಟ್ಟಿಗೆ ವಿಸ್ತರಣೆ ಮಾಡಿದ್ದರು. 1991ರ ವರೆಗೂ ಜೆಆರ್ ಡಿ ಟಾಟಾ ಅವರೇ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಈ ನಡುವೆ, 1972ರಲ್ಲಿ ರತನ್ ಟಾಟಾ ಅವರು ಟಾಟಾದ್ದೇ ಸಹಸಂಸ್ಥೆ ನ್ಯಾಶನಲ್ ರೇಡಿಯೋ ಮತ್ತು ಇಲೆಕ್ಟ್ರಾನಿಕ್ಸ್ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಂಡು ಉದ್ಯಮದಲ್ಲಿ ಬೆಳೆಯುತ್ತ ಬಂದಿದ್ದರು. 1991ರ ಹೊತ್ತಿಗೆ, ಟಾಟಾ ಸಂಸ್ಥೆಯ ವಹಿವಾಟು ಹಲವು ರಾಷ್ಟ್ರಗಳಿಗೆ ವಿಸ್ತರಿಸಿದ್ದರೂ, ಒಟ್ಟು ಬಂಡವಾಳ 5.8 ಬಿಲಿಯನ್ ಡಾಲರ್ ಆಗಿತ್ತು. ಇಂತಹ ಸಂಕ್ರಮಣ ಕಾಲಘಟ್ಟದಲ್ಲಿಯೇ ರತನ್ ಟಾಟಾ ಅವರು ಟಾಟಾ ಸಂಸ್ಥೆಯ ಅಧ್ಯಕ್ಷರಾಗಿ ಹೊಣೆ ಹೊತ್ತುಕೊಂಡಿದ್ದರು.
ಇವರ ಅವಧಿಯಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಕ್ಕೂ ಹೆಚ್ಚು ದೇಶಗಳಿಗೆ ಟಾಟಾ ಸಾಮ್ರಾಜ್ಯ ವಿಸ್ತರಣೆಯಾಗಿತ್ತು. ಆಡು ಮುಟ್ಟದ ಸೊಪ್ಪಿಲ್ಲ, ಟಾಟಾ ಕೈಯಾಡಿಸಿದ ಕ್ಷೇತ್ರವಿಲ್ಲ ಎನ್ನುವ ಹೆಗ್ಗಳಿಗೆ ಬಂದಿದ್ದೂ ಇದೇ ಅವಧಿಯಲ್ಲಿ. ಉಪ್ಪಿನಿಂದ ಉಕ್ಕಿನ ವರೆಗೆ, ಗುಂಡುಸೂಜಿಯಿಂದ ಹಿಡಿದು ವಿಮಾನ ಕ್ಷೇತ್ರದ ವರೆಗೂ ಟಾಟಾ ಸಂಸ್ಥೆ ಬೆಳೆಯಿತು. ಪ್ರತಿ ಕ್ಷೇತ್ರದಲ್ಲಿಯೂ ಉತ್ಪಾದನೆ ಮಾಡುತ್ತ ಜನಸಾಮಾನ್ಯರ ಕೈಗೂ ತನ್ನ ಉತ್ಪನ್ನಗಳನ್ನು ಕೈಗೆಟಕುವಂತೆ ಮಾಡಿದ್ದು ಇವರ ಹೆಗ್ಗಳಿಕೆ. 1996ರಲ್ಲಿ ದೂರಸಂಪರ್ಕ, 2004ರಲ್ಲಿ ಐಟಿ ಕನ್ಸಲ್ಟನ್ಸಿ ಸ್ಥಾಪಿಸಿ ಲಕ್ಷಾಂತರ ಜನರಿಗೆ ಉದ್ಯೋಗವನ್ನೂ ಒದಗಿಸಿದ್ದರು.
ವಿಶೇಷ ಅಂದ್ರೆ, ರತನ್ ಟಾಟಾ ಅವರು ಜಾಗತಿಕ ದೈತ್ಯ ಕಂಪನಿಗಳ ಮಾಲೀಕನಾಗಿ ಕಾಣಿಸಿಕೊಂಡರೂ, ತಾವೆಂದು ಬಿಲಿಯನೇರ್ ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಇಷ್ಟಪಡಲ್ಲ. 100ಕ್ಕೂ ಹೆಚ್ಚು ದೇಶಗಳಲ್ಲಿ 30ಕ್ಕೂ ಹೆಚ್ಚು ಕಂಪನಿಗಳನ್ನು ಮುನ್ನಡೆಸುತ್ತಿದ್ದರೂ, ಅಹಂ, ಆಡಂಬರ ಇಲ್ಲದ ಕೈಗಾರಿಕಾ ಸಂತನಂತೆ ಜೀವನ ನಡೆಸಿದ್ದರು. ಹಲವಾರು ಟ್ರಸ್ಟ್ ಗಳನ್ನು ಸ್ಥಾಪಿಸಿ ಅನೇಕ ಜನೋಪಯೋಗಿ ಕೆಲಸಗಳನ್ನೂ ಮಾಡತೊಡಗಿದ್ದರು. ಸ್ಕಾಲರ್ಶಿಪ್ ನಿಂದ ತೊಡಗಿ ಜನಸಾಮಾನ್ಯರಿಗೂ ಕಾರುಗಳನ್ನು ಕೊಳ್ಳುವಂತಾಗಬೇಕೆಂದು ಬಯಸಿ ಕೇವಲ 1 ಲಕ್ಷ ರೂ.ಗೆ ನ್ಯಾನೋ ಕಾರುಗಳನ್ನು ಮಾಡಿಸಿದ್ದು ರತನ್ ಟಾಟಾ ಅವರ ಹೆಗ್ಗಳಿಕೆ. ಆಟೋ ಬೆಲೆಯೇ ಲಕ್ಷದ ಮೇಲಿರುವಾಗ ಕಾರನ್ನು ಲಕ್ಷ ಬೆಲೆಗೆ ಕೊಡುವುದು ಸಾಧ್ಯವಿಲ್ಲ ಎನ್ನುವ ಟೀಕೆ ಬರುತ್ತಿದ್ದಾಗಲೇ ಒಂದು ಲಕ್ಷಕ್ಕೆ 2003ರಲ್ಲಿ ನ್ಯಾನೋ ಕಾರನ್ನು ಕೊಡಿಸಿ ಜನರನ್ನು ಮಾತ್ರವಲ್ಲ, ಕೈಗಾರಿಕಾ ದಿಗ್ಗಜರನ್ನೂ ಹುಬ್ಬೇರಿಸುವಂತೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಟಾಟಾ ಮೋಟರ್ಸ್ ಕಂಪನಿ ಭಾರತದಲ್ಲಿ ಅಗ್ಗದ ಕಾರುಗಳನ್ನು ಒದಗಿಸಿ ಕ್ರಾಂತಿ ಮಾಡಿತ್ತು.
2012ರಲ್ಲಿ ತನಗೆ 75 ವರ್ಷ ತಲುಪಿದಾಗ ತಾನೇ ಟಾಟಾ ಸಂಸ್ಥೆಯ ಅಧ್ಯಕ್ಷ ಪದವಿಯನ್ನು ಬಿಟ್ಟುಕೊಟ್ಟಿದ್ದರು. ಆಗಿನ ಸಂದರ್ಭದಲ್ಲಿ ಟಾಟಾ ಸಂಸ್ಥೆಯ ಒಟ್ಟು ವಹಿವಾಟು ನೂರು ಬಿಲಿಯನ್ ಡಾಲರಿಗೂ ಹೆಚ್ಚು ದಾಟಿತ್ತು. ಜಾಗತಿಕ ಮಟ್ಟದಲ್ಲಿ ಅಪಾರ ಗೌರವ ಹೊಂದಿದ್ದ ರತನ್ ಟಾಟಾ ಅವರಿಗೆ ಭಾರತದ ಎರಡನೇ ಅತ್ಯುನ್ನತ ಪದವಿ ಪದ್ಮವಿಭೂಷಣ ಪುರಸ್ಕಾರ ನೀಡಲಾಗಿತ್ತು. ಬ್ರಿಟನ್ ದೇಶದ ಅತ್ಯುನ್ನತ ಗೌರವ ನೈಟ್ ಗ್ರಾಂಡ್ ಕ್ರಾಸ್ ಅನ್ನೂ ಕೊಟ್ಟು ಪುರಸ್ಕರಿಸಲಾಗಿತ್ತು. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದ ರತನ್ ಟಾಟಾ ಅವರು ವಿಶ್ವ ಮಟ್ಟದಲ್ಲಿ ಗುರುತಿಸಲ್ಪಟ್ಟ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.
Ratan Tata, chairman emeritus of one of India's biggest conglomerates, Tata Sons, has died at 86. Just on Monday, the industrialist in a social media post had dismissed speculation surrounding his health and had said he was undergoing routine medical investigations due to his age.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm