ಬ್ರೇಕಿಂಗ್ ನ್ಯೂಸ್
11-10-24 04:47 pm HK News Desk ದೇಶ - ವಿದೇಶ
ಮುಂಬೈ, ಅ.11: ಭಾರತ ಕಂಡ ಮಹೋನ್ನತ ಕೈಗಾರಿಕೋದ್ಯಮಿ ರತನ್ ನೋಯಲ್ ಟಾಟಾ ಅವರು ಮದುವೆಯಾಗಿರಲಿಲ್ಲ. ಹೀಗಾಗಿ ಕುಟುಂಬ, ಸಂಸಾರ ಇಲ್ಲದೆ ಕೊನೆಗಾಲದಲ್ಲಿ ತೀವ್ರ ಏಕಾಂಗಿತನವನ್ನೂ ಅನುಭವಿಸಿದ್ದರು. ಈ ಬಗ್ಗೆ ರತನ್ ಟಾಟಾ ಅವರು ಹಲವು ಕಡೆಗಳಲ್ಲಿ ಹೇಳಿಕೊಂಡಿದ್ದೂ ಇದೆ. ಆದರೆ, ಇವರಿಗೆ ಇಳಿ ವಯಸ್ಸಿನಲ್ಲಿ ಒಂಟಿತನ ಕಾಡದಂತೆ ತನ್ನ ಅರ್ಧ ಪ್ರಾಯಕ್ಕೂ ಸಣ್ಣ ಹುಡುಗನೊಬ್ಬ ಜೊತೆಯಾಗಿದ್ದ. ಶ್ವಾನ ಪ್ರೀತಿಯ ಕಾರಣಕ್ಕೆ ಈ ಹುಡುಗ ಜೊತೆಯಾಗಿದ್ದು, ಬಳಿಕ ಟಾಟಾ ಗ್ರೂಪ್ ನಲ್ಲಿಯೇ ಕೆಲಸಕ್ಕೆ ಸೇರಿಕೊಂಡಿದ್ದ.
ಆತನ ಹೆಸರು ಶಂತನು ನಾಯ್ಡು. ಮಹಾರಾಷ್ಟ್ರದ ಪುಣೆಯವನು. ಈತನ ಹೆತ್ತವರು ಆಂಧ್ರಪ್ರದೇಶದವರಾಗಿದ್ದು, ಪುಣೆಯಲ್ಲೇ ನೆಲೆಸಿದ್ದಾರೆ. ಬೀದಿ ನಾಯಿಗಳ ಬಗ್ಗೆ ತುಂಬ ಪ್ರೀತಿ ಇಟ್ಟುಕೊಂಡು ಅವುಗಳ ಪಾಲನೆಗಾಗಿ ಮೋಟೋಪಾಸ್ ಅನ್ನುವ ಸಂಸ್ಥೆ ಮಾಡಿಕೊಂಡಿದ್ದ. ಬೀದಿ ನಾಯಿಗಳಿಗೆ ಹೊಳೆಯುವ ರೇಡಿಯಂ ಬೆಲ್ಟ್ ಅಳವಡಿಸುವುದು, ಆಮೂಲಕ ರಸ್ತೆ ದಾಟುವ ನಾಯಿಗಳು ವಾಹನ ಸವಾರರಿಗೆ ಕಾಣುವಂತೆ ಮಾಡುವುದು ಈತನ ಯೋಜನೆಯಾಗಿತ್ತು. ನಾಯಿಗಳಿಗೆ ರೇಡಿಯಂ ಬೆಲ್ಟ್ ಗಳನ್ನು ಅಳವಡಿಸುವುದರಿಂದ ವಾಹನಗಳ ಹೆಡ್ ಲೈಟ್ ಗೆ ಪ್ರತಿಫಲನ ಆಗುತ್ತಿತ್ತು. ಈ ಬಗ್ಗೆ ಅರಿತುಕೊಂಡ ಟಾಟಾ ಸಂಸ್ಥೆಯ ಅಧ್ಯಕ್ಷ ರತನ್ ಟಾಟಾ ಹುಡುಗ ಶಂತನು ನಾಯ್ಡು ಪ್ರೀತಿ ಗಳಿಸಿದ್ದರು. ಆತನ ಕೆಲಸಕ್ಕಾಗಿ ಟಾಟಾ ಸಂಸ್ಥೆಯಿಂದಲೇ ಶ್ವಾನಗಳ ಪಾಲನೆಗಾಗಿ ಅನುದಾನವನ್ನೂ ಕೊಟ್ಟಿದ್ದರು.
2014ರಲ್ಲಿ 21 ವರ್ಷದವನಾಗಿದ್ದ ಶಂತನು ಶ್ವಾನ ಪ್ರೀತಿ ರತನ್ ಟಾಟಾ ಅವರ ಗೆಳೆತನ ಗಳಿಸಿಕೊಟ್ಟಿತ್ತು. ಬಳಿಕ ಶಂತನು ಎಂಬಿಎ ಪೂರೈಸಿ ಟಾಟಾ ಕಂಪನಿಯಲ್ಲೇ ಕೆಲಸ ಗಿಟ್ಟಿಸಿಕೊಂಡಿದ್ದ. ರತನ್ ಟಾಟಾ ಅವರು ಒಬ್ಬಂಟಿಯಾದರೂ ಅಪಾರವಾಗಿ ಶ್ವಾನ ಪ್ರೀತಿ ಇಟ್ಟುಕೊಂಡಿದ್ದರು. ಗೋವಾದಲ್ಲಿ ಕೆಲಸದ ನಿಮಿತ್ತ ಹೋಗಿದ್ದಾಗ ಕಾರಿನಡಿ ಬೀದಿ ನಾಯಿಯೊಂದು ಮಲಗಿದ್ದನ್ನು ಕಂಡು, ಆನಂತರ ತನ್ನ ಕಾರಿನ ಹಿಂದೆಯೇ ಬಂತೆಂದು ಆ ನಾಯಿಯನ್ನೂ ಮುಂಬೈಗೆ ಕರೆದೊಯ್ದು ಸಲಹಿದ್ದರು. ಆ ನಾಯಿಗೆ ದೇಶದ ಪುಟ್ಟರಾಜ್ಯ ಗೋವಾ ಎಂದೇ ಹೆಸರಿಟ್ಟಿದ್ದರು. ಟೀಟೂ ಹೆಸರಿನ ಜರ್ಮನ್ ಶೆಫರ್ಡ್ ಹಾಗೂ ಟ್ಯಾಂಗೋ ಹೆಸರಿನ ಗೋಲ್ಡನ್ ರಿಟ್ರೀವರ್ ಶ್ವಾನಗಳು ಅವರ ಮನೆಯಲ್ಲಿವೆ.
ಗೋವಾದಿಂದ ತಂದಿದ್ದ ನಾಯಿಯನ್ನು ಟಾಟಾ ಗ್ರೂಪ್ ಸಂಸ್ಥೆಯ ಕೇಂದ್ರ ಕಚೇರಿ ಬಾಂಬೆ ಹೌಸ್ ನಲ್ಲಿ ಇಡಲಾಗಿತ್ತು. ಈ ನಾಯಿ ಹೆಚ್ಚು ಕಾಲ ರತನ್ ಟಾಟಾ ಕಚೇರಿಯಲ್ಲಿದ್ದಾಗ ಅವರ ಜೊತೆಯಲ್ಲೇ ಇರುತ್ತಿತ್ತು. ನಿನ್ನೆ ರತನ್ ಟಾಟಾ ಅವರ ಮೃತದೇಹವನ್ನು ಕಚೇರಿಗೆ ಬಳಿ ತಂದಾಗ, ನಾಯಿ ಪಾರ್ಥಿವ ಶರೀರದ ಬಳಿಯೇ ಕುಳಿತು ರೋದಿಸಿತ್ತು. ಅಲ್ಲಿಂದ ಬಿಟ್ಟು ಹೋಗಲೊಪ್ಪದೆ ಇದ್ದ ದೃಶ್ಯ ಮನಕಲಕುವಂತಿತ್ತು. ಶ್ವಾನ ಪ್ರೀತಿಯಿಂದಾಗಿಯೇ ಸದ್ಯ 31 ವರ್ಷದ ಯುವಕನಾಗಿರುವ ಶಂತನು ನಾಯ್ಡು, ರತನ್ ಟಾಟಾ ಅವರ ಪ್ರೀತಿಯ ಸ್ನೇಹಿತನಾಗಿ ಬದಲಾಗಿದ್ದ. 86ರ ಅಜ್ಜನಾಗಿದ್ದರೂ ರತನ್ ಟಾಟಾ ಮತ್ತು ಶಂತನು ನಾಯ್ಡು ಆತ್ಮೀಯ ಸ್ನೇಹಿತರಾಗಿದ್ದುದೇ ಅಚ್ಚರಿಯ ಸಂಗತಿ.
ರತನ್ ಟಾಟಾ ಅವರು ಅಗಲಿದ ಬಗ್ಗೆ ಶಂತನು ನಾಯ್ಡು ಪೋಸ್ಟ್ ಹಾಕಿದ್ದು ಭಾರೀ ವೈರಲ್ ಆಗಿದೆ. ಈ ಗೆಳೆತನ ನನ್ನೊಂದಿಗೆ ಉಂಟು ಮಾಡಿರುವ ಶೂನ್ಯವನ್ನು ತುಂಬಲು ಉಳಿದ ಜೀವನವನ್ನು ಕಳೆಯುತ್ತೇನೆ. ನನ್ನ ಪ್ರೀತಿ ಲೈಟ್ ಹೌಸ್ ಗೆ ವಿದಾಯ ಎಂದು ಭಾವುಕ ಪೋಸ್ಟ್ ಹಾಕಿದ್ದಾರೆ. ಇವರಿಬ್ಬರ ಒಡನಾಟ ತಂದೆ- ಮಗನಂತೆ, ಆತ್ಮೀಯ ಸ್ನೇಹಿತರಂತೆ ಇತ್ತು. ಕೂದಲು ಕತ್ತರಿಸುವುದರಿಂದ ಹಿಡಿದು ಕಾಮೆಡಿ ಸಿನೆಮಾ ನೋಡುವುದೆಲ್ಲ ಇವರ ಜೊತೆಯಾಗೇ ಮಾಡುತ್ತಿದ್ದರು. ಟಾಟಾ ಅವರ ಇನ್ ಸ್ಟಾ ಗ್ರಾಮ್ ಖಾತೆಯನ್ನು ಶಂತನು ಅವರೇ ನೋಡಿಕೊಂಡಿದ್ದರು. ರತನ್ ಟಾಟಾ ಅವರು ನಾಯಿಗಳ ಜೊತೆಗಿದ್ದ ಅಪರೂಪದ, ಹಳೆಯ ಫೋಟೋಗಳನ್ನು ಶಂತನು ಷೇರ್ ಮಾಡುತ್ತಿದ್ದರು.
ಶಂತನು ನಾಯ್ಡು ಸ್ವತಃ ಲೇಖಕರಾಗಿದ್ದು ಕೋವಿಡ್ ಸಂದರ್ಭದಲ್ಲಿ Came Upon A LightHouse ಹೆಸರಿನ ಪುಸ್ತಕ ಹೊರತಂದಿದ್ದರು. ರತನ್ ಟಾಟಾ ಅವರ ಜೀವನವನ್ನೇ ಮುಖ್ಯವಾಗಿಟ್ಟು ಈ ಕೃತಿಯನ್ನು ಬರೆದಿದ್ದರು. ಅಂದಹಾಗೆ, ಶಂತನು ನಾಯ್ಡು ಟಾಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಐದನೇ ತಲೆಮಾರಿನ ವ್ಯಕ್ತಿಯಾಗಿದ್ದಾರೆ.
Among those mourning the loss of the business tycoon Ratan Tata, who passed away on Wednesday night at the age of 86, was a young man on a bike who led the hearse on his final journey. One of Tata's closest aides and his trusted assistant, Shantanu Naidu was less than half his age but the two shared a bond unlike any other.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm