ಮೈಸೂರು ದರ್ಭಾಂಗ್ ಬಾಗಮತಿ ಎಕ್ಸ್ ಪ್ರೆಸ್ ರೈಲು ಅಪಘಾತ ; ಭಯೋತ್ಪಾದಕ ಕೃತ್ಯದ ಶಂಕೆ, ಹಳಿ ತಪ್ಪಿಸಲು ಯತ್ನ ಪತ್ತೆ, ಎನ್ಐಎ ತನಿಖೆ

13-10-24 03:48 pm       HK News Desk   ದೇಶ - ವಿದೇಶ

ಮೈಸೂರು- ದರ್ಭಾಂಗ್ ಭಾಗಮತ್ ಎಕ್ಸ್ ಪ್ರೆಸ್ ಅಪಘಾತ ಪ್ರಕರಣದಲ್ಲಿ ತನಿಖೆಗೆ ಎನ್ಐಎ ಎಂಟ್ರಿಯಾಗಿದ್ದು, ಭಯೋತ್ಪಾದಕ ಕೃತ್ಯದ ಶಂಕೆ ವ್ಯಕ್ತವಾಗಿದೆ. ತಮಿಳುನಾಡಿನ ಕವರಪೆಟ್ಟೈ ರೈಲು ನಿಲ್ದಾಣದ ಬಳಿ ನಿಲ್ಲಿಸಿದ್ದ ಗೂಡ್ಸ್ ರೈಲಿಗೆ ಮೈಸೂರು – ದರ್ಭಾಂಗ್ ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾಗಿತ್ತು.

ಚೆನ್ನೈ, ಅ.13: ಮೈಸೂರು- ದರ್ಭಾಂಗ್ ಭಾಗಮತ್ ಎಕ್ಸ್ ಪ್ರೆಸ್ ಅಪಘಾತ ಪ್ರಕರಣದಲ್ಲಿ ತನಿಖೆಗೆ ಎನ್ಐಎ ಎಂಟ್ರಿಯಾಗಿದ್ದು, ಭಯೋತ್ಪಾದಕ ಕೃತ್ಯದ ಶಂಕೆ ವ್ಯಕ್ತವಾಗಿದೆ. ತಮಿಳುನಾಡಿನ ಕವರಪೆಟ್ಟೈ ರೈಲು ನಿಲ್ದಾಣದ ಬಳಿ ನಿಲ್ಲಿಸಿದ್ದ ಗೂಡ್ಸ್ ರೈಲಿಗೆ ಮೈಸೂರು – ದರ್ಭಾಂಗ್ ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾಗಿತ್ತು.

ತನಿಖೆಯ ಸಂದರ್ಭದಲ್ಲಿ ರೈಲು ಹಳಿಯನ್ನು ತಪ್ಪಿಸುವ ಯತ್ನ ನಡೆದಿರುವುದು, ಕ್ರಾಸಿಂಗ್ ಕೊಡುವಲ್ಲಿ ನಟ್, ಬೋಲ್ಡ್ ಸಡಿಲಿಸಿರುವುದು ಪತ್ತೆಯಾಗಿದೆ. ಅಲ್ಲದೆ, ಸುತ್ತಿಗೆಯ ಮೂಲಕ ರೈಲು ಹಳಿಯನ್ನು ತಪ್ಪಿಸಲು ಪ್ರಯತ್ನ ಪಟ್ಟಿರುವ ಅಂಶ ಪತ್ತೆಯಾಗಿದೆ. ಹೀಗಾಗಿ ಇದರ ಹಿಂದೆ ಯಾರೋ ವಿಧ್ವಂಸಕ ಕೃತ್ಯಕ್ಕಾಗಿ ಪ್ರಯತ್ನ ಮಾಡಿದ್ದಾರೆ ಎನ್ನುವ ಶಂಕೆಯಿಂದ ಎನ್ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

NIA Probes Terror Angle After Train Accident Leaves 19 Injured in Tamil  Nadu | Republic World

ಕಳೆದ ಸೆ.22ರಂದು ಇದೇ ರೀತಿ ರೈಲು ಸಿಗ್ನಲ್ ಬಾಕ್ಸ್ ತೆರವುಗೊಳಿಸಿದ ಕೃತ್ಯ ಪೊನ್ನೇರಿ ಎಂಬಲ್ಲಿ ನಡೆದಿತ್ತು. ಕವರಪೆಟ್ಟೈ ರೈಲು ನಿಲ್ದಾಣದಿಂದ ಹತ್ತು ಕಿಮೀ ದೂರದಲ್ಲಿ ಘಟನೆ ನಡೆದಿದ್ದರಿಂದ ಎರಡೂ ಕೃತ್ಯಗಳ ಬಗ್ಗೆ ಸಾಮ್ಯತೆ ಕಂಡುಬಂದಿದೆ. ಶುಕ್ರವಾರ ರಾತ್ರಿ ತೆರಳುತ್ತಿದ್ದ ಮೈಸೂರು ಭಾಗಮತ್ ಎಕ್ಸ್ ಪ್ರೆಸ್ ರೈಲು ಕವರಪೆಟ್ಟೈ ರೈಲು ನಿಲ್ದಾಣದ ಬಳಿ ಲೂಪ್ ಲೈನಿಗೆ ಎಂಟ್ರಿಯಾಗಿತ್ತು. ಇದರಿಂದಾಗಿ ಅಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. 13 ಬೋಗಿಗಳು ಹಳಿ ತಪ್ಪಿದ್ದಲ್ಲದೆ, ಡಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡಿತ್ತು. 19 ಮಂದಿ ಸುಟ್ಟ ಗಾಯಕ್ಕೀಡಾಗಿದ್ದರು.

A team of the National Investigation Agency (NIA), which probes terrorism cases, on Saturday reached Tamil Nadu's Kavaraipettai railway station, where a running express train collided with a stationary goods train injuring at least 19.