Actor Sanjay Dutt Mangalore,Baba Siddique; ಬಾಬಾ ಸಿದ್ದಿಕಿ ಕೊಲೆ ಸುದ್ದಿ ಕೇಳಿ ಬೆಚ್ಚಿಬಿದ್ದ ಬಾಲಿವುಡ್ ದಿಗ್ಗಜರು, ಮಂಗಳೂರಿನಿಂದ ನೇರ ಆಸ್ಪತ್ರೆಗೆ ದೌಡಾಯಿಸಿದ್ದ ಸಂಜಯ್ ದತ್, ದತ್ ಕುಟುಂಬಕ್ಕೆ ಫ್ಯಾಮಿಲಿ ಸದಸ್ಯನಂತಿದ್ದ ಸಿದ್ದಿಕಿ, ಸಲ್ಮಾನ್ ಖಾನ್ ದ್ವೇಷದಲ್ಲಿ ಸಿದ್ದಿಕಿ ಹತ್ಯೆಗೈದ್ನಾ ಗ್ಯಾಂಗ್ ಸ್ಟರ್ ಬಿಷ್ಣೋಯಿ ?

13-10-24 06:13 pm       HK News Desk   ದೇಶ - ವಿದೇಶ

ಇತ್ತೀಚೆಗಷ್ಟೇ ಕಾಂಗ್ರೆಸ್ ಬಿಟ್ಟು ಎನ್ ಸಿಪಿ ಸೇರಿದ್ದ, ಬಾಲಿವುಡ್ ಸಿನಿಮಾ ಜಗತ್ತಿನ ಸ್ಟಾರ್ ಗಳ ಪಾಲಿಗೆ ಆಪ್ತಮಿತ್ರ ಎನಿಸಿಕೊಂಡಿದ್ದ ಬಾಬಾ ಸಿದ್ದಿಕಿ ಅವರನ್ನು ಬಾಂದ್ರಾದಲ್ಲಿ ಗುಂಡಿಕ್ಕಿ ಹತ್ಯೆಗೈದ ಸುದ್ದಿ ಕೇಳಿ ಬಾಲಿವುಡ್ ಚಿತ್ರರಂಗ ಬೆಚ್ಚಿಬಿದ್ದಿದೆ.

ಮುಂಬೈ, ಅ.13: ಇತ್ತೀಚೆಗಷ್ಟೇ ಕಾಂಗ್ರೆಸ್ ಬಿಟ್ಟು ಎನ್ ಸಿಪಿ ಸೇರಿದ್ದ, ಬಾಲಿವುಡ್ ಸಿನಿಮಾ ಜಗತ್ತಿನ ಸ್ಟಾರ್ ಗಳ ಪಾಲಿಗೆ ಆಪ್ತಮಿತ್ರ ಎನಿಸಿಕೊಂಡಿದ್ದ ಬಾಬಾ ಸಿದ್ದಿಕಿ ಅವರನ್ನು ಬಾಂದ್ರಾದಲ್ಲಿ ಗುಂಡಿಕ್ಕಿ ಹತ್ಯೆಗೈದ ಸುದ್ದಿ ಕೇಳಿ ಬಾಲಿವುಡ್ ಚಿತ್ರರಂಗ ಬೆಚ್ಚಿಬಿದ್ದಿದೆ. ಸಂಜಯ್ ದತ್, ಸೋದರಿ ಪ್ರಿಯಾ ದತ್ ಆದಿಯಾಗಿ ಖಾನ್ – ದಾನ್ ಗಳೆಲ್ಲ ಬಾಬಾ ಸಿದ್ದಿಕಿ ನೋಡಲು ಲೀಲಾವತಿ ಆಸ್ಪತ್ರೆಗೆ ಎಂಟ್ರಿ ಕೊಟ್ಟಿದ್ದಾರೆ.

ಶನಿವಾರ ಸಂಜೆಯ ವೇಳೆಗೆ ಬಾಬಾ ಸಿದ್ದಿಕಿ ಅವರ ಮೇಲೆ ಆಗಂತುಕರು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆಂದು ಸುದ್ದಿ ತಿಳಿಯುತ್ತಲೇ ಮಂಗಳೂರಿನಲ್ಲಿದ್ದ ನಟ ಸಂಜಯ್ ದತ್ ತನ್ನ ಪ್ರೈವೇಟ್ ಜೆಟ್ ನಲ್ಲಿ ಮುಂಬೈಗೆ ಹಿಂತಿರುಗಿದ್ದಾರೆ. ಹುಲಿ ವೇಷ ಕಾರ್ಯಕ್ರಮದ ನೆಪದಲ್ಲಿ ಮಂಗಳೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದ ಸಂಜಯ್ ದತ್ ಶನಿವಾರ ಸಂಜೆಯ ವೇಳೆಗೆ ಬಳ್ಳಾಲ್ ಬಾಗಿನಲ್ಲಿ ಹುಲಿ ವೇಷ ತಂಡ ಇಳಿಸುವ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿಂದ ಕೆಲವೇ ಹೊತ್ತಲ್ಲಿ ಹಿಂತಿರುಗಿದ್ದ ಸಂಜಯ್ ದತ್ ಬಳಿಕ ನೇರವಾಗಿ ಏರ್ಪೋರ್ಟ್ ತೆರಳಿದ್ದು ಎಂಟು ಗಂಟೆ ಸುಮಾರಿಗೆ ಮುಂಬೈಗೆ ಹೊರಟಿದ್ದರು.

Baba Siddique shot dead in Mumbai: Sanjay Dutt, Salman Khan, Shilpa Shetty,  Zaheer Iqbal's father arrive at Lilavati Hospital | Hindi Movie News -  Times of India

ಮುಂಬೈನಲ್ಲಿ ಬಾಂದ್ರಾದಲ್ಲಿರುವ ಪುತ್ರ ಜೀಶಾನ್ ಸಿದ್ದಿಕಿಯವರ ಶಾಸಕರ ಕಚೇರಿ ಬಳಿಯಲ್ಲೇ ಬಾಬಾ ಸಿದ್ದಿಕಿ ಅವರ ಮೇಲೆ ಇಬ್ಬರು ಯುವಕರು ಗುಂಡು ಹಾರಿಸಿದ್ದರು. ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಕೊನೆಯುಸಿರೆಳೆದಿದ್ದಾರೆ. ಸಂಜಯ ದತ್ ಮಂಗಳೂರಿನಲ್ಲಿದ್ದರೂ, ಬಾಲಿವುಡ್ ಚಿತ್ರರಂಗದ ಇತರೇ ದಿಗ್ಗಜರು ತಲುಪುವ ಮೊದಲೇ ಮುಂಬೈನ ಆಸ್ಪತ್ರೆಗೆ ತಲುಪಿದ್ದರು. ಸಂಜಯ್ ದತ್ ಸೋದರಿ, ಮಾಜಿ ಸಂಸದೆ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾ ದತ್ ಮತ್ತು ಇವರ ತಂದೆ ಸುನಿಲ್ ದತ್ ಅವರು ಬಾಬಾ ಸಿದ್ದಿಕಿಯವರಿಗೆ ತೀರಾ ಆಪ್ತರಾಗಿದ್ದರು. ಬಿಹಾರ ಮೂಲದ ಬಾಬಾ ಸಿದ್ದಿಕಿಯನ್ನು ರಾಜಕೀಯಕ್ಕೆ ಕರೆತಂದಿದ್ದೂ ಸುನಿಲ್ ದತ್ ಅವರೇ ಆಗಿದ್ದರು. ಹೀಗಾಗಿ ದತ್ ಕುಟುಂಬಕ್ಕೆ ಬಾಬಾ ಸಿದ್ದಿಕಿ ಫ್ಯಾಮಿಲಿ ಸದಸ್ಯನಂತೆ ಇದ್ದರು.

ಸಿದ್ದಿಕಿ ರಾಜಕೀಯಕ್ಕೆ ತಂದಿದ್ದು ಸುನಿಲ್ ದತ್

ಪ್ರಿಯಾ ದತ್ ಈ ಬಗ್ಗೆ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನನಗೆ ಗೆಳೆಯ, ಕುಟುಂಬ ಸದಸ್ಯ, ರಾಜಕೀಯ ಗುರು ಎಲ್ಲವೂ ಆಗಿದ್ದರು. ತಂದೆ ಸುನಿಲ್ ದತ್ ಅವರಿಗೆ ಮಗನ ರೀತಿ ಇದ್ದರು. ಬಾಬಾ ಸಿದ್ದಿಕಿಯನ್ನು ರಾಜಕೀಯಕ್ಕೆ ಕರೆತಂದಿದ್ದೂ ತಂದೆಯವರೇ. ನನ್ನ ಪಾಲಿಗೆ ರಾಜಕೀಯದ ಏಳು-ಬೀಳುಗಳನ್ನು ಹೇಳಿಕೊಡುತ್ತಿದ್ದರು. ಅವರ ಅಗಲಿಕೆ ನಮಗೆಲ್ಲ ತುಂಬ ದುಃಖ ತಂದಿದೆ ಎಂದು ಹೇಳಿದ್ದಾರೆ. ಸಂಜಯ್ ಮತ್ತು ಪ್ರಿಯಾ ದತ್ ರಾತ್ರಿಯೇ ಲೀಲಾವತಿ ಆಸ್ಪತ್ರೆಗೆ ತೆರಳಿ ಬಾಬಾ ಸಿದ್ದಿಕಿ ಜೊತೆಗೆ ನಿಂತಿದ್ದಾರೆ.

ಈ ಹಿಂದೆ ಸಂಜಯ್ ದತ್ ಗಂಭೀರ ಪ್ರಕರಣಗಳಲ್ಲಿ ಸಿಕ್ಕಿಬಿದ್ದಾಗ ಬಾಬಾ ಸಿದ್ದಿಕಿ ಅವರೇ ಪಾರು ಮಾಡಿದ್ದರು. ಬಾಲಿವುಡ್ ಸಿನಿಮಾ ಜಗತ್ತು ಮತ್ತು ನಟ- ನಟಿಯರೆಲ್ಲರ ಜೊತೆ ತೀರಾ ಹತ್ತಿರದ ಸಂಬಂಧ ಇಟ್ಟುಕೊಂಡಿದ್ದ ಬಾಬಾ ಸಿದ್ದಿಕಿ ಬಗ್ಗೆ ಚಿತ್ರರಂಗದ ಸದಸ್ಯರಿಗೆ ಮೆಂಟರ್ ಆಗಿದ್ದರು. ಭೂಗತ ಡಾನ್ ದಾವೂದ್ ಇಬ್ರಾಹಿಂ ಜೊತೆಗೂ ಬಾಬಾಗೆ ನಂಟು ಇದ್ದುದರಿಂದ ಯಾವುದೇ ಕಗ್ಗಂಟು ಇದ್ದರೂ, ಅದು ಬಾಬಾ ಸಿದ್ದಿಕಿ ಬಳಿ ಬರುತ್ತಿತ್ತು. ಹೀಗಾಗಿ ಸಂಜಯ್ ದತ್ ಮಂಗಳೂರಿಗೆ ಬಂದು ಹುಲಿ ವೇಷದ ಕಾರ್ಯಕ್ರಮದಲ್ಲಿದ್ದಾಗಲೇ ಶಾಕ್ ಸುದ್ದಿ ಕೇಳಿ ತುರ್ತಾಗಿ ನಿರ್ಗಮಿಸಿದ್ದಾರೆ.

ಮೂಲತಃ ಬಿಹಾರದ ಪಾಟ್ನಾ ನಿವಾಸಿಯಾಗಿದ್ದ ಸಿದ್ದಿಕಿ ಮುಂಬೈಗೆ ಬಂದು ಉದ್ಯಮಿಯಾಗಿದ್ದರು. 1988ರಲ್ಲಿ ಯೂತ್ ಕಾಂಗ್ರೆಸ್ ಮೂಲಕ ಕಾಂಗ್ರೆಸಿನ ರಾಜಕೀಯಕ್ಕೆ ಎಂಟ್ರಿಯಾಗಿದ್ದ ಸಿದ್ದಿಕಿ 1999ರಲ್ಲಿ ಬಾಂದ್ರಾ ಪಶ್ಚಿಮ ಕ್ಷೇತ್ರದಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸಿನಲ್ಲಿ ಪ್ರಭಾವ ಹೊಂದಿದ್ದ ಸುನಿಲ್ ದತ್, ಸಿದ್ದಿಕಿಗೆ ಟಿಕೆಟ್ ತೆಗೆಸಿಕೊಟ್ಟು ಗೆಲ್ಲಿಸಿದ್ದರು ಎನ್ನಲಾಗಿತ್ತು. ಆನಂತರ ಸತತ ಮೂರು ಬಾರಿಗೆ ಅದೇ ಕ್ಷೇತ್ರದಲ್ಲಿ ಶಾಸಕರಾಗಿದ್ದ ಸಿದ್ದಿಕಿ ಒಂದು ಬಾರಿ ರಾಜ್ಯದ ಸಚಿವರೂ ಆಗಿದ್ದರು.

ಖಾನ್ ದ್ವಯರನ್ನು ಒಂದು ಮಾಡಿದ್ದ ಸಿದ್ದಿಕಿ

2013ರಲ್ಲಿ ಬಾಬಾ ಸಿದ್ದಿಕಿ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ತಮ್ಮ ಶೀತಲ ಸಮರ ಮತ್ತು ಮುನಿಸನ್ನು ಮರೆತು ಒಂದಾಗಿದ್ದರು. ಇಬ್ಬರು ಖಾನ್ ದ್ವಯರ ಐದು ವರ್ಷಗಳ ಶೀತಲ ಯುದ್ಧಕ್ಕೆ ಅಂತ್ಯಹಾಡಿದ್ದು ಬಾಬಾ ಸಿದ್ದಿಕಿಯೆಂದು ಬಾಲಿವುಡ್ಡಿನಲ್ಲಿ ಭಾರೀ ಸುದ್ದಿಯಾಗಿತ್ತು. 2014ರಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸಿಗೆ ದೊಡ್ಡ ಸೋಲಾದ ಸಂದರ್ಭದಲ್ಲಿ ಸಿದ್ದಿಕಿ ಅವರೂ ಬಾಂದ್ರಾದಲ್ಲಿ ಸೋಲು ಕಂಡಿದ್ದರು. ಆನಂತರ, ಸಿದ್ದಿಕಿ ಅವರಿಗೆ ರಾಜಕೀಯದಲ್ಲಿ ಮೇಲೆ ಬರಲು ಸಾಧ್ಯವಾಗಿರಲಿಲ್ಲ, ಹೀಗಾಗಿ ಪಕ್ಷದಲ್ಲಿ ತೆರೆಮರೆಯ ನಾಯಕನಾಗಿಯೇ ಮುಂದುವರಿದಿದ್ದರು. ಹತ್ತು ವರ್ಷಗಳ ಹಿನ್ನಡೆಯ ಬಳಿಕ 2024ರ ಫೆಬ್ರವರಿ ತಿಂಗಳಲ್ಲಿ ಕಾಂಗ್ರೆಸ್ ಬಿಟ್ಟು ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಸೇರಿದ್ದರು. ಕಾಂಗ್ರೆಸಿನಲ್ಲಿ ಪದಾರ್ಥಕ್ಕೆ ಹಾಕುವ ಕರಿಸೊಪ್ಪಿನ ರೀತಿ ನಮ್ಮನ್ನು ಬಳಸುತ್ತಿದ್ದಾರೆ ಎಂದು ಹೇಳಿ ಸಿದ್ದಿಕಿ ಮೂದಲಿಸಿದ್ದರು.

ಕೃತ್ಯದ ಹಿಂದೆ ಬಿಷ್ಣೋಯಿ ಕೈವಾಡ ಶಂಕೆ

ಕೊಲೆ ಘಟನೆ ನಡೆದ ಬಾಂದ್ರಾದಲ್ಲಿಯೇ ಇಬ್ಬರು ಆಗಂತುಕರನ್ನು ಪೊಲೀಸರು ಬಂಧಿಸಿದ್ದಾರೆ. ಹರ್ಯಾಣ ಮೂಲದ ಗುರ್ಮೈಲ್ ಬಲ್ಜಿತ್ ಸಿಂಗ್(23) ಮತ್ತು ಉತ್ತರ ಪ್ರದೇಶ ಮೂಲದ ಧರ್ಮರಾಜ್ ರಾಜೇಶ್ ಕಶ್ಯಪ್ (19) ಬಂಧಿತರು. ಇದೇ ವೇಳೆ, ಹರ್ಯಾಣ ಮೂಲದ ನಟೋರಿಯಸ್ ಗ್ಯಾಂಗ್ ಸ್ಟರ್, ಕೆನಡಾದಲ್ಲಿರುವ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸದಸ್ಯರು ಎನ್ನಲಾದ ವ್ಯಕ್ತಿಗಳು, ಈ ಕೃತ್ಯವನ್ನು ಬಿಷ್ಣೋಯಿ ತಂಡದವರೇ ಮಾಡಿದ್ದಾರೆ ಎಂದು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಪೊಲೀಸ್ ತನಿಖೆಯಲ್ಲಿ ಸುಪಾರಿ ಪಡೆದು ಕೃತ್ಯ ಎಸಗಿದ್ದಾರೆ. ಇವರಿಗೆ ಗನ್ ಗಳನ್ನು ಕೆಲವು ದಿನಗಳ ಹಿಂದಷ್ಟೇ ಒದಗಿಸಲಾಗಿತ್ತು ಎನ್ನುವುದು ಪತ್ತೆಯಾಗಿದೆ. ಇದಲ್ಲದೆ, ಬಾಬಾ ಸಿದ್ದಿಕಿ ಅವರಿಗೆ 15 ದಿನಗಳ ಹಿಂದೆ ಜೀವ ಬೆದರಿಕೆ ಒಡ್ಡಲಾಗಿತ್ತು. ಆ ಹಿನ್ನೆಲೆಯಲ್ಲಿ ಸಿದ್ದಿಕಿಗೆ ವೈ ಶ್ರೇಣಿಯ ಭದ್ರತೆಯನ್ನೂ ನೀಡಲಾಗಿತ್ತು.

Baba Siddiqui murder: 2 of 3 shooters from same village in UP's Bahraich;  Mumbai Police hunt for third suspect | Lucknow News - Times of India

ಪ್ರಕರಣದಲ್ಲಿ ಇನ್ನೊಬ್ಬ ಸೂತ್ರಧಾರನಿದ್ದು ಆತನ ಪತ್ತೆಗಾಗಿ ಪೊಲೀಸರ ಶೋಧ ನಡೆದಿದೆ. ಇದಲ್ಲದೆ, ಆರೋಪಿಗಳು ಎರಡು ತಿಂಗಳ ಹಿಂದೆಯೇ ಬಾಂದ್ರಾದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು ಬಾಬಾ ಸಿದ್ದಿಕಿ ಚಲನವಲನ ಗಮನಿಸುತ್ತಿದ್ದರು. ಇದೀಗ ಬಾಬಾ ಸಿದ್ದಿಕಿಯನ್ನು ಗುರಿಯಾಗಿಸಿ ದಾಳಿ ನಡೆಸಿ ಕೊಲೆ ಮಾಡಿದ್ದಾರೆಂದು ಪೊಲೀಸರು ಪತ್ತೆ ಮಾಡಿದ್ದಾರೆ. ಬಾಬಾ ಸಿದ್ದಿಕಿ, ನಟ ಸಲ್ಮಾನ್ ಖಾನ್ ಗೆ ಆಪ್ತನಾಗಿದ್ದಲ್ಲದೆ, ಆತನಿಗೆ ಸಹಕಾರ ನೀಡುತ್ತಿದ್ದರು. ಇದೇ ಕಾರಣಕ್ಕೆ ಸಲ್ಮಾನ್ ಖಾನ್ ಬಗ್ಗೆ ರಿವೇಂಜ್ ಇಟ್ಟುಕೊಂಡಿರುವ ಬಿಷ್ಣೋಯಿ ಗ್ಯಾಂಗ್ ಈಗ ಸಿದ್ದಿಕಿಯನ್ನು ಗುಂಡು ಹಾರಿಸಿ ಕೊಂದು ಹಾಕಿದೆ ಎನ್ನಲಾಗುತ್ತಿದೆ.

Actor Sanjay Dutt rushes to Mumbai from Mangalore after the murder of Baba Siddique. Sanjay Dutt was warmly welcomed by Uday Poojary, the founder of Biruver Kudla. Nationalist Congress Party (NCP) leader Baba Siddique was shot dead on Saturday night by three unidentified attackers in Mumbai. Baba Siddique was attacked outside his MLA son Zeeshan Siddiqui's office near Colgate ground in Nirmal Nagar. According to the police, the attackers fired two to three rounds at him.

ದೇಶ - ವಿದೇಶ

Actor Sanjay Dutt Mangalore,Baba Siddique; ಬಾಬಾ ಸಿದ್ದಿಕಿ ಕೊಲೆ ಸುದ್ದಿ ಕೇಳಿ ಬೆಚ್ಚಿಬಿದ್ದ ಬಾಲಿವುಡ್ ದಿಗ್ಗಜರು, ಮಂಗಳೂರಿನಿಂದ ನೇರ ಆಸ್ಪತ್ರೆಗೆ ದೌಡಾಯಿಸಿದ್ದ ಸಂಜಯ್ ದತ್, ದತ್ ಕುಟುಂಬಕ್ಕೆ ಫ್ಯಾಮಿಲಿ ಸದಸ್ಯನಂತಿದ್ದ ಸಿದ್ದಿಕಿ, ಸಲ್ಮಾನ್ ಖಾನ್ ದ್ವೇಷದಲ್ಲಿ ಸಿದ್ದಿಕಿ ಹತ್ಯೆಗೈದ್ನಾ ಗ್ಯಾಂಗ್ ಸ್ಟರ್ ಬಿಷ್ಣೋಯಿ ?

13-10-24 06:13 pm
  HK News Desk    

ಇತ್ತೀಚೆಗಷ್ಟೇ ಕಾಂಗ್ರೆಸ್ ಬಿಟ್ಟು ಎನ್ ಸಿಪಿ ಸೇರಿದ್ದ, ಬಾಲಿವುಡ್ ಸಿನಿಮಾ ಜಗತ್ತಿನ ಸ್ಟಾರ್ ಗಳ ಪಾಲಿಗೆ ಆಪ್ತಮಿತ್ರ ಎ...

ಮೈಸೂರು ದರ್ಭಾಂಗ್ ಬಾಗಮತಿ ಎಕ್ಸ್ ಪ್ರೆಸ್ ರೈಲು ಅಪಘಾ...

13-10-24 03:48 pm

Kasaragod, Auto driver suicide: ಆಟೋ ಚಾಲಕ ಆತ್ಮ...

12-10-24 01:49 pm

ಶಾರ್ಜಾಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂ...

11-10-24 09:59 pm

ಅಖಂಡ ಭಾರತದ 51 ಶಕ್ತಿಪೀಠಗಳಲ್ಲಿ ಒಂದೆನಿಸಿರುವ ಬಾಂಗ...

11-10-24 06:23 pm