ಬ್ರೇಕಿಂಗ್ ನ್ಯೂಸ್
05-11-24 03:30 pm HK News Desk ದೇಶ - ವಿದೇಶ
ಚೆನ್ನೈ, ನ.5: ಕರ್ನಾಟಕದಲ್ಲಿ ವಕ್ಫ್ ಕಾಯ್ದೆ ಕರಾಳ ರೂಪ ದರ್ಶನ ಆಗುತ್ತಿರುವಾಗಲೇ ತಮಿಳುನಾಡಿನಲ್ಲಿಯೂ ವಕ್ಫ್ ಕಾಯ್ದೆ ವಿವಾದ ಎಬ್ಬಿಸಿದೆ. ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ಇಡೀ ಗ್ರಾಮವನ್ನೇ ತಮಿಳುನಾಡು ವಕ್ಫ್ ಬೋರ್ಡ್ ತನ್ನದೆಂದು ಹೇಳಿಕೊಂಡಿದ್ದು, ಇದರ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ಷೇಪ ಎತ್ತಿದ್ದಾರೆ. ಎರಡು ವರ್ಷಗಳ ಹಿಂದೆಯೇ ಇದರ ಬಗ್ಗೆ ಆಕ್ಷೇಪ- ತಕರಾರು ಕೇಳಿಬಂದಿದ್ದು, ಸಂಸತ್ತಿನಲ್ಲೂ ಪ್ರತಿಧ್ವನಿಸಿದೆ.
ಕಾವೇರಿ ನದಿ ಪಾತ್ರದಲ್ಲಿರುವ ತಿರುಚಿರಾಪಳ್ಳಿ ಜಿಲ್ಲೆಯ ತಿರುಚೆಂದುರೈ ಎನ್ನುವ ಗ್ರಾಮವನ್ನು ವಕ್ಫ್ ಆಸ್ತಿಯೆಂದು ತಮಿಳುನಾಡು ವಕ್ಫ್ ಮಂಡಳಿ ಹೇಳಿಕೊಂಡಿದೆ. ವಿಶೇಷ ಅಂದ್ರೆ, ಅದೇ ಗ್ರಾಮದಲ್ಲಿ 1500 ವರ್ಷಗಳ ಹಳೆಯದಾದ ಚಂದ್ರಶೇಖರ ಸ್ವಾಮಿ ದೇವಸ್ಥಾನವಿದ್ದು, ಊರಿನ ಗ್ರಾಮಸ್ಥರ ಭೂಮಿ ಸೇರಿದಂತೆ ದೇವಸ್ಥಾನದ್ದೆಲ್ಲ ವಕ್ಫ್ ಆಸ್ತಿ ಎಂದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ಮುಸ್ಲಿಮರು ಇಲ್ಲದಿದ್ದರೂ, ಇದು ಮುಸ್ಲಿಮರ ವಕ್ಫ್ ಆಸ್ತಿ ಎಂದಿರುವುದು ಜನರಿಗೂ ಅಚ್ಚರಿಯಾಗಿದೆ.
ಊರಿನಲ್ಲಿ ಕೆಲವು ರೈತರು ತಮ್ಮ ಆಸ್ತಿಯನ್ನು ಮಾರಾಟಕ್ಕೆ ಮುಂದಾಗಿದ್ದ ವೇಳೆ 2022ರಲ್ಲಿ ಮೊದಲ ಬಾರಿಗೆ ಆಸ್ತಿ ದಾಖಲೆ ಪತ್ರದಲ್ಲಿ ವಕ್ಫ್ ಎಂದು ನಮೂದಾಗಿರುವುದು ಕಂಡುಬಂದಿತ್ತು. ರಾಜಗೋಪಾಲ್ ಎಂಬ ರೈತರೊಬ್ಬರು ತನ್ನ 1.2 ಎಕ್ರೆ ಭೂಮಿಯನ್ನು ಮಾರಾಟಕ್ಕೆ ಮುಂದಾಗಿದ್ದ ವೇಳೆ ವಕ್ಫ್ ಬೋರ್ಡ್ ನಿಂದ ನಿರಾಕ್ಷೇಪಣಾ ಪತ್ರ ತರುವಂತೆ ತಹಸೀಲ್ದಾರ್ ಸೂಚಿಸಿದ್ದಾರೆ. ಇದರಿಂದ ರೈತರು ವಕ್ಫ್ ತೂಗುಗತ್ತಿ ಎಲ್ಲಿಂದ ಬಂದಿರುವುದೆಂದು ಅಚ್ಚರಿಗೆ ಒಳಗಾಗಿದ್ದಾರೆ. ಆದರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 20 ಪುಟದ ದಾಖಲೆಯನ್ನು ಅಧಿಕಾರಿಗಳು ಮುಂದಿಟ್ಟಿದ್ದಾರೆ. ರೈತರು ತಮ್ಮ ಗ್ರಾಮದಲ್ಲಿ ಯಾವುದೇ ಮುಸ್ಲಿಮರು ಇಲ್ಲ. ನೂರು ವರ್ಷಗಳ ಹಿಂದಿನ 1923ರ ಆಸ್ತಿ ದಾಖಲೆ ಪತ್ರಗಳು ನಮ್ಮಲ್ಲಿವೆ, ಇದು ವಕ್ಫ್ ಆಸ್ತಿಯೆಂದು ನಮೂದಾಗಲು ಹೇಗೆ ಸಾಧ್ಯ ಎಂದು ಜನರು ಪ್ರಶ್ನಿಸಿದ್ದಾರೆ.
ವಕ್ಫ್ ಮಂಡಳಿಯಿಂದ ತಿರುಚಿರಾಪಳ್ಳಿಯ 12 ಸಬ್ ರಿಜಿಸ್ಟ್ರಾರ್ ಕಚೇರಿಗೆ ನೋಟೀಸ್ ಬಂದಿದ್ದು, ಎಲ್ಲೆಲ್ಲಿ ತಮ್ಮ ಆಸ್ತಿ ಇದೆಯೆಂದು ಉಲ್ಲೇಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ತಿರುಚೆಂದುರೈ ಗ್ರಾಮದ ಎಲ್ಲ ಆಸ್ತಿಯೂ ವಕ್ಫ್ ಬೋರ್ಡಿಗೆ ಸೇರಿದ್ದು, ಜನರು ತಮ್ಮ ಆಸ್ತಿ ಮಾರಾಟ ಮಾಡುವುದಕ್ಕೂ ಮುನ್ನ ಎನ್ಓಸಿ ಪತ್ರವನ್ನು ವಕ್ಫ್ ಮಂಡಳಿಯಿಂದ ಪಡೆಯಬೇಕು ಎಂದು ಸಬ್ ರಿಜಿಸ್ಟ್ರಾರ್ ಕಚೇರಿ ಸಿಬಂದಿ ತಿಳಿಸಿದ್ದಾರೆ. ಇದರಿಂದ ರೈತರು, ಜನಸಾಮಾನ್ಯರ ಚಿಂತೆಗೀಡಾಗಿದ್ದಾರೆ.
ಸಂಸತ್ತಿನಲ್ಲಿ ಗಮನಸೆಳೆದಿದ್ದ ವಕ್ಫ್ ಗ್ರಾಮ
ತಮಿಳುನಾಡಿನಲ್ಲಿ ಇಡೀ ಗ್ರಾಮವನ್ನೇ ವಕ್ಫ್ ಆಸ್ತಿಯೆಂದು ಹೇಳಿರುವುದು ಸಂಸತ್ತಿನಲ್ಲಿಯೂ ಪ್ರತಿಧ್ವನಿಸಿತ್ತು. ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು 2024ರ ಆಗಸ್ಟ್ ನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಪ್ರಸ್ತಾಪಿಸಿದ ಸಂದರ್ಭದಲ್ಲಿ, ವಕ್ಫ್ ಕಾಯ್ದೆಯನ್ನು ದುರುಪಯೋಗ ಮಾಡುತ್ತಿದ್ದಾರೆ, ಅದಕ್ಕೆ ತಮಿಳುನಾಡಿನ ತಿರುಚೆಂದುರೈ ಗ್ರಾಮ ಸಾಕ್ಷಿ. ಅಲ್ಲಿನ ರೈತರು ತಮ್ಮ ಆಸ್ತಿ ಮಾರಾಟ ಮಾಡುವುದಕ್ಕೂ ವಕ್ಫ್ ನಿಂದ ಅನುಮತಿ ತೆಗೆದುಕೊಳ್ಳುವ ಸ್ಥಿತಿಯಾಗಿದೆ. 1500 ವರ್ಷ ಹಳೆಯ ದೇವಸ್ಥಾನವನ್ನೂ ತಮ್ಮದೆಂದು ವಕ್ಫ್ ಹೇಳಿರುವುದು ಕರಾಳತೆಗೆ ಸಾಕ್ಷಿ ಎಂದು ಹೇಳಿದ್ದರು.
ಹಳೆಯ ದೇವಸ್ಥಾನವೂ ನಮ್ಮ ದಾಖಲೆಯಲ್ಲಿದೆ
ಇದರ ಬೆನ್ನಲ್ಲೇ ವಕ್ಫ್ ಮಂಡಳಿಯ ವಕ್ತಾರರು, ತಮಿಳುನಾಡಿನ ತಿರುಚೆಂದುರೈ ಗ್ರಾಮವಿಡೀ ನಮ್ಮದೆಂದು ಹೇಳಿಲ್ಲ. ಗ್ರಾಮದಲ್ಲಿ 900 ಎಕ್ರೆ ಜಾಗ ಇದೆ. ನಾವು 480 ಎಕ್ರೆ ಜಾಗವನ್ನಷ್ಟೇ ನಮ್ಮದೆಂದು ಹೇಳಿದ್ದೇವೆ. ಅಲ್ಲಿ ದೇವಸ್ಥಾನ, ಇತರ ಜನರು ಇರುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಮಾರಾಟ ಮಾಡುವ ಸಂದರ್ಭದಲ್ಲಿ ವಕ್ಫ್ ಮಂಡಳಿಯ ಅನುಮತಿ ಪಡೆಯಬೇಕು ಎಂದು ಹೇಳಿದ್ದಾರೆ. ಅಲ್ಲದೆ, 1500 ವರ್ಷ ಹಳೆಯ ದೇವಸ್ಥಾನವೂ ನಮ್ಮ ಆಸ್ತಿಯೆಂದು ಉಲ್ಲೇಖದಲ್ಲಿದೆ. 1700ರ ಸಂದರ್ಭದಲ್ಲಿ ಆಗಿನ ರಾಣಿ ಗ್ರಾಮದ ಅರ್ಧ ಭಾಗವನ್ನು ಮುಸ್ಲಿಮರಿಗೆಂದು ದಾನ ಕೊಟ್ಟಿದ್ದರು. ಅದರಲ್ಲಿ ದೇವಸ್ಥಾನವೂ ಸೇರುತ್ತದೆ ಎಂದಿದ್ದಾರೆ.
ರಾಣಿ ದಾನ ಕೊಟ್ಟಿದ್ದನ್ನೇ ಹಕ್ಕುಸ್ಥಾಪಿಸಿದ ವಕ್ಫ್
ಇತಿಹಾಸದ ಮಾಹಿತಿ ಪ್ರಕಾರ, 1700ರ ಸಂದರ್ಭದಲ್ಲಿ ತಮಿಳುನಾಡು ಭಾಗದಲ್ಲಿ ಆಳ್ವಿಕೆ ನಡೆಸುತ್ತಿದ್ದ ರಾಣಿ ಮಂಗಮ್ಮಾಲ್ ಅವರು ಉತ್ತರದ ಮೊಘಲ್ ರಾಜ ಔರಂಗಜೇಬನ ಜೊತೆಗಿನ ಒಪ್ಪಂದದಂತೆ, ತಿರುಚೆಂದುರೈ ಸೇರಿದಂತೆ ತಮಿಳುನಾಡಿನ ಹಲವು ಕಡೆಗಳಲ್ಲಿ ಮುಸ್ಲಿಮರಿಗೆಂದು ನೂರಾರು ಎಕ್ರೆ ಭೂಮಿಯನ್ನು ದಾನ ನೀಡಿದ್ದರಂತೆ. ಈ ಗ್ರಾಮಗಳಲ್ಲಿ ಮುಸ್ಲಿಮರು ನೆಲೆಸಿಲ್ಲದಿದ್ದರೂ ಇತಿಹಾಸದ ಪುರಾವೆ ಆಧರಿಸಿ 1954ರ ಗೆಜೆಟ್ ನೋಟಿಫಿಕೇಶನ್ ಪ್ರಕಾರ, ಇತಿಹಾಸ ಕಾಲದಲ್ಲಿ ದಾನ ನೀಡಲ್ಪಟ್ಟ ಭೂಮಿಯನ್ನು ವಕ್ಫ್ ಮಂಡಳಿ ತನ್ನದೆಂದು ಹಕ್ಕುಸ್ಥಾಪನೆ ಮಾಡಲು ಹೊರಟಿದೆ. 2013ರಲ್ಲಿ ಯುಪಿಎ ಸರಕಾರ ಇದ್ದಾಗ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾಗಿದ್ದ ರೆಹಮಾನ್ ಖಾನ್, ಮುಸ್ಲಿಂ ಅಲ್ಲದಿದ್ದರೂ ಯಾವುದೇ ಧರ್ಮೀಯನ ಭೂಮಿಯನ್ನು ಕೂಡ ದಾನ ಪಡೆಯಲು ಮತ್ತು ಅದು ತನ್ನದೆಂದು ಹೇಳಿಕೊಳ್ಳಲು ಸಾಧ್ಯವಾಗುವಂತೆ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿದ್ದರು. ಆಗಿನ ಯುಪಿಎ ಆಡಳಿತ ಕಣ್ಣು ಮುಚ್ಚಿ ಸಹಿ ಹಾಕಿದ್ದರಿಂದ ಅದರ ಪರಿಣಾಮ ಈಗ ಜನರ ಅನುಭವಕ್ಕೆ ಬರುತ್ತಿದೆ.
ಇತಿಹಾಸ ಕಾಲದ ದಾನ ಪತ್ರಗಳಿಗೆ ಬೆಲೆ ಇಲ್ಲ
ಇತಿಹಾಸ ಕಾಲದ ದಾನ ಪತ್ರಗಳಿಗೆ ಸ್ವತಂತ್ರ ಭಾರತದಲ್ಲಿ ಬೆಲೆ ಇರುವುದಿಲ್ಲ. ಇತಿಹಾಸ ಕಾಲದಲ್ಲಿ ಯಾರದ್ದೋ ರಾಜನ ಸ್ವಾಧೀನದಲ್ಲಿತ್ತು ಎಂದು ವಿಜಯಪುರದ ಕೋಟೆಯನ್ನು ತಮ್ಮದೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶ ವಿಭಜನೆಯಾದಾಗ ಮುಸ್ಲಿಮರು ಬಿಟ್ಟು ಹೋಗಿದ್ದ ಜಾಗ, ಮುಸ್ಲಿಮ್ ರಾಜರ ಸುಪರ್ದಿಯಲ್ಲಿದ್ದ ಭೂಮಿಯನ್ನಷ್ಟೇ ವಕ್ಫ್ ಎಂದು ನಮೂದಿಸಲಾಗಿತ್ತು. ಆ ಭೂಮಿಯನ್ನು ಮುಸ್ಲಿಮ್ ಸಮುದಾಯ ಅಭಿವೃದ್ಧಿ, ಶಿಕ್ಷಣ ಉದ್ದೇಶಕ್ಕಾಗಿ ಬಳಕೆ ಮಾಡಬೇಕೇ ಹೊರತು ಅದನ್ನು ವೈಯಕ್ತಿಕ ಬಳಕೆಗೆ ಅವಕಾಶ ಕೊಟ್ಟಿರಲಿಲ್ಲ. ಆದರೆ ದೇಶಾದ್ಯಂತ ಈ ಭೂಮಿಯನ್ನು ಪ್ರಭಾವಿ ಮುಸ್ಲಿಮರು ಕಬಳಿಸಿಕೊಂಡಿದ್ದಾರೆ. ಹಾಲಿ ಕೇಂದ್ರ ಸರಕಾರ ವಕ್ಫ್ ಕಾಯ್ದೆ ದುರುಪಯೋಗ ಆಗುತ್ತಿರುವುದನ್ನು ಮನಗಂಡು ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದು ಸದ್ಯಕ್ಕೆ ಕರಡು ಮಸೂದೆ ಜಂಟಿ ಸದನ ಸಮಿತಿಯ ಪರಿಶೀಲನೆಯಲ್ಲಿದೆ.
Thiruchenthurai village, located in the Srirangam constituency of Trichy, was mentioned by Union Minority Affairs Minister Kiren Rijiju in Parliament as he presented the Bill in the House to opposition from the opposition parties.
11-04-25 11:10 pm
Bangalore Correspondent
Sameer MD, Vidoe Deleted, Dharmasthala: ಸೌಜನ್...
11-04-25 10:27 pm
Bangalore High court, Birthday, suspend: ಬೆಂಗ...
11-04-25 03:45 pm
Yatnal, Muslim, Prophet Muhammad Paigambar: ಪ...
11-04-25 03:28 pm
G Category Land, Nalin Kateel: ನಳಿನ್ ಕುಮಾರ್ ಗ...
10-04-25 04:40 pm
10-04-25 09:10 pm
HK News Desk
ಪಂಬನ್ ಸೇತುವೆ ಬೆನ್ನಲ್ಲೇ ಲಂಕಾ- ಭಾರತ ರೈಲ್ವೇ ಯಾನ...
10-04-25 01:25 pm
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
ಡೊನಾಲ್ಡ್ ಟ್ರಂಪ್ ಸುಂಕ ಬರೆಗೆ ಜಗತ್ತು ತಲ್ಲಣ ; ಕೋವ...
07-04-25 10:53 pm
11-04-25 02:49 pm
Mangalore Correspondent
Mangalore, Kolya, accident: ತೆಂಗಿನ ಮರದಿಂದ ಕೆಳ...
11-04-25 10:35 am
Mangalore Airport, MP Brijesh Chowta: ಮಂಗಳೂರು...
10-04-25 10:41 pm
Mangalore, Netravati Bridge Repair, Traffic b...
10-04-25 09:48 pm
Mangalore Accident, Padil: ಪಡೀಲ್ ; ಚಾಲಕನ ನಿಯಂ...
09-04-25 10:57 pm
12-04-25 01:53 pm
HK Staff
Cyber Command Centre, Bangalore: ದೇಶದ ಮೊದಲ ಸೈ...
11-04-25 04:38 pm
Davanagere Murder, Suicide, Crime: ಪ್ರೀತಿಸಿ ಮ...
11-04-25 01:52 pm
Mangalore Auto Driver, Kunjathbail, Body, Cri...
11-04-25 11:42 am
Davanagere, Alcohol, Murder: ದಾವಣಗೆರೆ ; ಮದ್ಯ...
10-04-25 08:41 pm