ಬ್ರೇಕಿಂಗ್ ನ್ಯೂಸ್
10-11-25 09:08 pm HK News Desk ದೇಶ - ವಿದೇಶ
ನವದೆಹಲಿ, ನ.10 : ರಾಜಧಾನಿ ದೆಹಲಿಯ ಚಾಂದಿನಿ ಚೌಕ್ ಬಳಿಯ ಕೆಂಪುಕೋಟೆ ಮೆಟ್ರೋ ಸ್ಟೇಶನ್ ಎದುರಲ್ಲಿ ಭಾರೀ ಪ್ರಮಾಣದ ಬಾಂಬ್ ಸ್ಫೋಟ ಸಂಭವಿಸಿದೆ. ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಬ್ಲಾಸ್ಟ್ ಆಗಿದ್ದು, ಸ್ಥಳದಲ್ಲಿದ್ದ ಜನರು ಛಿದ್ರ ಛಿದ್ರಗೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಕೆಲವರ ದೇಹದ ಕೈ ಕಾಲುಗಳು ದೂರದ ರಸ್ತೆಯಲ್ಲಿ, ದೂರದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲ್ಗಡೆ ಬಿದ್ದಿದ್ದವು.
ಬ್ಲಾಸ್ಟ್ ಬೆನ್ನಲ್ಲೇ ಆಸುಪಾಸಿನಲ್ಲಿದ್ದ ವಾಹನಗಳಿಗೂ ಬೆಂಕಿ ಹಬ್ಬಿದ್ದು ಜನ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಅನಾಹುತ ನಡೆದುಹೋಗಿತ್ತು. ಆಸುಪಾಸಿನ ಕಟ್ಟಡಗಳ ಕಿಟಕಿ ಗಾಜು ಒಡೆದು ಹೋಗಿದ್ದು ದೂರದಲ್ಲಿ ನಿಲ್ಲಿಸಿರುವ ಕಾರುಗಳ ಗಾಜು ಚೂರು ಚೂರಾಗಿ ಬಿದ್ದಿದೆ. ಇದು ಸ್ಫೋಟದ ತೀವ್ರತೆಯನ್ನು ಹೇಳುತ್ತಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಸಾವಿನ ಸಂಖ್ಯೆ ಹತ್ತಕ್ಕೇರಿದ್ದು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.




ಸ್ಥಳದಲ್ಲಿ ಎನ್ಐಎ ಕಾರ್ಯಾಚರಣೆ ಆರಂಭಿಸಿದ್ದು ಪ್ರಬಲ ಬಾಂಬ್ ಸ್ಫೋಟದ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಉಗ್ರವಾದಿ ಕೃತ್ಯವೇ ಆಗಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 6.50ರ ಸುಮಾರಿಗೆ ಬ್ಲಾಸ್ಟ್ ಸಂಭವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಘಟನೆ ಬೆನ್ನಲ್ಲೇ ಚಾಂದಿನಿ ಚೌಕ್ ಪರಿಸರವನ್ನು ಕ್ಲೋಸ್ ಮಾಡಲಾಗಿದ್ದು ಆಸುಪಾಸಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸ್ಥಳದಲ್ಲಿ ಎನ್ಐಎ ಶೋಧ ನಡೆಸಿದ್ದು ಅಲ್ಲಿ ಬಿದ್ದಿರುವ ಸೂಕ್ಷ್ಮ ವಸ್ತುಗಳನ್ನು ಆಧರಿಸಿ ಯಾವ ರೀತಿಯ ಬಾಂಬ್ ಎನ್ನುವುದನ್ನು ದೃಢ ಪಡಿಸಲಿದೆ.
ಘಟನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಹೈ ಎಲರ್ಟ್ ಮಾಡಲಾಗಿದೆ. ಉತ್ತರ ಪ್ರದೇಶ ರಾಜ್ಯಾದ್ಯಂತ ಅಲರ್ಟ್ ಘೋಷಿಸಿದ್ದು ಸಿಎಂ ಯೋಗಿ ಆದಿತ್ಯನಾಥ್ ಪೊಲೀಸ್ ಇಲಾಖೆಯನ್ನು ಕಟ್ಟೆಚ್ಚರದಲ್ಲಿ ಇರಲು ಸೂಚಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ, ಎನ್ಐಎ ಡಿಐಜಿ ಬಳಿಯಿಂದ ವಿವರಣೆ ಕೇಳಿದ್ದಾರೆ.
ಸೋಮವಾರ ಬೆಳಗ್ಗೆ ದೆಹಲಿ ಹೊರವಲಯದ ಫರೀದಾಬಾದ್ ನಲ್ಲಿ ಅಮೋನಿಯಂ ನೈಟ್ರೇಟ್, ಆರ್ ಡಿಎಕ್ಸ್ ಸೇರಿದಂತೆ 2900 ಕೇಜಿ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದರ ಬೆನ್ನಲ್ಲೇ ದೆಹಲಿಯಲ್ಲಿ ಬಾಂಬ್ ಸ್ಫೋಟ ಆಗಿರುವುದು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ.
In a major anti-terror breakthrough, a joint team of the Jammu and Kashmir Police and Haryana Police busted an interstate terror module linked to banned terrorist organisations and recovered more than 2,900 kilograms of suspected ammonium nitrate, a chemical used in making explosives, along with an assault rifle and a large cache of arms from doctors associated with a medical college in Haryana’s Faridabad, officials said.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
06-12-25 04:58 pm
HK News Desk
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
06-12-25 06:12 pm
Mangalore Correspondent
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm