Lucky Car in Gujarat: ಲಕ್ಕಿ ಕಾರನ್ನು ಸಮಾಧಿ ಮಾಡಿದ ಬಿಲ್ಡರ್, ಅದೃಷ್ಟ ತಂದ ಕಾರನ್ನು ಮಾರಲು ಇಷ್ಟವಿಲ್ಲ, ತನ್ನಲ್ಲೇ ಇರಲೆಂದು ಅಲಂಕರಿಸಿ ಹೂತಿಟ್ಟ ಗುಜರಾತ್ ಉದ್ಯಮಿ  

09-11-24 02:19 pm       HK News Desk   ದೇಶ - ವಿದೇಶ

ಗುಜರಾತಿನ ಬಿಲ್ಡರ್ ಕುಟುಂಬವೊಂದು ತಮ್ಮ ಹಳೆಯ ಕಾರನ್ನು ಅಲಂಕರಿಸಿ ಪೂಜೆ ಮಾಡಿ ಅದ್ದೂರಿಯಾಗಿ ಸಮಾಧಿ ಮಾಡಿದ ಘಟನೆ ನಡೆದಿದ್ದು, ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಸೂರತ್, ನ.9: ಗುಜರಾತಿನ ಬಿಲ್ಡರ್ ಕುಟುಂಬವೊಂದು ತಮ್ಮ ಹಳೆಯ ಕಾರನ್ನು ಅಲಂಕರಿಸಿ ಪೂಜೆ ಮಾಡಿ ಅದ್ದೂರಿಯಾಗಿ ಸಮಾಧಿ ಮಾಡಿದ ಘಟನೆ ನಡೆದಿದ್ದು, ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಸೂರತ್ ನಲ್ಲಿ ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿರುವ ಸಂಜಯ್ ಪಲ್ಲೋರಾ ಅವರು ತಮ್ಮ 18 ವರ್ಷ ಹಳೆಯ ವ್ಯಾಗನರ್ ಕಾರನ್ನು ಸಮಾಧಿ ಮಾಡಿದ್ದಾರೆ. ಈ ಕಾರು ತನ್ನ ಅದೃಷ್ಟದ ಸಂಕೇತ. ಕಾರು ಕೊಂಡ ಬಳಿಕವೇ ತನಗೆ ಸಂಪತ್ತು ಲಭಿಸಿತ್ತು. ಸಾಮಾನ್ಯ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದವನನ್ನು ದೊಡ್ಡ ಬಿಲ್ಡರನ್ನಾಗಿ ಮಾಡಿದೆ. ಈಗ ನನ್ನಲ್ಲಿ ಐಷಾರಾಮಿ ಆಡಿ ಕಾರು ಇದೆ. ಹಾಗಂತ, ಈ ಹಳೆಯ ಕಾರನ್ನು ಗುಜಿರಿಗೆ ಹಾಕಲು ಇಷ್ಟವಿಲ್ಲ. ಬದಲಿಗೆ, ತನ್ನ ತೋಟದಲ್ಲಿ ಸಮಾಧಿ ಮಾಡಿದ್ದೇನೆ ಎಂದಿದ್ದಾರೆ.

₹4 lakh, 1500 attendees': Gujarat family performs 'last rites' of 'lucky'  car, holds burial ceremony. Viral video | Trending - Hindustan Times

Gujarat family spends Rs 4 lakh on burial ceremony for 'lucky' WagnorR car;  1,500 people attend

A lucky car given Samadhi with last rites ceremony as per Hindu customs in  rural Amreli | DeshGujarat

ಕಾರನ್ನು ಗುಲಾಬಿ ಹೂವುಗಳಿಂದ ಅಲಂಕರಿಸಿ, ಕುಟುಂಬಸ್ಥರೆಲ್ಲ ಸೇರಿ ಅರ್ಚಕರ ಮೂಲಕ ಪೂಜೆ ಮಾಡಿಸಿದ್ದಾರೆ. ಆನಂತರ, 15 ಅಡಿ ಆಳದ ಗುಂಡಿ ತೋಡಿ ಅದಕ್ಕೆ ಕಾರನ್ನು ಇಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನರು ಸೇರಿದ್ದು, ಬಳಿಕ ಮಣ್ಣಿನಲ್ಲಿ ಹೂತಿದ್ದಾರೆ. ಬಿಲ್ಡರ್ ತನ್ನ ಅದೃಷ್ಟದ ಕಾರನ್ನು ಮಾರುವುದಕ್ಕೆ ಮುಂದಾಗದೇ ತನ್ನ ಜಾಗದಲ್ಲೇ ಇರಲಿ ಎಂದು ಸಮಾಧಿ ಮಾಡಿದ್ದು, ಸಾವಿರಾರು ಜನರು ಸೇರಿ ಬಿಲ್ಡರ್ ಕೆಲಸಕ್ಕೆ ಸಾಥ್ ನೀಡಿದ್ದಾರೆ.

There are times when inanimate objects can hold significant sentimental value for a person and a family’s gesture for their 12-year-old car is one fine example. Reportedly, a family in Gujarat said goodbye to the vehicle with a burial ceremony. Costing over ₹4 lakh, the event was attended by nearly 1500 people.