ಬ್ರೇಕಿಂಗ್ ನ್ಯೂಸ್
14-11-24 11:11 pm HK News Desk ದೇಶ - ವಿದೇಶ
ನವದೆಹಲಿ, ನ.15: ಭಾರತೀಯ ರೈಲ್ವೇ ಹೊಸ ಇತಿಹಾಸ ನಿರ್ಮಿಸಲು ಹೊರಟಿದೆ. ಇಲೆಕ್ಟ್ರಿಸಿಟಿ ಬೇಡ, ಡೀಸೆಲ್ ಕೂಡ ಬೇಡ. ಕೇವಲ ನೀರಿನಿಂದಲೇ ಸಂಚರಿಸಬಲ್ಲ ರೈಲನ್ನು ಚಾಲ್ತಿಗೆ ತರಲಿದೆ. ಹೌದು, ಭಾರತೀಯ ರೈಲ್ವೇಯಿಂದ ಮೊದಲ ಹೈಡ್ರೋಜನ್ ಟ್ರೈನ್ ಸೇವೆ ಆರಂಭಿಸಲಿದೆ. ಎಲ್ಲವೂ ಅಂದ್ಕೊಂಡ ರೀತಿಯಲ್ಲೇ ಆದಲ್ಲಿ ಇದೇ ಡಿಸೆಂಬರ್ ನಲ್ಲಿ ಹೊಸ ರೈಲು ಟ್ರಯಲ್ ರನ್ ಆರಂಭಿಸಲಿದೆ.
ಈ ರೈಲಿಗೆ ನೀರೇ ಇಂಧನ. ಇದು ಹೈಡ್ರೋಜನ್ ಪವರ್ ನಲ್ಲಿ ಸಾಗಬಲ್ಲ ಎಂಜಿನ್ ರೈಲಾಗಿದ್ದು ನೀರು ಹಾಗೂ ಬಿಸಿ ಹವೆ ಮೂಲಕ ಮುಂದೆ ಸಾಗಲಿದೆ. ವಿಶೇಷ ಅಂದರೆ ಇದರಿಂದ ಮಾಲಿನ್ಯ ಶೂನ್ಯವಾಗಿರುತ್ತದೆ. ಪರಿಸರ ಸ್ನೇಹಿ ಅಷ್ಟೇ ಅಲ್ಲ, ಡೀಸೆಲ್ ಎಂಜಿನ್‍ಗೆ ಹೋಲಿಸಿದರೆ ಶೇಕಡಾ 60 ರಷ್ಟು ಶಬ್ದವೂ ಕಡಿಮೆ. ಮೊದಲ ಹಂತದಲ್ಲಿ ದೇಶಾದ್ಯಂತ 35 ಹೈಡ್ರೋಜನ್ ರೈಲು ಸೇವೆ ಆರಂಭಿಸಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ.
ನೀರಿನಲ್ಲಿ ಚಲಿಸುವ ರೈಲು ಅನ್ನೋ ಕಾರಣ ಇದರ ವೇಗದಲ್ಲಿ ರಾಜಿಯಿಲ್ಲ. ಗಂಟೆಗೆ 140 ಕಿ.ಮೀ. ವೇಗದಲ್ಲಿ ಹೈಡ್ರೋಜನ್ ರೈಲು ಓಡಲಿದೆಯಂತೆ. ಒಂದು ಬಾರಿ ನೀರು ತುಂಬಿಸಿ ಪ್ರಯಾಣ ಆರಂಭಿಸಿದರೆ 1,000 ಕಿ.ಮೀ. ದೂರ ಕ್ರಮಿಸಲಿದೆ ಎನ್ನುವುದು ಲೆಕ್ಕಾಚಾರ. ನೀರು ತುಂಬಿಸುವುದು ಸವಾಲೇ ಅಲ್ಲ. ಹಾಗಾಗಿ ಅತಿ ಕಡಿಮೆ ವೆಚ್ಚದಲ್ಲಿ ರೈಲು ಓಡಲಿದ್ದು ಎಲ್ಲಾ ದೃಷ್ಟಿಯಿಂದಲೂ ಭಾರತೀಯ ಸಾರಿಗೆಯಲ್ಲಿ ಹೊಸ ಕ್ರಾಂತಿ ಮಾಡಲಿದೆ.
ಮೊದಲ ಹಂತದಲ್ಲಿ ಹೈಡ್ರೋಜನ್ ರೈಲು ಹರ್ಯಾಣದ ಜಿಂದ್-ಸೋನಿಪತ್ ನಡುವಿನ ಮಾರ್ಗದಲ್ಲಿ ಸಂಚರಿಸಲಿದೆ. 90 ಕಿಲೋಮೀಟರ್ ಉದ್ದಕ್ಕೆ ಸಂಚಾರ ಮಾಡಲಿದೆ. ಆರಂಭದಲ್ಲಿ ಡಾರ್ಜಲಿಂಗ್ ಹಿಮಾಲಯನ್ ರೈಲ್ವೇ, ನೀಲಗಿರಿ ಮೌಂಟೈನ್ ರೈಲ್ವೇ, ಕಾಲ್ಕಾ ಶಿಮ್ಲಾ ರೈಲ್ವೇ ಸೇರಿದಂತೆ ಹಲವು ಇಕೋ ಸೆನ್ಸೀಟೀವ್ ವಲಯದಲ್ಲಿ ರೈಲು ಸಂಚರಿಸಲಿದೆ. ಮಳೆ, ಬಿಸಿಲು ಸೇರಿದಂತೆ ಎಲ್ಲ ರೀತಿಯ ಹವಾಮಾನಗಳಲ್ಲೂ ಈ ರೈಲು ಓಡಿದರೆ, ಭಾರತದಲ್ಲಿ ಹೊಸ ಕ್ರಾಂತಿಯೇ ಆಗಲಿದೆ.
Indian Railways, one of the largest rail networks in the world, is all set to transform travel with a new, eco-friendly train that won’t need diesel or electricity.This upcoming “water-powered" hydrogen train will soon be hitting the tracks, showcasing the next step in rail transport for India.
04-04-25 10:54 pm
HK News Desk
Mla Pradeep Eshwar, H D Kumaraswamy: ಕುಮಾರಸ್ವ...
04-04-25 09:55 pm
Waqf Amendment, Deve Gowda, Rajya Sabha: ವಕ್ಫ...
04-04-25 12:00 pm
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
04-04-25 11:07 pm
Mangalore Correspondent
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm