ಬ್ರೇಕಿಂಗ್ ನ್ಯೂಸ್
27-11-24 12:36 pm HK News Desk ದೇಶ - ವಿದೇಶ
ತ್ರಿಶ್ಶೂರ್, ನ.27: ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿಯೊಂದು ರಸ್ತೆ ಬದಿ ಮಲಗಿದ್ದ ಅಲೆಮಾರಿಗಳ ಮೇಲೆ ಚಲಿಸಿದ ಪರಿಣಾಮ ಇಬ್ಬರು ಮಕ್ಕಳ ಸಹಿತ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೇರಳದ ತ್ರಿಶ್ಶೂರ್ ಜಿಲ್ಲೆಯ ತ್ರಿಪ್ರಯಾರ್ ಎಂಬಲ್ಲಿ ನಡೆದಿದೆ.
ಕಣ್ಣೂರಿನಿಂದ ಎರ್ನಾಕುಲಂ ಕಡೆಗೆ ತೆರಳುತ್ತಿದ್ದ ಲಾರಿ ನಸುಕಿನಲ್ಲಿ ರಸ್ತೆ ಬದಿ ಮಲಗಿದ್ದ ಅಲೆಮಾರಿ ಕುಟುಂಬಸ್ಥರ ಮೇಲೆ ನುಗ್ಗಿದೆ. ಘಟನೆಯಲ್ಲಿ ಕಾಳಿಯಪ್ಪನ್(50), ನಾಗಮ್ಮ(39), ಬಂಗಾಯಿ(28), ಜೀವನ್ (4) ಮತ್ತು ಇನ್ನೊಂದು ಮಗು ಮೃತಪಟ್ಟಿದೆ. ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಡೈವರ್ಶನ್ ಬೋರ್ಡ್ ಕಾಣಿಸದೆ ಲಾರಿ ಚಾಲಕ ನೇರವಾಗಿ ನುಗ್ಗಿಸಿದ್ದಾನೆ. ಚಾಲಕ ಮತ್ತು ಕ್ಲೀನರ್ ಮದ್ಯ ಸೇವಿಸಿದ್ದು, ಘಟನೆ ಸಂದರ್ಭದಲ್ಲಿ ಕ್ಲೀನರ್ ಲಾರಿ ಚಲಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಂಬರ್ ಲಾರಿ ಚಾಲಕ ಕಣ್ಣೂರು ಆಲಂಗೋಡ್ ನಿವಾಸಿ ಜೋಸ್ (54) ಮತ್ತು ಕ್ಲೀನರ್ ಅಲೆಕ್ಸ್ (35) ಅವರನ್ನು ಬಂಧಿಸಲಾಗಿದೆ. ಲಾರಿ ಚಾಲಕ ಮತ್ತು ಕ್ಲೀನರ್ ಪ್ರಯಾಣದುದ್ದಕ್ಕೂ ಮದ್ಯ ಸೇವಿಸುತ್ತ ಬಂದಿದ್ದರು. ಅತಿಯಾದ ಮದ್ಯ ಸೇವನೆ ತಪಾಸಣೆ ವೇಳೆ ಪತ್ತೆಯಾಗಿದೆ. ಇದಕ್ಕಾಗಿ ಇವರ ಮೇಲೆ ಉದ್ದೇಶಪೂರ್ವಕ ಕೊಲೆ ಎನ್ನುವ ನೆಲೆಯಲ್ಲಿ ಕೇಸು ದಾಖಲಿಸಲಾಗಿದೆ. ಪೊನ್ನಾನಿಯಿಂದ ಕ್ಲೀನರ್ ಅಲೆಕ್ಸ್ ಲಾರಿ ಚಲಾಯಿಸಿದ್ದು, ಆತನಲ್ಲಿ ಡ್ರೈವಿಂಗ್ ಲೈಸನ್ಸ್ ಇಲ್ಲ. ಡಿವೈಡರ್ ಮತ್ತು ಬ್ಯಾರಿಕೇಡ್ ನೋಡದೆ ಲಾರಿ ಚಲಾಯಿಸಿದ್ದು, 50 ಮೀಟರ್ ಮುನ್ನುಗ್ಗಿ ಬಂದ ಮೇಲೆ ರಸ್ತೆ ಬದಿ ಮಲಗಿದ್ದವರ ಮೇಲೆ ಹಾಯಿಸಿದ್ದಾನೆ. ಸಾರಿಗೆ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.
In a tragic incident at Nattika in Thrissur district, a lorry carrying timber lost control and rammed into a group of people who were sleeping, killing five of them, including two children. The accident took place around 4 a.m. on Tuesday (November 26, 2024).
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm