ಬ್ರೇಕಿಂಗ್ ನ್ಯೂಸ್
03-01-25 06:22 pm HK News Desk ದೇಶ - ವಿದೇಶ
ಬೀಜಿಂಗ್, ಜ.3: ಕೋವಿಡ್ ಸೋಂಕಿನ ಮಾದರಿಯಲ್ಲೇ ಐದು ವರ್ಷಗಳ ಬಳಿಕ ಚೀನಾದಲ್ಲಿ ಮತ್ತೊಂದು ರೀತಿಯ ವೈರಸ್ ಸೋಂಕು ಕಾಣಿಸಿಕೊಂಡಿದೆ. ಹ್ಯೂಮನ್ ಮೆಟಾ ನ್ಯೂಮೋ ವೈರಸ್ (ಎಚ್ ಎಂಪಿವಿ) ಎಂದು ಕರೆಯಲಾಗುವ ಈ ವೈರಸ್ ನಿಂದಾಗಿ ಕೋವಿಡ್ ರೀತಿಯಲ್ಲಿ ಜನರು ಸೋಂಕಿಗೆ ಒಳಗಾಗಿದ್ದಾರೆ.
ಉತ್ತರ ಚೀನಾದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವ ಈ ಸೋಂಕಿನಿಂದಾಗಿ ತೀವ್ರ ಆತಂಕಿತರಾಗಿದ್ದಾರೆ. ಜನರು ಮಾಸ್ಕ್ ಧರಿಸಿಕೊಂಡು ಓಡಾಡುತ್ತಿದ್ದಾರೆ. ಎಲ್ಲ ವಯೋಮಾನದವರೂ ಈ ಸೋಂಕಿಗೆ ತುತ್ತಾಗುತ್ತಿದ್ದು, ಮಕ್ಕಳೇ ಹೆಚ್ಚು ಬಾಧಿತರಾಗುತ್ತಿದ್ದಾರೆ. ಚೀನಾದಲ್ಲಿ ಗಂಭೀರ ಸ್ಥಿತಿಯಿದ್ದರೂ, ಈ ಬಗ್ಗೆ ಅಧಿಕೃತವಾಗಿ ತುರ್ತು ಸ್ಥಿತಿಯೆಂದು ಘೋಷಣೆ ಮಾಡಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯೂ ಈ ಬಗ್ಗೆ ತುರ್ತು ಸ್ಥಿತಿ ಘೋಷಣೆ ಮಾಡಿಲ್ಲ.
ಉತ್ತರ ಏಶ್ಯಾ ದೇಶಗಳಲ್ಲಿ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಹಾಂಕಾಂಗ್ ನಲ್ಲಿಯೂ ಇದೇ ಮಾದರಿಯ ಸೋಂಕು ಕಾಣಿಸಿಕೊಂಡಿದೆ. ಜಪಾನ್ ದೇಶದಲ್ಲೂ ಸೋಂಕಿನ ಬಗ್ಗೆ ಅಲರ್ಟ್ ಮಾಡಲಾಗಿದೆ. ಜಪಾನ್ ನಲ್ಲಿ 94 ಸಾವಿರಕ್ಕೂ ಹೆಚ್ಚು ಮಂದಿಗೆ ಫ್ಲು ಮಾದರಿಯ ಸೋಂಕು ಕಾಣಿಸಿಕೊಂಡಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. 2001ರಲ್ಲಿ ಮೊದಲ ಬಾರಿಗೆ ಎಚ್ ಎಂಪಿವಿ ಸೋಂಕು ದೃಢಪಟ್ಟಿದ್ದರೂ, ಈ ಬಗ್ಗೆ ವ್ಯಾಕ್ಸಿನ್ ಬಳಕೆಗೆ ಬಂದಿಲ್ಲ. ಸಾಮನ್ಯ ಶೀತದ ಮಾದರಿಯಲ್ಲೇ ಜ್ವರ, ಕೆಮ್ಮು, ನೆಗಡಿ ಇದರ ಲಕ್ಷಣವಾಗಿದ್ದು, ಆನಂತರ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಗಂಭೀರ ಸ್ಥಿತಿಯಾದರೆ ತೀವ್ರ ತರದ ನ್ಯುಮೋನಿಯಾ ಆಗುತ್ತದೆ. ಚಿಕಿತ್ಸೆ ಸ್ಪಂದಿಸದಿದ್ದಲ್ಲಿ ಮರಣ ಸಂಭವಿಸುವ ಸಾಧ್ಯತೆಯೂ ಇರುತ್ತದೆ.
ಉತ್ತರ ಚೀನಾ ಪ್ರಾಂತ್ಯದಲ್ಲಿ 14 ವರ್ಷದ ಒಳಗಿನ ಮಕ್ಕಳಿಗೆ ಹೆಚ್ಚಾಗಿ ಈ ಸೋಂಕು ಕಾಣಿಸಿಕೊಂಡಿದೆ ಎಂದು ರಾಯಿಟರ್ಸ್ ಪತ್ರಿಕೆ ವರದಿ ಮಾಡಿದೆ. ಹೀಗಾಗಿ ಸೋಂಕು ಭಾರತಕ್ಕೂ ಹರಡುವ ಭೀತಿ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ.ಅರುಣ್ ಗುಪ್ತ, ಇದು ಕೋವಿಡ್ ಸೋಂಕಿನ ರೀತಿಯದ್ದೇ ಮತ್ತೊಂದು ಸೋಂಕು. ನಿಗಾ ವಹಿಸುವ ಅಗತ್ಯವಿದೆ. ಹಾಗಂತ, ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
China is grappling with a surge of respiratory illnesses, notably human metapneumovirus (HMPV), as winter sets in. The outbreak comes five years after the outbreak of the deadly Covid-19 pandemic with various reports suggesting that hospitals and crematories are struggling to cope with the rising number of cases. Social media posts and online videos depict overcrowded hospitals, while some users claim that multiple viruses, including HMPV, influenza A, Mycoplasma pneumoniae, and even Covid-19.
16-01-25 05:30 pm
HK News Desk
Sp Belagavi, Minister Laxmi Hebbalkar car acc...
15-01-25 09:17 pm
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
16-01-25 09:01 pm
HK News Desk
Actor Saif Ali Khan attack stabbed: ಬಾಲಿವುಡ್...
16-01-25 04:24 pm
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
ಮಹಾ ಕುಂಭ ಮೇಳಕ್ಕೆ ಗೂಗಲ್ ಪುಷ್ಪ ವೃಷ್ಟಿ ! ಮೊಬೈಲ್...
14-01-25 07:18 pm
17-01-25 11:10 pm
Mangalore Correspondent
Mangalore court, Rape, Crime: ಇನ್ಸ್ಟಾಗ್ರಾಮ್ ನ...
17-01-25 10:58 pm
Ullal News, Mangalore: ಸೋಮೇಶ್ವರ ; ಬಾಡಿಗೆ ಮನೆಯ...
17-01-25 10:50 pm
Mangalore Koteker Bank Robbery, MP Brijesh Ch...
17-01-25 10:36 pm
CM Siddaramaiah, RGUHS Mangalore; ರಾಜೀವ ಗಾಂಧಿ...
17-01-25 07:42 pm
17-01-25 07:58 pm
Mangaluru Correspondent
Kotekar Bank Robbery, Mangalore Crime; ಬೀದರ್...
17-01-25 03:02 pm
Bidar SBI Bank Robbery Update, Hyderabad Firi...
17-01-25 02:48 pm
Bidar SBI Bank Robbery; ಬೀದರ್; ATM ಹಣಹಾಕಲು ಬಂ...
16-01-25 03:10 pm
Fake Stock Market scam, Mangalore, Police: ನಕ...
15-01-25 11:06 pm