ಬ್ರೇಕಿಂಗ್ ನ್ಯೂಸ್
15-01-25 10:06 pm HK News Desk ದೇಶ - ವಿದೇಶ
ನವದೆಹಲಿ, ಜ 15: ಇಂದು ಕಾಂಗ್ರೆಸ್ ಪಕ್ಷದ ನೂತನ ಕಚೇರಿ ಇಂದಿರಾ ಭವನ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ. ಇದನ್ನು ಕಟ್ಟಿರುವುದು ಪ್ರಖ್ಯಾತ ನಿರ್ಮಾಣ ಸಂಸ್ಥೆಯಾದ ಲಾರ್ಸನ್ & ಟೂಬ್ರೋ (L&T) ಕಂಪನಿಯವರು.
ಆದರೆ ಇತ್ತೀಚೆಗೆ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎನ್ನುವ ಎಲ್-ಟಿ ಸಿಇಒ ಹೇಳಿಕೆ ಭಾರಿ ವಿರೋಧಕ್ಕೆ ಕಾರಣವಾಗಿದೆ. ಇನ್ನು ತಮ್ಮ ಪಕ್ಷದ ಕಚೇರಿ ನಿರ್ಮಿಸಿದ್ದರೂ L&T ಸಿಇಒ ಹೇಳಿಕೆ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.
ಇಂದು ಇಂದಿರಾ ಭವನ ಉದ್ಘಾಟಿಸಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಅವರು ಮೊದಲಿಗೆ ತಮಗೆ ಭವ್ಯವಾದ ಕಾಂಗ್ರೆಸ್ ಕಚೇರಿ ನಿರ್ಮಿಸಿ ಕೊಟ್ಟಿದಕ್ಕಾಗಿ L&T ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಭಾಷಣದ ವೇಳೆ, ನಾನು ಎಲ್-ಟಿ ನಿರ್ಮಾಣ, ವಾಸ್ತುಶಿಲ್ಪಿಗಳು, ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.
ಈ ವಿಚಾರವಾಗಿ ನಾನು ಒಟ್ಟಾರೆಯಾಗಿ ಕಂಪನಿಗೆ ಧನ್ಯವಾದ ಹೇಳುತ್ತೇನೆ. ಆದರೆ ಕಂಪನಿಯ ಸಿಇಒ ಅವರು ವಾರದಲ್ಲಿ 90 ಗಂಟೆಗಳ ಕಾಲ ಕೆಲಸ ಬಗ್ಗೆ ಮಾತನಾಡಿದ್ದಾರೆ. ಅದನ್ನು ನಾನು ಕೂಡ ಒಪ್ಪುವುದಿಲ್ಲ ಎಂದು ಸರಾಸಗಟಾಗಿ ಹೇಳಿದ್ದಾರೆ.
ಇದೇ ವೇಳೆ ಜವಾಹರಲಾಲ್ ನೆಹರೂ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ನಾಯಕರಿಂದ ಸ್ಥಾಪಿಸಲಾದ ಕಾರ್ಮಿಕ ಕಾನೂನುಗಳ ಮಹತ್ವವನ್ನು ಕಾಂಗ್ರೆಸ್ ಮುಖ್ಯಸ್ಥರಾದ ಮಲ್ಲಿಕಾರ್ಜುನ್ ಖರ್ಗೆ ಉಲ್ಲೇಖಿಸಿದ್ದಾರೆ. ಒಬ್ಬ ಕೂಲಿ ಮಾಡುವವನು ಎಂಟು ಗಂಟೆ ಕೆಲಸ ಮಾಡಿ ಸುಸ್ತಾಗುತ್ತಾನೆ. ಅದಕ್ಕಾಗಿಯೇ ನೆಹರೂ ಹಾಗೂ ಅಂಬೇಡ್ಕರ್ ಅವರು ಕಾರ್ಮಿಕ ಕಾಯಿದೆಯನ್ನು ರಚಿಸುವಾಗ ಕಾರ್ಮಿಕರನ್ನು ಎಂಟು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸಬಾರದು ಎಂದು ಹೇಳಿದ್ದರು. ಇದನ್ನೇ ನಾನು ನಂಬಿದ್ದೇವೆ ಎಂದು ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾರೋ ಒಂಬತ್ತು ಗಂಟೆಗಳ ಕಾಲ ಕೆಲಸದ ಅವಧಿ ಬಗ್ಗೆ ಹೇಳಿದರು. ಆದರೆ ಎಲ್&ಟಿ ಮುಖ್ಯಸ್ಥರು ಈಗ 12 ಗಂಟೆ, 14 ಗಂಟೆಗಳ ಕಾಲ ಮಾತನಾಡುತ್ತಿದ್ದಾರೆ. ಆ ದೃಷ್ಟಿಕೋನವನ್ನ ಅವರು ಮೊದಲು ಬಿಡ್ಬೇಕು ಎಂದು ಖರ್ಗೆ ಸಲಹೆ ನೀಡಿದ್ದಾರೆ.
ಎಲ್&ಟಿ ಸಿಇಒ ಸುಬ್ರಮಣಿಯನ್ ಅವರು ಇತ್ತೀಚೆಗೆ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ್ದರು. ಈ ಹೇಳಿಕೆ ಬಗ್ಗೆ ದೇಶದಾದ್ಯಂತ ಭಾರೀ ವಿರೋಧ ಎದುರಿಸುತ್ತಿದೆ. ಕಾರ್ಮಿಕ ವಲಯದಿಂದ ಈ ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿದೆ.
ಐಟಿ ವಲಯದ ಸಿಬ್ಬಂದಿಯಂತೂ ಈ ಹೇಳಿಕೆ ನೀಡಿದ ಎಲ್&ಟಿ ಸಿಇಒಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದಾರೆ. ಇದಕ್ಕೂ ಮುನ್ನ ಇನ್ಫೋಸಿಸ್‌ನ ನಾರಾಯಣಮೂರ್ತಿ ಅವರು ವಾರಕ್ಕೆ 70 ದಿನಗಳು ಕೆಲಸ ಮಾಡುವಂತೆ ಯುವಜನರಿಗೆ ಕರೆ ನೀಡಿದ್ದರು. ಇದಕ್ಕೂ ದೇಶದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.
Congress chairman Mallikarjun Kharge on Wednesday took a jibe at Larsen & Toubro chairman SN Subrahmanyan over his recent suggestion of a 90-hour work week while rejecting his proposal and recalled that former prime minister Jawaharlal Nehru and BR Ambedkar had advocated that workers should not be made to work for more than eight hours in a day.
15-01-25 09:17 pm
HK News Desk
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
Keonics, Priyank Kharge; ದಯಾಮರಣಕ್ಕಾಗಿ ರಾಷ್ಟ್ರ...
15-01-25 12:19 pm
15-01-25 10:51 pm
HK News Desk
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
ಮಹಾ ಕುಂಭ ಮೇಳಕ್ಕೆ ಗೂಗಲ್ ಪುಷ್ಪ ವೃಷ್ಟಿ ! ಮೊಬೈಲ್...
14-01-25 07:18 pm
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
15-01-25 10:47 pm
Udupi Correspondent
Banner, Nalin Kumar Kateel, D V Sadananda Gow...
15-01-25 08:01 pm
Mangalore crime, Jail; ಮಂಗಳೂರಿನ ಜೈಲಿನಲ್ಲಿ ಕೈದ...
15-01-25 12:09 pm
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
15-01-25 11:06 pm
Mangalore Correspondent
Kerala rape News: ಇನ್ಸ್ಟಾಗ್ರಾಂನಲ್ಲಿ ಪರಿಚಯ, ರ...
14-01-25 10:40 pm
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm