ಬ್ರೇಕಿಂಗ್ ನ್ಯೂಸ್
10-03-25 10:17 pm HK News Desk ದೇಶ - ವಿದೇಶ
ವಾಷಿಂಗ್ಟನ್, ಮಾ 10: ಅಮೆರಿಕದ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ 20 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿಯೋರ್ವಳು, ಪುಂಟಾ ಕಾನಾ ಬೀಚ್‌ನಲ್ಲಿ ನಾಪತ್ತೆಯಾಗಿದ್ದಾಳೆ. ಸ್ಪ್ರಿಂಗ್ ಬ್ರೇಕ್ ಪ್ರವಾಸಕ್ಕೆ ತೆರಳಿದ್ದ ವರ್ಜಿನಿಯಾದ ಆಶ್‌ಬರ್ನ್‌ನ ಸುದೀಕ್ಷಾ ಕೋಣಂಕಿ, ಪುಂಟಾ ಕಾನಾದ ಬೀಚ್‌ನಲ್ಲಿ ಕೊನೆಯ ಬಾರಿಗೆ ಕಂದು ಬಣ್ಣದ ಬಿಕನಿ ತೊಟ್ಟು ನಡೆಯುತ್ತಿದ್ದುದನ್ನು ಸ್ಥಳೀಯರು ನೋಡಿದ್ದಾಗಿ ಮೂಲಗಳು ಖಚಿತಪಡಿಸಿವೆ.
ಕಳೆದ ಮಾರ್ಚ್ 6 ಅಂದ್ರೆ ಗುರುವಾರ ಬೆಳಿಗ್ಗೆ 4:50ಕ್ಕೆ ರಿಯು ರಿಪಬ್ಲಿಕಾ ರೆಸಾರ್ಟ್ ಬೀಚ್‌ನಲ್ಲಿ, ಸುದೀಕ್ಷಾ ಕೊನೆಯದಾಗಿ ಕಾಣಿಸಿಕೊಂಡಿದ್ದಳು.ಆಕೆಯನ್ನು ಕಂದು ಬಣ್ಣದ ಬಿಕನಿ ತೊಟ್ಟು ಬೀಚ್‌ನಲ್ಲಿ ನಡೆದುಕೊಂಡು ಹೋಗಿದ್ದನ್ನು ಸ್ಥಳೀಯರು ನೋಡಿದ್ದರು. ಅದಾದ ಬಳಿಕ ಆಕೆ ನಾಪತ್ತೆಯಾಗಿದ್ದು, ಡೊಮಿನಿಕನ್ ರಿಪಬ್ಲಿಕ್ ಅಧಿಕಾರಿಗಳು ಸುದೀಕ್ಷಾಳಿಗಾಗಿ ಶೋಧ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ
"ಸುದೀಕ್ಷಾ ಸ್ಪ್ರಿಂಗ್ ಬ್ರೇಕ್ ಪ್ರವಾಸಕ್ಕೆಂದು ಪುಂಟಾ ಕಾನಾ ಬೀಚ್‌ಗೆ ತಮ್ಮ ಗೆಳೆಯರೊಂದಿಗೆ ಬಂದಿದ್ದರು. ಆದರೆ ಆಕೆ ಅಷ್ಟು ಬೆಳಗಿನ ಜಾವ ಏಕಾಂಗಿಯಾಗಿ ಬೀಚ್‌ಗೆ ಬಂದಿದ್ದೇಕೆ ಎಂಬುದು ಅಸ್ಪಷ್ಟವಾಗಿದ್ದು, ಆಕೆ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿರಬಹುದೇ ಎಂಬ ಅನುಮಾನ ಕಾಡುತ್ತಿದೆ.." ಎಂದು ಡೊಮೊನಿಕನ್ ರಿಪಬ್ಲಿಕನ್ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸುದೀಕ್ಷಾಳನ್ನ ಹುಡುಕಲು ಮತ್ತು ಸುರಕ್ಷಿತವಾಗಿ ಮನೆಗೆ ಕರೆತರಲು ನಾವು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಆಕೆಯ ಇರುವಿಕೆಯ ಬಗ್ಗೆ ಯಾರಿಗಾದರೂ ಮಾಹಿತಿ ಲಭ್ಯವಾದರೆ, ಲೌಡೌನ್ ಕೌಂಟಿ ಶೆರಿಫ್ ಕಚೇರಿಯನ್ನ ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಅಮೆರಿಕದ ಪ್ರತಿಷ್ಠಿತ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದ ಸುದೀಕ್ಷಾ, ಪುಂಟಾ ಕಾನಾದ ರೆಸಾರ್ಟ್ ಬೀಚ್‌ನಲ್ಲಿ ಪರಿಚಿತರಾದ ಹೊಸ ಗೆಳೆಯರೊಂದಿಗೆ ಬೆಳಗಿನ ಜಾವ 4 ಗಂಟೆಗೆ ಪಾರ್ಟಿ ಮಾಡಲೆಂದು ಬೀಚ್‌ಗೆ ತೆರಳಿದ್ದಳು ಎನ್ನಲಾಗಿದೆ.
ಸದ್ಯ ಮಗಳು ಕಾಣೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುದೀಕ್ಷಾಳ ತಂದೆ ಸುಬ್ಬರಾಯುಡು, "ವೈದ್ಯೆಯಾಗುವ ಕನಸು ಕಂಡಿದ್ದ ನನ್ನ ಮಗಳು ತುಂಬ ಒಳ್ಳೆಯವಳು. ಆಕೆ ಹೀಗೆ ದಿಢೀರ್ ನಾಪತ್ತೆಯಾಗಿರುವುದು ಕುಟುಂಬಸ್ಥರನ್ನು ನಲುಗಿಸಿದೆ. ಅಧಿಕಾರಿಗಳು ದಯವಿಟ್ಟು ನನ್ನ ಮಗಳನ್ನು ಹುಡುಕಿ ಕೊಡಬೇಕಾಗಿ ವಿನಂತಿಸುತ್ತೇನೆ.." ಎಂದು ಗದ್ಗದಿತರಾಗಿ ಹೇಳಿದ್ದಾರೆ.
A 20-year-old Indian-origin student, Sudiksha Konanki, has gone missing from a resort in the Dominican Republic. She was on a spring break trip with friends from the University of Pittsburgh, US, when she disappeared.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm