ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ ಉದುರಿ ಬಿದ್ದ ಗಗನಚುಂಬಿ ಕಟ್ಟಡಗಳು, ನೋಡ ನೋಡುತ್ತಲೇ ಕುಸಿದ ಭೂಮಿ ! ನೂರಾರು ಮಂದಿ ಸಾವಿನ ಶಂಕೆ 

28-03-25 04:15 pm       HK News Desk   ದೇಶ - ವಿದೇಶ

ಭಾರತದ ನೆರೆ ರಾಷ್ಟ್ರ ಮ್ಯಾನ್ಮಾರ್ ನಲ್ಲಿ ಭೀಕರ ಭೂಕಂಪ ಸಂಭವಿಸಿದೆ. ಇಂದು ಬೆಳಗ್ಗೆ 11:50ರ ಸುಮಾರಿಗೆ ಭೂಮಿ ನಡುಗಿದ್ದು ಕ್ಷಣಾರ್ಧದಲ್ಲಿ ಗಗನ ಚುಂಬಿ ಕಟ್ಟಡಗಳು ನೆಲಕ್ಕುರುಳಿ ಬಿದ್ದಿಚೆ. ಮೊದಲ ಕಂಪನದ ತೀವ್ರತೆ 7.2ರಷ್ಟಿದ್ದರೆ, 2ನೇ ಸಲ ಕಂಪನದ ತೀವ್ರತೆ 7ರಷ್ಟು ದಾಖಲಾಗಿದೆ. 

ನವದೆಹಲಿ, ಮಾ.28 : ಭಾರತದ ನೆರೆ ರಾಷ್ಟ್ರ ಮ್ಯಾನ್ಮಾರ್ ನಲ್ಲಿ ಭೀಕರ ಭೂಕಂಪ ಸಂಭವಿಸಿದೆ. ಇಂದು ಬೆಳಗ್ಗೆ 11:50ರ ಸುಮಾರಿಗೆ ಭೂಮಿ ನಡುಗಿದ್ದು ಕ್ಷಣಾರ್ಧದಲ್ಲಿ ಗಗನ ಚುಂಬಿ ಕಟ್ಟಡಗಳು ನೆಲಕ್ಕುರುಳಿ ಬಿದ್ದಿಚೆ. ಮೊದಲ ಕಂಪನದ ತೀವ್ರತೆ 7.2ರಷ್ಟಿದ್ದರೆ, 2ನೇ ಸಲ ಕಂಪನದ ತೀವ್ರತೆ 7ರಷ್ಟು ದಾಖಲಾಗಿದೆ. 

ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲೂ ಭೂಕಂಪನ ಅನುಭವಕ್ಕೆ ಬಂದಿದೆ. ವಿಯೆಟ್ನಾಂ ಸೇರಿದಂತೆ ನೆರೆಯ ದೇಶಗಳಲ್ಲು ಭೂಕಂಪನದ ಅನುಭವವಾಗಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಕಂಪನ ಆಗಿದ್ದರೂ ಯಾವುದೇ ಹಾನಿ ಸಂಭವಿಸಿಲ್ಲ.  

Myanmar Earthquake Live Updates: Myanmar, Thailand declare emergency after  7.7 quake; Indian embassy sets up helplines - The Times of India

Earthquake Today Live Updates: At least three confirmed killed in Thai quake  building collapse, says Deputy PM

Myanmar Earthquake LIVE Updates: 7.7 Magnitude Quake Hits; 4 Killed In  Myanmar, One In Bangkok, 50 Trapped, Tremors Felt In Delhi

Myanmar, Thailand Earthquake LIVE: Media reports claim over 20 dead,  Bangkok suffers massive destruction | World News – India TV

Myanmar earthquake LIVE updates: 3 dead in Bangkok, Indian Embassy issues  helpline numbers

ಮ್ಯಾನ್ಮಾರ್ ದೇಶದ ಎರಡನೇ ಅತಿದೊಡ್ಡ ಮಂಡಾಲೆ ನಗರದಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಈ ನಗರದಿಂದ 17.2 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಇದ್ದು 10 ಕಿಮೀ ಆಳದಿಂದ ಭೂಮಿ ಕಂಪಿಸಿದೆ. ಭಾರತದ ಮಣಿಪುರ, ಪಶ್ಚಿಮ ಬಂಗಾಳದಲ್ಲು ಕಂಪನದ ಅನುಭವ ಆಗಿದೆ. ಅಲ್ಲದೆ, ಬಾಂಗ್ಲಾದೇಶದಲ್ಲು ಕಂಪನ ಉಂಟಾಗಿದೆ. 

Earthquake of magnitude 7.2 on the Richter scale hits Myanmar as per  National Center for Seismology - World News | The Financial Express

Sudden and very strong': 7.7-magnitude earthquake hits central Myanmar, at  least one dead in collapsed building, state of emergency - NZ Herald

Myanmar Earthquake LIVE Updates: 7.7 Magnitude Quake Hits; 4 Killed In  Myanmar, One In Bangkok, 50 Trapped, Tremors Felt In Delhi

Thailand, Myanmar Earthquake: 43 missing after Myanmar's 7.7 quake brings  down under-construction building in Bangkok – Firstpost

Myanmar earthquake effect: New tremors jolt Meghalaya and Manipur - CNBC  TV18

Myanmar earthquake: Massive tremors lead to collapse of bridge, buildings in  Thailand | Watch - CNBC TV18

Myanmar Earthquake Live Updates: Myanmar, Thailand declare emergency after  7.7 quake; Indian embassy sets up helplines - The Times of India

ಥೈಲ್ಯಾಂಡ್ ನಲ್ಲಿ ಕೆಲವಡೆ ಮುಗಿಲೆತ್ತರದ ಕಟ್ಟಗಳು ಧ್ವಂಸವಾದ ದೃಶ್ಯಗಳು ಸೆರೆಯಾಗಿವೆ. ಮ್ಯಾನ್ಮಾರ್ ದೇಶದ ಗಡಿ ಹಂಚಿಕೊಂಡಿರುವ ಚೀನಾ ದೇಶದ ಯುನಾನ್ ಪ್ರಾಂತ್ಯದಲ್ಲಿ ಕಂಪನ ಉಂಟಾಗಿದೆ. ಮ್ಯಾನ್ಮಾರ್ ದೇಶದಲ್ಲಿ ಭಾರೀ ನಾಶ- ನಷ್ಟ ಆಗಿರುವುದರಿಂದ ಎಮರ್ಜೆನ್ಸಿ ಘೋಷಣೆಯಾಗಿದೆ.‌ ನೂರಾರು ಮಂದಿ ಕಟ್ಟಡಗಳ ಗಡಿಭಾಗದಲ್ಲಿ ಸಿಲುಕಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. 

ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಅನೇಕ ಎತ್ತರದ ಕಟ್ಟಡಗಳು ಕ್ಷಣಾರ್ಧದಲ್ಲಿ ನೆಲಸಮಗೊಂಡಿದ್ದು ಇದರ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿವೆ. ನೂರಾರು ಮಂದಿ ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ಗಗನಚುಂಬಿ ಕಟ್ಟಡಗಳಿಗೆ ಹೆಸರಾಗಿರುವ ಬ್ಯಾಂಕಾಕ್ ನಲ್ಲಿ ಜಗತ್ತಿನ ಎಲ್ಲ ದೇಶಗಳ ಜನರಿದ್ದು ಪ್ರವಾಸಕ್ಕೆ ಹೆಸರುವಾಸಿಯಾಗಿದೆ. ಸುಮಾರು 17 ಮಿಲಿಯನ್ ಜನರು ಈ ನಗರದಲ್ಲಿ ವಾಸ ಇದ್ದಾರೆ.

A massive 7.7-magnitude earthquake rocked central Myanmar, unleashing widespread devastation and panic. The quake has claimed at least 20 lives, trapped over 50 people under the rubble, and sent tremors coursing through major cities, including Bangkok, Delhi, Kolkata and Madhya Pradesh.