ಬ್ರೇಕಿಂಗ್ ನ್ಯೂಸ್
06-09-25 10:59 pm Mangalore Correspondent ಕರಾವಳಿ
ಉಳ್ಳಾಲ, ಸೆ.6 : ಮೊದಲ ಪತ್ನಿಯನ್ನು ದೂರಕ್ಕಟ್ಟಿ ಕೋರ್ಟ್ ಆದೇಶವಿದ್ದರೂ ಜೀವನಾಂಶ ನೀಡದೆ ಒಂದು ವರ್ಷದಿಂದ ವಂಚಿಸಿದ್ದಲ್ಲದೆ, ಅರೆಸ್ಟ್ ವಾರೆಂಟ್ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಆರೋಪಿ ಮಾಸ್ತಿಕಟ್ಟೆ ನಿವಾಸಿ ಮಹಮ್ಮದ್ ನವಾಝ್ (34) ಎಂಬಾತನಿಗೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯವು ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಬಬ್ಬುಕಟ್ಟೆಯ ಖಾಸಗಿ ಶಾಲೆಯ ಸ್ಕೂಲ್ ಬಸ್ಸು ಚಾಲಕನಾಗಿದ್ದ ನವಾಝ್ ವಿರುದ್ಧ ಆತನ ಮೊದಲ ಪತ್ನಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಜೀವನಾಂಶದ ದಾವೆ ಹೂಡಿದ್ದರು. ನವಾಝ್ 36 ಸಾವಿರ ರೂಪಾಯಿ ಜೀವನಾಂಶ ನೀಡಬೇಕೆಂದು ಒಂದು ವರ್ಷದ ಹಿಂದೆ ಕೋರ್ಟ್ ಆದೇಶ ಆಗಿತ್ತು. ಆದರೆ ಜೀವನಾಂಶ ನೀಡದೆ ವಂಚನೆ ಮಾಡಿರುವುದಾಗಿ ಮೊದಲ ಪತ್ನಿ ಸೈದಾ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಸೈದಾಗೆ ಜೀವನಾಂಶವನ್ನು ನೀಡದೆ ತಪ್ಪಿಸಿಕೊಳ್ಳುತ್ತಿದ್ದ ಆರೋಪಿ ನವಾಝ್ ವಿರುದ್ಧ ಕಳೆದ ಒಂದು ವರುಷದಿಂದಲೂ ಕೋರ್ಟ್ ವಾರೆಂಟ್ ಗಳನ್ನ ಜಾರಿ ಮಾಡುತ್ತಲೇ ಇತ್ತು. ಸೆ.2ರಂದು ಕೋರ್ಟ್ ನವಾಝ್ ವಿರುದ್ಧ ಮತ್ತೆ ಬಂಧನ ವಾರೆಂಟ್ ಹೊರಡಿಸಿತ್ತು.
ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಪನೀರು ಸಮೀಪದ ಕಾಯರ್ ಪಳಿಕೆ ಎಂಬಲ್ಲಿನ ಮನೆಯೊಂದರಲ್ಲಿ ತಲೆಮರೆಸಿದ್ದ ಆರೋಪಿ ನವಾಝ್ ನನ್ನ ಉಳ್ಳಾಲ ಪೊಲೀಸರು ಶುಕ್ರವಾರ ಮಧ್ಯಾಹ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಪೊಲೀಸರು ಆರೋಪಿಯನ್ನ ಬಂಧಿಸಿ ಕರಕೊಂಡು ಹೋಗುತ್ತಿರುವ ವೇಳೆ ಮನೆಯಲ್ಲಿದ್ದ ನವಾಝ್ ತಾಯಿ ಜುಬೇದ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ವೇಳೆ ಉಳ್ಳಾಲ ಪೊಲೀಸರು ಆರೋಪಿಯ ವಿರುದ್ಧ ಬಂಧನ ವಾರೆಂಟ್ ಇರೋದಾಗಿ ಮಹಿಳೆಯಲ್ಲಿ ಸಮಜಾಯಿಷಿ ನೀಡಿದ್ದರು. ಆದರೂ ಆರೋಪಿಯನ್ನ ಪೊಲೀಸರು ಬಂಧಿಸಿ ಕರೆದುಕೊಂಡು ಹೋಗುವ ದೃಶ್ಯವನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು "ಯಾವುದೇ ವಾರೆಂಟ್ ಇಲ್ಲದೆ ಉಳ್ಳಾಲದ ಭ್ರಷ್ಟ ಪೊಲೀಸರು ನವಾಝ್ ಎಂಬಾತನನ್ನ ಎಳಕೊಂಡು ಹೋಗುತ್ತಿರೋದಾಗಿ ಬಿಂಬಿಸಿ ವೀಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿತ್ತು.
ಜಾಲತಾಣಗಳಲ್ಲಿ ಸುಳ್ಳು ಸಂದೇಶ ಹರಿಬಿಟ್ಟು ಪೊಲೀಸರ ಬಗ್ಗೆ ಅಪನಂಬಿಕೆ ಹುಟ್ಟಿಸುವ ರೀತಿ ಮಾಡಿರುವ ಕೃತ್ಯದ ವಿರುದ್ಧ ಕ್ರಮ ಜರಗಿಸುವಂತೆ ಮಂಗಳೂರು ಕಮೀಷನರ್ ಸುಧೀರ್ ರೆಡ್ಡಿ ಉಳ್ಳಾಲ ಪೊಲೀಸರಿಗೆ ಆದೇಶಿಸಿದ್ದರು. ಕಮಿಷನರ್ ಆದೇಶದಂತೆ ಉಳ್ಳಾಲ ಪೊಲೀಸರು ಆರೋಪಿ ನವಾಝ್ ತಾಯಿ ಜುಬೇದಾ ಮತ್ತು ಆರೋಪಿ ಪರ ವಕೀಲರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.
ಇದೇ ವೇಳೆ, ನವಾಜ್ ವಿರುದ್ಧ ಕಠಿಣ ಕ್ರಮಕ್ಕೆ ಸೈದಾ ಕೋರ್ಟಿಗೆ ಮನವಿ ಮಾಡಿದ್ದರು. ಇದರಂತೆ, ಸೆ.6ರಂದು ಆರೋಪಿ ನವಾಝ್ ಗೆ ಅಕ್ಟೋಬರ್ 5ರ ವರೆಗೆ ಒಂದು ತಿಂಗಳ ಶಿಕ್ಷೆ ವಿಧಿಸಿ ಕೌಟುಂಬಿಕ ನ್ಯಾಯಾಲಯ ಆದೇಶ ಹೊರಡಿಸಿದೆ.
A family court has sentenced a 34-year-old man from Mastikatte to one month in jail for willfully ignoring a court order to pay maintenance to his first wife, and for evading arrest warrants over the past year. The accused, Mohammad Nawaz, a school bus driver at a private institution in Babbukatte, had been ordered by the District Family Court a year ago to pay ₹36,000 as monthly maintenance to his first wife, Saida.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
07-02-26 12:55 pm
HK staffer
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
07-02-26 12:31 pm
Bengaluru staffer
MLA Vedavyas Kamath, Mangalore: ಶಾಸಕ ವೇದವ್ಯಾಸ...
07-02-26 11:47 am
ಅಕ್ರಮ ಸಂಬಂಧವೇ ರಕ್ತಪಾತಕ್ಕೆ ಕಾರಣ.. ನನ್ನ ಹತ್ಯೆಗೆ...
06-02-26 06:36 pm
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm