ಬ್ರೇಕಿಂಗ್ ನ್ಯೂಸ್
03-09-25 09:59 pm HK News Desk ದೇಶ - ವಿದೇಶ
ನವದೆಹಲಿ, ಸೆ. 3 : ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ದೆಹಲಿಯ ಬೀದಿಗಳು ಹೊಳೆಯಂತಾಗಿವೆ. ಅಲ್ಲದೆ ದೆಹಲಿಯ ಮಾರ್ಕೆಟ್ ಗಳು ನದಿ ನೀರಲ್ಲಿ ಮುಳುಗಿದ್ದು, ಎಲ್ಲಿ ನೋಡಿದರಲ್ಲಿ ಕೆಸರು ತುಂಬಿದ ಸನ್ನಿವೇಶಗಳೇ ಕಾಣುತ್ತಿವೆ.
ತಗ್ಗು ಪ್ರದೇಶಗಳು ಪೂರ್ತಿ ನೀರಲ್ಲಿ ಮುಳುಗಿದ್ದು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ದೆಹಲಿಯ ಪ್ರಸಿದ್ಧ ಮಜ್ನು ಕಾ ತಿಲ (ಮಿನಿ ಟಿಬೇಟ್) ಕಾಲೋನಿಯಿಂದ ಹಿಡಿದು, ಮದನ್ ಪುರ, ಖಾದರ್, ಬದರ್ ಪುರ ಮೊದಲಾದೆಡೆಯ ಸಾವಿರಾರು ಕುಟುಂಬಗಳು ಬೇರೆಡೆ ತೆರಳಿದ್ದು ನೀರು ಕಡಿಮೆಯಾಗುವುದನ್ನೇ ಕಾಯುತ್ತಿದ್ದಾರೆ.







ಯಮುನಾ ನದಿ ಬುಧವಾರ ಮಧ್ಯಾಹ್ನ ತನಕವೂ ಅಪಾಯದ ಮಟ್ಟ ಮೀರಿ ಹರಿಯುತಿತ್ತು. ಅಧಿಕಾರಿಗಳು ಅಪಾಯದ ಸ್ಥಳಗಳಿಂದ ಜನರನ್ನು ಸ್ಥಳಾಂತರ ಮಾಡುತ್ತಿದ್ದು, ಹಳೇ ರೈಲ್ವೆ ಬ್ರಿಡ್ಜ್ ನಲ್ಲಿ ವಾಹನ ಸಂಚಾರ ತಡೆ ಹಿಡಿದಿದ್ದಾರೆ. ಸದಾ ಗಿಜಿಗುಟ್ಟುತ್ತಿರುವ ದೆಹಲಿಯ ಮಜ್ನು ಕಾ ತಿಲ ಮಾರುಕಟ್ಟೆ ನೀರಿನಿಂದ ಆವೃತ್ತವಾಗಿದ್ದು ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ಮದನ್ ಪುರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಹಳೇ ಪ್ಲಾಸ್ಟಿಕ್ ಶೀಟುಗಳನ್ನು ಅಡ್ಡ ಹಾಕಿ ಆಶ್ರಯ ಪಡೆದಿದ್ದು ನದಿ ಪ್ರವಾಹ ಕಡಿಮೆಯಾಗುವುದನ್ನು ಕಾಯುತ್ತಿದ್ದಾರೆ. ಬೀದಿನಾಯಿಗಳು ಕೂಡ ಮನೆಯ ಚಾವಣಿ ಏರಿ ಕೆಲವು ಕಡೇ ಆಶ್ರಯ ಪಡೆದಿರುವುದು ಕಂಡು ಬಂದಿದೆ.
ಯಮುನಾ ಬಜಾರ್ ಸಮೀಪ ಮನೆಗಳು ಮತ್ತು ಅಂಗಡಿಗಳು ನೀರಿನ ಮಧ್ಯೆಯೇ ನಿರ್ಮಾಣ ಆಗಿವೆಯೇ ಎಂದು ಭಾಸವಾಗುವಂತಿತ್ತು. ಬದರ್ ಪುರದಲ್ಲಿ ಮನೆಗಳ ಚಾವಣಿಯಷ್ಟೇ ಕಾಣುವಷ್ಟರ ಮಟ್ಟಿಗೆ ನೀರು ಏರಿಕೆಯಾಗಿದೆ.
ಸುಮಾರು 14,000ಕ್ಕೂ ಅಧಿಕ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಮುನಾ ನದಿ 207.41 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು ಇದು ಈವರೇಗಿನ ಮೂರನೇ ಅತ್ಯಂತ ಹೆಚ್ಚಿನ ನೀರಿನ ಹರಿವಿನ ಮಟ್ಟವಾಗಿದೆ. 1978 ಮತ್ತು 2023ರ ಪ್ರವಾಹದ ಸಂದರ್ಭದಲ್ಲಿ ಯಮುನಾ ನದಿ ಇದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಹರಿದಿತ್ತು.
The Yamuna River has surged above the danger mark, leaving Delhi’s streets looking like flowing rivers and markets submerged under muddy waters. Several low-lying areas have been completely inundated, forcing thousands of residents to move to safer locations.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am