ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿಯಲ್ಲೇ ಹಂದಿ ಮರಿಗಳನ್ನು ನೀಡಬೇಕು ; ಜೆರ್ಸಿ ದನಗಳನ್ನು ಹಂದಿ ಇಂಜೆಕ್ಷನ್ ನೀಡಿ ಸೃಷ್ಟಿಸಲಾಗುತ್ತದೆ ! 

06-09-25 05:56 pm       Mangalore Correspondent   ಕರಾವಳಿ

ಗೋವುಗಳನ್ನು ಕದ್ದು ತಿನ್ನುವ ಗೋಮಾಂಸ ಭಕ್ಷಕರಿಗೆ ರಾಜ್ಯ ಸರಕಾರ ಶಾದಿ ಭಾಗ್ಯ ರೀತಿಯಲ್ಲೇ ಎರಡೆರಡು ಹಂದಿ ಮರಿಗಳನ್ನು ನೀಡುವ ಮತ್ತೊಂದು ಭಾಗ್ಯವನ್ನು ಕರುಣಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಕೇಳಿಕೊಳ್ಳುವುದಾಗಿ ಹಿಂದು ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಹೇಳಿದ್ದಾರೆ.

ಪುತ್ತೂರು, ಸೆ‌.6: ಗೋವುಗಳನ್ನು ಕದ್ದು ತಿನ್ನುವ ಗೋಮಾಂಸ ಭಕ್ಷಕರಿಗೆ ರಾಜ್ಯ ಸರಕಾರ ಶಾದಿ ಭಾಗ್ಯ ರೀತಿಯಲ್ಲೇ ಎರಡೆರಡು ಹಂದಿ ಮರಿಗಳನ್ನು ನೀಡುವ ಮತ್ತೊಂದು ಭಾಗ್ಯವನ್ನು ಕರುಣಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಕೇಳಿಕೊಳ್ಳುವುದಾಗಿ ಹಿಂದು ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿ ಹಟ್ಟಿಯಿಂದ ಗೋವನ್ನು ಕದ್ದು ಮಾಂಸ ಮಾಡಿದ ಕೃತ್ಯವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರಾಧಾಕೃಷ್ಣ ಅಡ್ಯಂತಾಯ, ರಾಜ್ಯ ಸರಕಾರ ಹಲವಾರು ಭಾಗ್ಯಗಳನ್ನು ನೀಡಿದೆ. ಗೋವು ಹಿಂದುಗಳ ಶ್ರದ್ಧಾಭಕ್ತಿಯ ಪ್ರತೀಕ. ಅಂತಹ ಗೋವನ್ನು ಕಡಿದು ತಿನ್ನುತ್ತಾರಲ್ಲಾ, ಅವರಿಗಾಗಿ, ಗೋಮಾಂಸ ತಿನ್ನುವ ಕುಟುಂಬಗಳಿಗೆ ಸರಕಾರದಿಂದಲೇ ಎರಡೆರಡು ಹಂದಿ ಮರಿಗಳನ್ನು ನೀಡಬೇಕು. ಯಾವ ಮಾಂಸ ಆದ್ರೂ ತಿನ್ನುತ್ತಾರೆ ಅಂತಾದರೆ, ಹಂದಿ ಮಾಂಸ ಏನಾಗುತ್ತದೆ, ತಿನ್ನಲಿ. ಆಗಲಾದರೂ ಗೋವುಗಳನ್ನು ಹಟ್ಟಿಯಿಂದ ಕದ್ದು ಮಾಂಸ ಮಾಡಿ ತಿನ್ನುವುದು ಕಡಿಮೆಯಾಗಬಹುದು ಎಂದರು.

ಗೋಮಾಂಸ ಭಕ್ಷಕರು ಕದ್ದು ತಿನ್ನುವ ಗೋವುಗಳು ನಮ್ಮ ದೇಸೀ ತಳಿಗಳಲ್ಲ. ಅದು ಜರ್ಸಿ ಜಾತಿಗೆ ಸೇರಿದ ಗೋವುಗಳು. ಈ ಗೋವುಗಳನ್ನು ವಿದೇಶದಲ್ಲಿ ಹಂದಿಯ ಇಂಜೆಕ್ಷನ್ ನೀಡಿ ಹುಟ್ಟಿಸಲಾಗುತ್ತದೆ. ಆ ಗೋವುಗಳನ್ನು ತಿಂದಲ್ಲಿ ಹಂದಿ ತಿಂದಂತೆಯೇ ಅಲ್ಲವೇ, ಯಾವ ಯಾವ ಮಾಂಸ ತಿನ್ನುವ ಬದಲು ಹಂದಿ ಮಾಂಸವನ್ನೇ ತಿನ್ನಲಿ. ಸರಕಾರ ಈ ಮನವಿಯನ್ನು ಪುರಸ್ಕರಿಸಿ ತಕ್ಷಣ ಹಂದಿ ಮರಿಗಳನ್ನು ನೀಡುವ ವ್ಯವಸ್ಥೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇವೆ. 

ಸಿದ್ದರಾಮಯ್ಯ ಸರ್ಕಾರ ಅವರಿಗಾಗಿ ಶಾದಿ ಭಾಗ್ಯ ಸೇರಿ ಏನೆಲ್ಲಾ ಭಾಗ್ಯ ನೀಡಿದೆ. ಈ ಭಾಗ್ಯವನ್ನೂ ಖಂಡಿತವಾಗಿ ನೀಡಲು ಸರಕಾರ ಸಿದ್ಧವಿರಬಹುದು. ಹಾಗೆಂದು ಒಂದು ಸಮುದಾಯಕ್ಕೆ ಈ ಮಾತು ಹೇಳುವುದಿಲ್ಲ. ಗೋ ಭಕ್ಷಣೆ ಮಾಡದ, ಗೋವುಗಳನ್ನು ಸಾಕುವ ಹಲವಾರು ಮುಸಲ್ಮಾನರಿದ್ದಾರೆ. ಅವರಿಗೆ ಈ ಮಾತು ಅನ್ವಯವಾಗೋದಿಲ್ಲ. ಯಾರು ಗೋಮಾಂಸ ತಿನ್ನುತ್ತಾರೆ ಮತ್ತು ಗೋವನ್ನು ಮಾಂಸ ಮಾಡಿ ತಿನ್ನುವವರಿಗಷ್ಟೇ ಹೇಳ್ತಿರೋದು ಎಂದರು. 

ಯಾವ ಆಹಾರ ತಿನ್ನಬೇಕು ಅನ್ನೋದು ಜನರ ಸ್ವಾತಂತ್ರ್ಯ ಎಂದು ಕಾಂಗ್ರೆಸ್ ಸರಕಾರ ಹೇಳಿದೆ, ಹಾಗಾದಲ್ಲಿ ಅವರು ತಮ್ಮ ಅಕ್ಕ, ಮುದಿ ತಾಯಿಯನ್ನೂ ಕೊಂದು ಮಾಂಸ ತಿನ್ನಲಿ, ಅದು ಅವರ ತಿನ್ನುವ ಹಕ್ಕು. ಆದರೆ ಹಿಂದೂಗಳ ಮಾತೃಸ್ವರೂಪಿ ಗೋವುಗಳ ಹತ್ಯೆಯನ್ನು ಹಿಂದೂ ಸಮಾಜ ಸಹಿಸೋದಿಲ್ಲ ಎಂದು ಎಚ್ಚರಿಕೆ ನೀಡಿದರು. ಪರಿಸರದಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಪ್ರತಿಭಟನಾ ಜಾಥಾ ನಡೆಸಿ ಬಳಿಕ ಧರಣಿ ನಡೆಸಿದರು.

Hindu Jagarana Vedike leader Radhakrishna Adyanthaya stirred controversy on Friday with a provocative statement, urging Chief Minister Siddaramaiah to launch a scheme akin to Shaadi Bhagya — but this time to distribute piglets to those who consume beef. Speaking at a protest in Pernya, Bantwal taluk, against the alleged theft and slaughter of a cow, Adyanthaya condemned the incident and demanded stern action.