ಬ್ರೇಕಿಂಗ್ ನ್ಯೂಸ್
14-04-25 11:25 pm HK News Desk ದೇಶ - ವಿದೇಶ
ಮುಂಬೈ, ಎ.14 : ಮುಂಬೈ ದಾಳಿಗೆ ಸಂಚು ಮಾಡಿದವರಲ್ಲಿ ಪಾಕಿಸ್ತಾನಿ- ಅಮೆರಿಕನ್ ಡೇವಿಡ್ ಕೋಲ್ಮನ್ ಹೇಡ್ಲಿ ಅಲಿಯಾಸ್ ಗಿಲಾನಿ ಮತ್ತು ತಹಾವುರ್ ರಾಣಾ ಎನ್ನುವುದು ತನಿಖೆಯಲ್ಲಿ ತಿಳಿದುಬಂದ ಅಂಶ. ಇವರಿಬ್ಬರು ಕೂಡ 2009ರಲ್ಲಿ ಅಮೆರಿಕದಲ್ಲಿ ಎಫ್ ಬಿಐ ಅಧಿಕಾರಿಗಳಿಂದ ಬಂಧಿತರಾಗಿದ್ದರು. ಆದರೆ ಮುಂಬೈ ದಾಳಿಗೂ ಮುನ್ನ 2006ರ ಸೆ.14ರಂದು ಮೊದಲ ಬಾರಿಗೆ ಡೇವಿಡ್ ಕೋಲ್ಮನ್ ಮುಂಬೈಗೆ ಬಂದಿಳಿದಿದ್ದ. ಈ ವೇಳೆ, ಆತನನ್ನು ಏರ್ಪೋರ್ಟ್ ನಲ್ಲಿ ಸ್ವಾಗತಿಸಿ ಸಿಎಸ್ ಎಂಟಿ ರೈಲ್ವೇ ನಿಲ್ದಾಣ ಬಳಿಯಿರುವ ತನ್ನ ಬಾಡಿಗೆ ಅಪಾರ್ಟ್ಮೆಂಟ್ ಕಟ್ಟಡಕ್ಕೆ ಕರೆದೊಯ್ಯಲು ಒಬ್ಬ ವ್ಯಕ್ತಿ ಬಂದಿದ್ದ.
ಲಷ್ಕರ್ ಉಗ್ರರ ಸೂಚನೆಯಂತೆ ಮುಂಬೈನಲ್ಲಿ ಭಯೋತ್ಪಾದಕ ಕೃತ್ಯ ಎಸಗುವುದಕ್ಕಾಗಿ ಡೇವಿಡ್ ಕೋಲ್ಮನ್ ಹೇಡ್ಲಿ ಮುಂಬೈಗೆ ಬಂದಿದ್ದ. ಆನಂತರ, ಒಂದೆರಡು ದಿನ ಹೇಡ್ಲಿ ರೈಲ್ವೇ ನಿಲ್ದಾಣ ಬಳಿಯ ಔತ್ರಾಮ್ ಹೊಟೇಲ್ ನಲ್ಲಿ ಉಳಿದುಕೊಂಡಿದ್ದ. ಹತ್ತು ವರ್ಷಗಳ ಬಳಿಕ ಅಂದರೆ, 2016ರಲ್ಲಿ ಡೇವಿಡ್ ಕೋಲ್ಮನ್ ಹೇಡ್ಲಿ ಅಮೆರಿಕದ ಜೈಲಿನಿಂದ ವಿಡಿಯೋ ಹೇಳಿಕೆ ನೀಡಿದ್ದ ವೇಳೆ ಈ ಕುರಿತು ಮಾತನಾಡಿದ್ದ. ಮುಂಬೈ ಕೋರ್ಟಿಗೆ ನೀಡಿದ್ದ ವಿಡಿಯೋ ಹೇಳಿಕೆಯಲ್ಲಿ ಅಂದು ತನಗೆ ಸಹಾಯ ಮಾಡಿದ್ದ ವ್ಯಕ್ತಿಯನ್ನು ಒದಗಿಸಿದ್ದು ತಹಾವುರ್ ರಾಣಾ ಮತ್ತು ಆ ವ್ಯಕ್ತಿಯ ಹೆಸರು ಬಶೀರ್ ಶೇಖ್ ಎಂದು ತಿಳಿಸಿದ್ದ.
ತಹಾವುರ್ ರಾಣಾ ಮುಂಬೈನಲ್ಲಿ ಬಶೀರ್ ಶೇಖ್ ಎಂಬಾತನ ಜೊತೆಗೆ ನೇರ ಸಂಪರ್ಕದಲ್ಲಿದ್ದ. ತನಗೆ ಮುಂಬೈನಲ್ಲಿ ಉಳಿದುಕೊಳ್ಳಲು ಬಶೀರ್ ಎಲ್ಲ ನೆರವನ್ನೂ ನೀಡುತ್ತಾನೆಂದು ರಾಣಾ ಹೇಳಿದ್ದ. ಪ್ರತಿ ಬಾರಿ ಮುಂಬೈಗೆ ಬಂದಾಗಲೂ ಬಶೀರ್ ಶೇಖ್ ನನ್ನು ಭೇಟಿಯಾಗುತ್ತಿದ್ದೆ ಎಂದು ಹೇಡ್ಲಿ ಹೇಳಿಕೊಂಡಿದ್ದ. ಮುಂಬೈ ದಾಳಿ ಘಟನೆ ಮೊದಲು ಮತ್ತು ಆನಂತರವೂ ಹೇಡ್ಲಿ ಮತ್ತು ಬಶೀರ್ ಪರಸ್ಪರ ಭೇಟಿಯಾಗಿದ್ದಾರೆ. ಹೇಡ್ಲಿ 2009ರಲ್ಲಿ ಮತ್ತೆ ಭಾರತಕ್ಕೆ ಬಂದಿದ್ದು ದೆಹಲಿ ಮತ್ತು ಪುಣೆಯ ಬಾಂಬ್ ಸ್ಫೋಟಕ್ಕೂ ಸಂಚು ಹೆಣೆದಿದ್ದ. ಅಮೆರಿಕದ ಎಫ್ ಬಿಐ ವಿಚಾರಣೆಯಲ್ಲೂ ಹೇಡ್ಲಿ, ಮುಂಬೈ ಸ್ಫೋಟ ಮತ್ತು ಬಶೀರ್ ಪಾತ್ರದ ಬಗ್ಗೆ ಹೇಳಿಕೆ ನೀಡಿದ್ದ.
ವಿಶೇಷ ಅಂದ್ರೆ, ಮುಂಬೈ ದಾಳಿ ಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಶೀರ್ ಶೇಖ್ ನನ್ನು ಮುಂಬೈ ಪೊಲೀಸರಾಗಲೀ, ಎನ್ಐಎ ಅಧಿಕಾರಿಗಳಾಗಲೀ ಬಂಧಿಸಿಲ್ಲ. ಪೊಲೀಸ್ ಮೂಲಗಳ ಪ್ರಕಾರ, ಬಶೀರ್ ಮುಂಬೈ ಉಪ ನಗರದ ಜೋಗೇಶ್ವರಿ ನಿವಾಸಿಯಾಗಿದ್ದು, ಜೋಗೇಶ್ವರಿಯಲ್ಲಿ ಡೈರಿ ಕೇಂದ್ರ ಒಂದನ್ನು ನಡೆಸುತ್ತಿದ್ದ. ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆ ತಹಾವುರ್ ರಾಣಾನನ್ನು ಭೇಟಿಯಾಗಿದ್ದನಂತೆ. ಆಗ ತಹಾವುರ್ ರಾಣಾ ಫಸ್ ವರ್ಲ್ಡ್ ಇಮಿಗ್ರೇಶನ್ ಹೆಸರಿನಲ್ಲಿ ವಲಸಿಗರ ಸಲಹಾ ಕೇಂದ್ರವನ್ನು ನಡೆಸುತ್ತಿದ್ದ. ಬಶೀರ್ ಕೆನಡಾಕ್ಕೆ ವಲಸೆ ಹೋಗುವ ಉದ್ದೇಶದಿಂದ ರಾಣಾನನ್ನು ಸಂಪರ್ಕ ಮಾಡಿದ್ದ. ಆ ಪರಿಚಯದಲ್ಲಿ ಸ್ನೇಹಿತನಾಗಿದ್ದ ರಾಣಾ, ಮುಂಬೈಗೆ ಬರುತ್ತಿದ್ದ ತನ್ನ ಸ್ನೇಹಿತ ಹೇಡ್ಲಿಗೆ ಎಲ್ಲ ರೀತಿಯ ಸಹಾಯ ನೀಡುವಂತೆ ಬಶೀರ್ ಶೇಖ್ ಗೆ ಸೂಚಿಸಿದ್ದ.
ದಾಳಿ ಘಟನೆ ನಂತರ ಬಶೀರ್ ಶೇಖ್ ಎಲ್ಲಿದ್ದನೆಂದು ಪೊಲೀಸರಿಗೆ ತಿಳಿದಿಲ್ಲ. ಆತ ಕೆನಡಾಕ್ಕೆ ಎಸ್ಕೇಪ್ ಆಗಿದ್ದಾನೆಯೇ ಎಂಬ ಬಗ್ಗೆಯೂ ತಿಳಿದಿಲ್ಲ. ರಾಣಾ ಮತ್ತು ಹೇಡ್ಲಿ ನಡುವೆ ಸಂಪರ್ಕ ಸೇತುವಂತೆ ಕೆಲಸ ಮಾಡಿದ್ದ ಬಶೀರ್ ಶೇಖ್ ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ. ಮುಂಬೈ ದಾಳಿ ಪ್ರಕರಣದಲ್ಲಿ ಬಶೀರ್ ಶೇಖ್ ಪ್ರಮುಖ ಕೆಲಸ ಮಾಡಿದ್ದಿರಬಹುದೇ ಎನ್ನುವ ಬಗ್ಗೆಯೂ ಎನ್ಐಎ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. ಈವರೆಗೂ ರಾಣಾ ಮತ್ತು ಹೇಡ್ಲಿ ನಡುವೆ ಸಂಪರ್ಕದ ಬಗ್ಗೆ ಇಲೆಕ್ಟ್ರಾನಿಕ್ ಸಾಕ್ಷ್ಯಗಳು ಮಾತ್ರ ಸಿಕ್ಕಿವೆ. ಬೇರಾವುದೇ ಪ್ರತ್ಯಕ್ಷ ಸಾಕ್ಷ್ಯ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಪ್ರಕರಣ ಸಂಬಂಧಿಸಿ ಭಾರತದ ತನಿಖಾ ಏಜನ್ಸಿ ಮೊದಲ ಬಾರಿಗೆ ವಿದೇಶಿ ವ್ಯಕ್ತಿಯನ್ನು ಬಂಧಿಸಿದ್ದು ಇನ್ನಷ್ಟೇ ಆರೋಪ ಪಟ್ಟಿಯನ್ನು ಸಲ್ಲಿಸಬೇಕಾಗಿದೆ.
ಮುಂಬೈ ದಾಳಿ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯೆಂದು ಗುರುತಿಸಲ್ಪಟ್ಟ ಜಬೀವುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ಮುಂಬೈ ಜೈಲಿನಲ್ಲಿದ್ದಾನೆ. ತನಿಖೆ ಪ್ರಗತಿಯಲ್ಲಿರುವುದು ಮತ್ತು ತಾಂತ್ರಿಕ ಸಾಕ್ಷ್ಯ ಮುಂದುವರಿದಿದ್ದರಿಂದ ಬಾಂಬೇ ಹೈಕೋರ್ಟ್ ವಿಚಾರಣೆಯನ್ನು ಸದ್ಯಕ್ಕೆ ಅಮಾನತ್ತಿನಲ್ಲಿರಿಸಿದೆ. ಬಶೀರ್ ಶೇಖ್ ಮಾತ್ರವಲ್ಲದೆ, ಡೇವಿಡ್ ಹೇಡ್ಲಿ ಮುಂಬೈನಲ್ಲಿ ಪಾರ್ಸಿ ಮಹಿಳೆಯನ್ನು ಫ್ರೆಂಡ್ ಮಾಡಿಕೊಂಡಿದ್ದ. ಆಕೆ ಕೊಲಾಬದಲ್ಲಿ ಬೇಕರಿ ನಡೆಸುತ್ತಿದ್ದಳು. ಇದಲ್ಲದೆ, ಮುಂಬೈ ನಗರದಲ್ಲಿ ಬಾಲಿವುಡ್ ಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರ ಪುತ್ರ ರಾಹುಲ್ ಭಟ್ ಜೊತೆಗೂ ಡೇವಿಡ್ ಹೇಡ್ಲಿ ಹತ್ತಿರದ ನಂಟು ಇರಿಸಕೊಂಡಿದ್ದ. ಜಿಮ್ ಟ್ರೈನರ್ ವಿಲಾಸ್ ವಾರಕ್ ಎಂಬಾತನೂ ಹೇಡ್ಲಿಗೆ ಹತ್ತಿರವಾಗಿದ್ದ. ಮುಂಬೈ ಪೊಲೀಸರು ಇವರನ್ನೆಲ್ಲ ವಶಕ್ಕೆ ಪಡೆದು ಹೇಡ್ಲಿ ಜೊತೆಗಿನ ಸಂಪರ್ಕದ ಬಗ್ಗೆ ವಿಚಾರಣೆಯನ್ನೂ ನಡೆಸಿದ್ದಾರೆ. (ಮಾಹಿತಿ – ಮನಿ ಕಂಟ್ರೋಲ್)
Pakistani spy agency Inter-Services Intelligence, terrorist groups Lashkar-e-Taiba and Harkat-ul Jihadi Islami (HUJI) and former army doctor-turned-businessman Tahawwur Hussain Rana had funded David Coleman Headley alias Daood Sayed Gilani during the latter's visits to Mumbai in the run-up to the 26/11 terror attacks.
07-09-25 10:17 am
Bangalore Correspondent
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am