ಬ್ರೇಕಿಂಗ್ ನ್ಯೂಸ್
13-06-25 03:08 pm HK News Desk ದೇಶ - ವಿದೇಶ
ಅಹ್ಮದಾಬಾದ್, ಜೂನ್ 13 : ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ರಾಜಸ್ಥಾನದ ಒಂದಿಡೀ ಕುಟುಂಬ ಸದಸ್ಯರು ದುರಂತ ಸಾವುಗೀಡಾಗಿದ್ದಾರೆ. ರಾಜಸ್ಥಾನ ಮೂಲದ ವೈದ್ಯ ದಂಪತಿ ಲಂಡನ್ನಲ್ಲೇ ನೆಲೆಸಲು ತಮ್ಮ ಇಬ್ಬರು ಮಕ್ಕಳೊಂದಿಗೆ ವಿಮಾನದಲ್ಲಿ ಹೊರಟಿದ್ದರು. ವಿಮಾನದಲ್ಲಿ ಕುಳಿತ ಬೆನ್ನಲ್ಲೇ ಸೆಲ್ಫಿ ಕ್ಲಿಕ್ಕಿಸಿ ಜಾಲತಾಣದಲ್ಲಿ ಹಾಕಿದ್ದರು. ಆದರೆ ಯಾರೂ ಊಹಿಸಲಾಗದ ರೀತಿಯಲ್ಲಿ ಕೆಲವೇ ಕ್ಷಣಗಳಲ್ಲಿ ಅವರು ಇಲ್ಲವಾಗಿದ್ದಾರೆ.
ಡಾ. ಕೋನಿ ವ್ಯಾಸ್ ಅವರ ಕುಟುಂಬವು ಹೊಸ ಜೀವನದ ಕನಸು ಕಾಣುತ್ತಿತ್ತು. ರಾಜಸ್ಥಾನದ ಬನ್ಸ್ವಾರಾದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ. ಕೋನಿ, ಲಂಡನ್ ಮೂಲದ ವೈದ್ಯರಾಗಿರುವ ತಮ್ಮ ಪತಿ ಪ್ರತೀಕ್ ಜೋಶಿ ಮತ್ತು ಅವರ ಮೂವರು ಮಕ್ಕಳ ಜೊತೆ ಲಂಡನ್ ಪಯಣ ಬೆಳೆಸಿದ್ದರು. ಐದು ವರ್ಷದ ಅವಳಿ ಗಂಡು ಮಕ್ಕಳಾದ ಪ್ರದ್ಯುತ್ ಮತ್ತು ನಕುಲ್ ಮತ್ತು ಎಂಟು ವರ್ಷದ ಮಗಳು ಮಿರಾಯಾ ಅವರೊಂದಿಗೆ ಲಂಡನ್ನಲ್ಲೇ ಜೀವನ ಕಳೆಯುವುದಕ್ಕಾಗಿ ಕಳೆದ ತಿಂಗಳು ಡಾ.ಕೋನಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ವಿಮಾನ ಹಾರುವ ಮೊದಲು, ಕುಟುಂಬವು ಸೆಲ್ಫಿ ಕ್ಲಿಕ್ಕಿಸಿಕೊಂಡಿತ್ತು. ವಿಮಾನದ ಒಂದು ಬದಿಯಲ್ಲಿ ಪೋಷಕರು ಮತ್ತು ಇನ್ನೊಂದು ಬದಿಯಲ್ಲಿ ಮಕ್ಕಳು ಕುಳಿತಿದ್ದರು. ಆದರೆ ಅದಾಗಿ ಕೆಲವೇ ನಿಮಿಷಗಳಲ್ಲಿ ದುರಂತ ಸಂಭವಿಸಿತ್ತು.
ಬನ್ಸ್ವಾರಾದ ಕುಟುಂಬ ಸದಸ್ಯರ ಪ್ರಕಾರ, ಅಲ್ಲಿನ ಪೆಸಿಫಿಕ್ ಆಸ್ಪತ್ರೆಯಲ್ಲಿ ಕೆಲಸಕ್ಕಿದ್ದ ಕೋನಿ ಒಂದು ತಿಂಗಳ ಹಿಂದೆಯೇ ರಾಜೀನಾಮೆ ನೀಡಿದ್ದರು. ಆನಂತರ, ಮಕ್ಕಳೊಂದಿಗೆ ಲಂಡನ್ ತೆರಳಿ ಅಲ್ಲಿಯೇ ಹೊಸ ಜೀವನ ಕಟ್ಟುವುದಕ್ಕಾಗಿ ಉತ್ಸಾಹದಿಂದ ತಯಾರಿ ನಡೆಸುತ್ತಿದ್ದರು. ಸಂಬಂಧಿಕರ ಪ್ರಕಾರ, ರೇಡಿಯಾಲಜಿಸ್ಟ್ ಆಗಿರುವ ಜೋಶಿ ಕಳೆದ ನಾಲ್ಕು ವರ್ಷಗಳಿಂದ ಲಂಡನ್ನಲ್ಲಿ ಕೆಲಸ ಮಾಡುತ್ತಿದ್ದರು.
ಅಲ್ಲಿ ತಮ್ಮ ಕುಟುಂಬದೊಂದಿಗೆ ಹೊಸ ಜೀವನಕ್ಕಾಗಿ ಎದುರು ನೋಡುತ್ತಿದ್ದರು. ಅವರ ತಂದೆ ಕೂಡ ರೇಡಿಯಾಲಜಿಸ್ಟ್ ಆಗಿದ್ದರು. ಅವರು ಬನ್ಸ್ವಾರಾ ನಗರದಲ್ಲಿ ಪ್ರಸಿದ್ಧ ಸೋನೋಗ್ರಫಿ ಕೇಂದ್ರವನ್ನು ನಡೆಸುತ್ತಿದ್ದರು. ಅವರ ಸಹೋದರಿ ಎಂಜಿನಿಯರ್ ಆಗಿದ್ದಾರೆ. ಕೋನಿ ವೈದ್ಯರಾಗಿದ್ದು ತಮ್ಮ ಮಕ್ಕಳೊಂದಿಗೆ ಉದಯಪುರದಲ್ಲಿ ವಾಸಿಸುತ್ತಿದ್ದರು.
ಸಂಬಂಧಿಕರ ಪ್ರಕಾರ, ದಂಪತಿ ಒಂದು ದಶಕದ ಹಿಂದೆ ವಿವಾಹವಾಗಿದ್ದರು. ತಮ್ಮ ಕುಟುಂಬವನ್ನು ಕರೆದೊಯ್ಯಲು ಜೋಶಿ ಮೂರು ದಿನಗಳ ಹಿಂದೆ ಲಂಡನ್ನಿಂದ ಹಿಂತಿರುಗಿದ್ದರು. ಬುಧವಾರ ಲಂಡನ್ಗೆ ವಿಮಾನದಲ್ಲಿ ಹೋಗಲು ಅಹಮದಾಬಾದ್ಗೆ ತೆರಳಿದ್ದರು ಎಂದು ಸಂಬಂಧಿಕರಾದ ನಯನ್ ಜೋಶಿ ಹೇಳಿದರು. ಪ್ರಯಾಣದ ಮೊದಲು ಅವರನ್ನು ಬೀಳ್ಕೊಡಲು ಕೋನಿಯ ಕುಟುಂಬ ಸದಸ್ಯರು ವಿಮಾನ ನಿಲ್ದಾಣಕ್ಕೂ ಬಂದಿದ್ದರು.
In a heartbreaking incident, a doctor couple from Rajasthan and their three children lost their lives in the recent Air India plane crash, just moments after capturing a selfie together before takeoff. Dr. Koni Vyas, a practicing doctor at a private hospital in Banswara, Rajasthan, had recently resigned from her job to join her husband, Dr. Prateek Joshi, a radiologist based in London.
31-08-25 05:35 pm
HK News Desk
Bangalore Court, Dharmasthala, Delete Videos:...
30-08-25 04:51 pm
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
31-08-25 01:32 pm
HK News Desk
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
31-08-25 01:56 pm
Mangaluru Correspondent
Udupi, Diksha Sets New World Record, Bharatan...
31-08-25 12:49 pm
ಬೆಂಗಳೂರಿನಲ್ಲಿ ಉಳಿದಿದ್ದು ನಿಜ, ದೆಹಲಿಗೆ ಹೋಗಿದ್ದೂ...
30-08-25 11:08 pm
2002ರ ಉಳ್ಳಾಲದ ಚಾರಿತ್ರಿಕ ನಾಗಮಂಡಲದ ರೂವಾರಿ, ಧಾರ್...
30-08-25 11:01 pm
Mangalore, Ganesh Chaturthi, Catholic: ಸಂಘನಿಕ...
30-08-25 10:10 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm