ಬ್ರೇಕಿಂಗ್ ನ್ಯೂಸ್
16-06-25 01:33 pm HK News Desk ದೇಶ - ವಿದೇಶ
ನವದೆಹಲಿ, ಜೂನ್.16: ಇಸ್ರೇಲ್- ಇರಾನ್ ನಡುವೆ ಸತತ ನಾಲ್ಕನೇ ದಿನವೂ ದಾಳಿ- ಪ್ರತಿದಾಳಿ ಮುಂದುವರಿದಿದ್ದು, ಇರಾನ್ ಮೇಲೆ ಇಸ್ರೇಲಿ ಮಿಲಿಟರಿ ತೀವ್ರ ರೀತಿಯಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಇತರ ನಗರಗಳ ಮೇಲೆಯೂ ದಾಳಿಯಾಗಿದ್ದು, ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಇರಾನ್ ಗುಪ್ತಚರ ಸಂಸ್ಥೆ ರೆವೊಲ್ಯುಶನರಿ ಗಾರ್ಡ್ಸ್ ಮುಖ್ಯಸ್ಥ ಮೊಹಮ್ಮದ್ ಖಾಜಿಂ ಕೊಲ್ಲಲ್ಪಟ್ಟಿದ್ದಾರೆ.
ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆಯೂ ಇರಾನ್ ಮಿಸೈಲ್ ದಾಳಿ ಮಾಡಿದ್ದು, ಐರನ್ ಡೋಮ್ ಸಿಸ್ಟಮ್ ನಿಂದಾಗಿ ಹೆಚ್ಚಿನ ನಾಶ – ನಷ್ಟ ಸಂಭವಿಸಿಲ್ಲ. ಆದರೂ ಮಕ್ಕಳು ಸೇರಿದಂತೆ 13 ಮಂದಿ ಇಸ್ರೇಲಿನಲ್ಲಿ ಸಾವಿಗೀಡಾಗಿದ್ದಾರೆ. ಇದೇ ವೇಳೆ, ಇರಾನ್ ನಲ್ಲಿ 240 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 380ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾಗಿ ಸಿಎನ್ಎನ್ ವರದಿ ಮಾಡಿದ. ಇಸ್ರೇಲಿನ ಕ್ಷಿಪಣಿಗಳು ಜನವಸತಿ ಸೇರಿದಂತೆ ಇರಾನ್ ರಾಜತಾಂತ್ರಿಕ ಮುಖ್ಯಸ್ಥರ ನಿವಾಸಗಳನ್ನು ಗುರಿಯಾಗಿಸಿ ದಾಳಿ ಮಾಡಿವೆ. ಇದೇ ವೇಳೆ, ವಿಶ್ವ ರಾಷ್ಟ್ರಗಳು ಎರಡೂ ಕಡೆಯ ನಾಯಕರಿಗೆ ಕದನ ವಿರಾಮಕ್ಕಾಗಿ ಒತ್ತಾಯಿಸಿವೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಕೂಡ ಮಾತುಕತೆ ಮಾಡಿಕೊಳ್ಳುವಂತೆ ಇರಾನ್ ನಾಯಕರಿಗೆ ಸಲಹೆ ಮಾಡಿದ್ದಾರೆ. ಆದರೆ ಇರಾನ್ ನಿರಾಕರಿಸಿದ್ದು, ಇಸ್ರೇಲ್ ದಾಳಿ ನಿಲ್ಲಿಸದ ಹೊರತು ಮಾತುಕತೆ ಸಾಧ್ಯವಿಲ್ಲ ಎಂದಿದೆ.
ಯುದ್ಧ ನಿಲ್ಲಿಸಿ, ಮಾತುಕತೆ ಮಾಡಿಕೊಳ್ಳುವಂತೆ ಟ್ರಂಪ್ ಸಲಹೆ ಮಾಡಿದ್ದರೆ, ಇಸ್ರೇಲ್ ಮತ್ತು ಇರಾನ್ ನಾಯಕರು ಟ್ರಂಪ್ ಸಲಹೆಯನ್ನು ನಿರಾಕರಿಸಿದ್ದಾರೆ. ಇರಾನ್ ನಮ್ಮನ್ನು ಗುರಿಯಾಗಿಸಿ ಅಣ್ವಸ್ತ್ರಗಳ ಸಂಗ್ರಹಿಸುವುದನ್ನು ನಿಲ್ಲಿಸಲಿ, ಆಮೇಲೆ ದಾಳಿ ನಿಲ್ಲಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ನಾವು ತಲೆ ಬಗ್ಗಿಸಿಲ್ಲ ಎಂದು ದಾಳಿ ಮಾಡುತ್ತಿದ್ದಾರೆ, ನಾವು ರಾಜಕೀಯ ಕಾರಣಕ್ಕೆ ತಲೆ ಬಗ್ಗಿಸೋಲ್ಲ ಎಂದಿದ್ದಾರೆ.
ಇತಿಹಾಸದಿಂದ ನಾವು ಪಾಠ ಕಲಿತುಕೊಳ್ಳದಿದ್ದರೆ..!
ಇದೇ ವೇಳೆ, ಇಸ್ರೇಲ್ ವಿದೇಶಾಂಗ ಸಚಿವ ಜಿಡಿಯಾನ್ ಸಾರ್ ಸಿಎನ್ಎನ್ ಚಾನೆಲ್ ಗೆ ಪ್ರತಿಕ್ರಿಯಿಸಿದ್ದು, ಇರಾನ್ ಭೂಪ್ರದೇಶ ಬದಲಾವಣೆ ಮಾಡುವುದು ನಮ್ಮ ಗುರಿಯಾಗಿಲ್ಲ. ನಮ್ಮ ದಾಳಿಯ ಬಗ್ಗೆ ಇರಾನ್ ಜನರು ನಿರ್ಧರಿಸಬೇಕು. ಇರಾನ್ ತನ್ನ ಅಣ್ವಸ್ತ್ರಗಳ ಸಾಮರ್ಥ್ಯ ಹೆಚ್ಚಿಸುವುದನ್ನು ನಾವು ಬಯಸುವುದಿಲ್ಲ. ಅವರ ಬ್ಯಾಲಿಸ್ಟಿಕ್ ಮಿಸೈಲ್ ಪವರ್ ಕಡಿಮೆಗೊಳಿಸುವುದೇ ನಮ್ಮ ಗುರಿ. ನಾವೇನು ಮಾಡುತ್ತಿದ್ದೇವೋ, ಅಮೆರಿಕದ ಮಿತ್ರನಾಗಿ, ಪಾಶ್ಚಾತ್ಯ ರಾಷ್ಟ್ರಗಳ ನಾಗರಿಕರ ಪರವಾಗಿ ಮಾಡುತ್ತಿದ್ದೇವೆ. ನಾವು ಇದನ್ನು ಮಾಡದೇ ಇದ್ದರೆ ನಾವು ಈ ಜಗತ್ತಿನಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ. ನಾವು ಇತಿಹಾಸದಿಂದ ಪಾಠ ಕಲಿತುಕೊಳ್ಳದಿದ್ದರೆ, ನಾವೇ ಈ ಜಗತ್ತಿನಿಂದ ಖಾಲಿಯಾಗುತ್ತೇವೆ. ಜೂಯಿಗಳು ಹೇಳಿದ ಮಾತನ್ನು ನಾವು ನೆನಪಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.
ಟೆಹ್ರಾನ್ ಮಿಸೈಲ್ ಲಾಂಚರ್ ಸ್ಫೋಟ
ಇದೇ ವೇಳೆ, ಟೆಹ್ರಾನ್ ಬಳಿ ಇರಾನ್ ರೂಪಿಸಿಕೊಂಡಿದ್ದ ಭೂಮಿಯಿಂದ ಆಕಾಶಕ್ಕೆ ಮಿಸೈಲ್ ಉಡಾಯಿಸುವ ಕೇಂದ್ರವನ್ನು ಉಡಾಯಿಸಿದ್ದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ. ನಮ್ಮ ವಾಯುಪಡೆಯು ಅಲ್ಲಿನ ಶಸ್ತ್ರಗಳನ್ನು ಸ್ಫೋಟಿಸಿದ್ದು, ಲಾಂಚರ್ ಅನ್ನು ನಿಷ್ಕ್ರಿಯ ಮಾಡಿದೆ. ಇರಾನ್ ವಾಯುನೆಲೆ ಮಾಡಿಕೊಂಡಿರುವ ಎಲ್ಲ ವ್ಯವಸ್ಥೆಯನ್ನು ಛಿದ್ರಗೊಳಿಸುತ್ತೇವೆ ಎಂದು ಇಸ್ರೇಲ್ ಸೇನೆಯು ಉಪಗ್ರಹ ಚಿತ್ರಗಳನ್ನು ಆಧರಿಸಿ ಹೇಳಿಕೆ ಬಿಡುಗಡೆ ಮಾಡಿದೆ.
The escalating conflict between Iran and Israel has now entered its fourth day, with relentless missile exchanges claiming hundreds of lives and causing widespread destruction across both nations. The overnight barrage, which wounded at least 100 additional civilians, represents Tehran’s continued retaliation against Israel’s preemptive strikes targeting Iran’s nuclear facilities and ballistic missile programs.
31-08-25 05:35 pm
HK News Desk
Bangalore Court, Dharmasthala, Delete Videos:...
30-08-25 04:51 pm
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
31-08-25 01:32 pm
HK News Desk
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
31-08-25 01:56 pm
Mangaluru Correspondent
Udupi, Diksha Sets New World Record, Bharatan...
31-08-25 12:49 pm
ಬೆಂಗಳೂರಿನಲ್ಲಿ ಉಳಿದಿದ್ದು ನಿಜ, ದೆಹಲಿಗೆ ಹೋಗಿದ್ದೂ...
30-08-25 11:08 pm
2002ರ ಉಳ್ಳಾಲದ ಚಾರಿತ್ರಿಕ ನಾಗಮಂಡಲದ ರೂವಾರಿ, ಧಾರ್...
30-08-25 11:01 pm
Mangalore, Ganesh Chaturthi, Catholic: ಸಂಘನಿಕ...
30-08-25 10:10 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm