ಬ್ರೇಕಿಂಗ್ ನ್ಯೂಸ್
17-02-26 08:56 pm HK Staff ಕರ್ನಾಟಕ
ಹಾವೇರಿ, ಫೆ.17: ರಾಜ್ಯದ ಬಹುತೇಕ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಇರುವ ಶಿಕ್ಷಕರಿಗೆ ಇತರ ಕೆಲಸಗಳದ್ದೇ ಹೊರೆಯಾಗಿದೆ. ಇದರ ನಡುವೆ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಮಾಡಿ ಎಂದು ಒತ್ತಡ ಹೇರುವ ನೈತಿಕತೆಯೇ ನಮಗಿಲ್ಲ. ಇದರ ಬದಲು ಕೇರಳ ಮಾದರಿಯಲ್ಲಿ ಒಬ್ಬ ಶಿಕ್ಷಕ ನಿವೃತ್ತನಾದ ಕೂಡಲೇ ಅಲ್ಲಿಗೆ ನೇಮಕ ಮಾಡುವುದನ್ನು ಮಾಡಬೇಕು. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದರೆ ತಾನಾಗಿಯೇ ಫಲಿತಾಂಶ ಬರುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾರ್ಮಿಕ ಮಾತುಗಳನ್ನಾಡಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಮಾಧ್ಯಮಿಕ ಶಾಲಾ ನೌಕರ ಸಂಘದ ಸಹಯೋಗದಲ್ಲಿ ಹಾವೇರಿಯಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕಾರ್ಯಾಗಾರ ಹಾಗೂ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೆ ವಿದ್ಯಾರ್ಥಿಗಳು ಫೇಲ್ ಆದರೆ, ಪಾಲಕರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಓದಿದವರು ಮಾತ್ರ ಪಾಸಾಗುತ್ತಿದ್ದರು. ಅರ್ಹರು ನೌಕರಿ ಪಡೆಯುತ್ತಿದ್ದರು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ವಿದ್ಯಾರ್ಥಿಗಳು ಫೇಲಾದರೆ ಶಿಕ್ಷಕರದ್ದೇ ತಪ್ಪು ಎನ್ನುತ್ತಾರೆ ಪಾಲಕರು. ಮೊಟ್ಟೆ, ಊಟ ಕೊಡುವುದರಲ್ಲೇ ಶಿಕ್ಷಕರು ಸುಸ್ತಾಗುತ್ತಿದ್ದಾರೆ. ಪಾಠ ಮಾಡುವುದು ಬಿಟ್ಟು ಬೇರೆಲ್ಲ ಕೆಲಸ ಹೇಳಿದರೆ ಶಿಕ್ಷಕ ನೆಮ್ಮದಿಯಾಗಿ ಹೇಗೆ ಪಾಠ ಮಾಡುತ್ತಾರೆ. ನಮ್ಮಲ್ಲಿ 29 ಸಾವಿರ ಶಿಕ್ಷಕ ಹುದ್ದೆ ಖಾಲಿಯಿದ್ದು ಇನ್ನು ಫಲಿತಾಂಶ ನಿರೀಕ್ಷೆ ಮಾಡುವುದೇನು ಎಂದು ಸರ್ಕಾರಕ್ಕೇ ಪ್ರಶ್ನೆ ಮಾಡಿದರು.
ಫೇಲಾದವರನ್ನು ಪಾಸು ಮಾಡಬಾರದು. ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಮಾಡಬೇಕು. ಇತ್ತೀಚೆಗೆ ಹಳ್ಳಿ ಹಳ್ಳಿಗಳಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆ ಆರಂಭವಾಗಿವೆ. ಕನ್ನಡ ಶಾಲೆಗಳಲ್ಲೂ ಇಂಗ್ಲಿಷ್ ಮೀಡಿಯಂ ತೆಗೆಯುತ್ತಿದ್ದಾರೆ. ಇದರಿಂದ ಕನ್ನಡ ಮಾಧ್ಯಮವೇ ಮರೆಯಾಗುವ ಆತಂಕವಿದೆ ಎಂದು ಹೇಳಿದರು.
ಕೇರಳದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಶಿಕ್ಷಕರ ಹುದ್ದೆ ಖಾಲಿ ಬಿಡಲ್ಲ. ಹುದ್ದೆ ಖಾಲಿಯಾದರೆ ಒಂದೇ ದಿನದಲ್ಲಿ ನೇಮಿಸುತ್ತಾರೆ. ಒಬ್ಬನೇ ವಿದ್ಯಾರ್ಥಿ ಇದ್ದರೂ ಒಂದು ಕೊಠಡಿಗೆ ಒಬ್ಬ ಶಿಕ್ಷಕರನ್ನು ನೇಮಿಸುತ್ತದೆ. ಹಾಗಾಗಿ, ಕೇರಳದಲ್ಲಿ ಶೇ.100ರಷ್ಟು ಫಲಿತಾಂಶ ಬರುತ್ತದೆ. ನಮ್ಮ ರಾಜ್ಯದಲ್ಲೂ ಎಲ್ಲ ವ್ಯವಸ್ಥೆ ಕೊಡಿ, ನಾವೂ 100ರಷ್ಟು ಫಲಿತಾಂಶ ಕೊಡುತ್ತೇವೆ ಎಂದು ಸವಾಲು ಹಾಕಿದರು. 33 ಅಂಕ ಪಡೆದರೆ ಪಾಸು ಎಂಬ ನಿಯಮ ಮಾಡಿದೆ. 20 ಅಂಕ ಆಂತರಿಕ ಅಂಕ ಇದ್ದು, ಬಾಕಿ 13 ಅಂಕ ಪಡೆದರೆ ಸಾಕು, ಪಾಸಾಗುತ್ತಾರೆ. 13 ಅಂಕ ಪಡೆದು ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿ ಪಿಯುಸಿ ಹಾಗೂ ಭವಿಷ್ಯದಲ್ಲಿ ಏನು ಸಾಧಿಸಬಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಸರಿಯಾಗಿ ಪಾಠ ಮಾಡುತ್ತಿಲ್ಲ. ಏನೂ ಕಲಿಯದೇ ಪ್ರೌಢಶಾಲೆ ಬಂದು ಪಾಸಾಗಬೇಕು ಎಂದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
Chairman of the Karnataka Legislative Council Basavaraj Horatti has raised serious concerns over the shortage of teachers in government and aided schools across the state, questioning how authorities can demand improved SSLC results while nearly 29,000 teaching posts remain vacant.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm