ಬ್ರೇಕಿಂಗ್ ನ್ಯೂಸ್
18-06-25 08:49 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 18 : ಫಾಸ್ಟ್ ಟ್ಯಾಗ್ ದಿನವೂ ಕಟ್ಟಿ ಸುಸ್ತಾದ ಖಾಸಗಿ ವಾಹನ ಮಾಲೀಕರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ವಾರ್ಷಿಕ ಪಾಸ್ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದೇ ಆಗಸ್ಟ್ 15 ರಿಂದ ವಾರ್ಷಿಕ ಟೋಲ್ ಪಾಸ್ ನೀಡಲಾಗುವುದು. ವಾರ್ಷಿಕ 3 ಸಾವಿರ ರೂ.ಗೆ ಟೋಲ್ ಪಾಸ್ ಪಡೆದು ಒಂದು ವರ್ಷ ಕಾಲ ರಾಷ್ಟ್ರ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸಬಹುದು ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕಮರ್ಷಿಯಲ್ ಅಲ್ಲದ ವಾಹನಗಳಿಗೆ ಮಾತ್ರವೇ ವಾರ್ಷಿಕ ಟೋಲ್ ಪಾಸ್ ನೀಡಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಕಾರು, ಜೀಪ್, ವ್ಯಾನ್ಗಳಿಗೆ ವಾರ್ಷಿಕ ಟೋಲ್ ಪಾಸ್ ಪಡೆಯಬಹುದು. ವಾರ್ಷಿಕ ಪಾಸ್ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್ಗಳ ವರೆಗೆ ಪಾಸ್ ಮಾನ್ಯವಾಗಿರುತ್ತದೆ. ಈ ಯೋಜನೆಯು ಖಾಸಗಿ ವಾಹನ ಸವಾರರಿಗೆ ಲಾಭದಾಯಕವಾಗಿದ್ದು, ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಪ್ರಯಾಣಕ್ಕೆ ಅವಕಾಶ ನೀಡಲಿದೆ.
ಫಾಸ್ಟ್ಟ್ಯಾಗ್ ಈಗಾಗಲೇ ದೇಶಾದ್ಯಂತ ಟೋಲ್ ಗೇಟ್ಗಳಲ್ಲಿ ಸಮಯ ಉಳಿತಾಯ ಮತ್ತು ಪಾರದರ್ಶಕ ವಹಿವಾಟು ಖಾತರಿಪಡಿಸುವ ಪರಿಣಾಮಕಾರಿ ವಿಧಾನವಾಗಿದೆ. ಆದರೆ ಕೆಲವೊಮ್ಮೆ ಟೋಲ್ ಪಾವತಿಗೆ ವಿಳಂಬ ಆಗುವುದನ್ನು ತಪ್ಪಿಸಲು ಹೊಸ ವಿಧಾನ ಜಾರಿಗೆ ತರಲಾಗಿದೆ. ಆದರೆ ವಾಣಿಜ್ಯ ವಾಹನಗಳಾದ ಟ್ಯಾಕ್ಸಿಗಳು, ಬಸ್ ಅಥವಾ ಟ್ರಕ್ಗಳಿಗೆ ಈ ಪಾಸ್ ಅನ್ವಯವಾಗುವುದಿಲ್ಲ. ಸದ್ಯಕ್ಕೆ ಖಾಸಗಿ ವಾಹನ ಮಾಲೀಕರು ತಮ್ಮ ಫಾಸ್ಟ್ಟ್ಯಾಗ್ ಖಾತೆಗೆ ಈ ವಾರ್ಷಿಕ ಯೋಜನೆಯನ್ನು ಲಿಂಕ್ ಮಾಡಬಹುದಾಗಿದೆ.
Minister of Road Transport and Highways Nitin Gadkari Wednesday announced a FASTag-based annual pass priced at Rs 3,000 for “hassle-free-highway travel”. He said the new system, exclusively for non-commercial private vehicles such as cars, jeeps, and vans, will address the “long-standing concerns” regarding toll plazas.
19-10-25 07:00 pm
HK News Desk
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
MLA K.N. Rajanna: ರಸ್ತೆಯಲ್ಲಿ ನಮಾಜ್ ಮಾಡಲು ಮುಸ್...
18-10-25 09:11 pm
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
19-10-25 07:58 pm
Mangalore Correspondent
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
ದಿನೇಶ್ ಮಟ್ಟುಗೆ ಕಾಂಗ್ರೆಸ್ ಸಿದ್ಧಾಂತ ಗೊತ್ತಿಲ್ಲ,...
18-10-25 11:01 pm
Kantara Controversy, Mangalore: ದೈವದ ಹೆಸರಲ್ಲಿ...
18-10-25 07:26 pm
Ullal, Someshwara, Pillar: ಸೋಮೇಶ್ವರ ಪಿಲಾರಿನಲ್...
17-10-25 09:36 pm
19-10-25 01:26 pm
Bangalore Correspondent
MSME Fraud, SBI Malikatte, Mangalore': ಕೇಂದ್ರ...
18-10-25 10:49 pm
Auto Driver Assaulted, Traffic Police in Putt...
18-10-25 03:48 pm
Fake Gold Scam, Belthangady Anugraha Society:...
18-10-25 03:27 pm
Illegal Arms Case, Mahesh Shetty Timarodi: ಅಕ...
18-10-25 01:52 pm