ಬ್ರೇಕಿಂಗ್ ನ್ಯೂಸ್
19-06-25 07:13 pm HK News Desk ದೇಶ - ವಿದೇಶ
ಟೆಹ್ರಾನ್, ಜೂನ್.19: ಇರಾನ್- ಇಸ್ರೇಲ್ ಸಂಘರ್ಷ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಎರಡೂ ರಾಷ್ಟ್ರಗಳ ನಡುವೆ ಕ್ಷಿಪಣಿ ದಾಳಿ ತೀವ್ರಗೊಂಡಿದೆ. ಅಮೆರಿಕ ಮತ್ತು ಇಸ್ರೇಲ್ ಬೆದರಿಕೆಗೆ ಸೊಪ್ಪು ಹಾಕದ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ, ನಾವು ವಿದೇಶಿ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಇಸ್ರೇಲ್ ರಾಜಧಾನಿ ಮತ್ತು ಇನ್ನಿತರ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿ ಇರಾನ್ ಡಜನ್ ಗಟ್ಟಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ.
ದಕ್ಷಿಣ ಇಸ್ರೇಲ್ ಭಾಗದ ಬೀರ್ ಶೆವಾ ನಗರದಲ್ಲಿರುವ ಅತಿದೊಡ್ಡ ಆಸ್ಪತ್ರೆ ಸೊರೊಕಾ ಕೇಂದ್ರಕ್ಕೆ ಕ್ಷಿಪಣಿ ಅಪ್ಪಳಿಸಿದ್ದು, ವ್ಯಾಪಕ ಹಾನಿ ಉಂಟು ಮಾಡಿದೆ. ಈ ವೇಳೆ ಆಸ್ಪತ್ರೆಯಲ್ಲಿದ್ದ ರೋಗಿ ಮತ್ತು ವೈದ್ಯಕೀಯ ಸಿಬಂದಿ ಸುರಕ್ಷಿತ ಜಾಗದಲ್ಲಿ ಅಡಗಿದ್ದರಿಂದ ಹೆಚ್ಚಿನ ಸಾವು, ನೋವು ಆಗಿಲ್ಲ. ಆದರೆ ದಾಳಿ ವೇಳೆ ಕಟ್ಟಡದಲ್ಲಿ ಅಡಗಿದ್ದ 47 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೊರೊಕಾ ಆಸ್ಪತ್ರೆ ಇಸ್ರೇಲ್‌ನ ಪ್ರಮುಖ ವೈದ್ಯಕೀಯ ಕೇಂದ್ರಗಳಲ್ಲಿ ಒಂದಾಗಿದೆ. ಅದರ ವೆಬ್‌ಸೈಟ್ ಪ್ರಕಾರ ದಕ್ಷಿಣ ಇಸ್ರೇಲಿನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಈ ಆಸ್ಪತ್ರೆ ಚಿಕಿತ್ಸೆ ಒದಗಿಸುತ್ತದೆ. ಗಾಜಾದಿಂದ ಕೇವಲ 22 ಮೈಲುಗಳಷ್ಟು ದೂರದಲ್ಲಿರುವ ಸೊರೊಕಾ ಯುದ್ಧದಲ್ಲಿ ಗಾಯಗೊಂಡ ಜನರಿಗೆ ಚಿಕಿತ್ಸೆ ನೀಡುತ್ತದೆ.
ಪ್ರಮುಖ ಆಸ್ಪತ್ರೆ ಸೇರಿದಂತೆ ಹಲವು ನಾಗರಿಕ ಪ್ರದೇಶಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ಇದಕ್ಕೆ ಭಾರೀ ಬೆಲೆ ತೆರಲಿದೆ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ, ಇಸ್ರೇಲ್ ಇರಾನ್ ದೇಶದ ಅರಾಕಾದಲ್ಲಿರುವ ನೀರಿನ ಸರಬರಾಜು ರಿಯಾಕ್ಟರ್ ಮತ್ತು ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಿದೆ.
An Iranian missile barrage has struck several sites across Israel, damaging a hospital in the country’s south, and Israel has attacked Iran’s Arak heavy water nuclear reactor as the two countries trade fire for a seventh consecutive day.
19-10-25 07:00 pm
HK News Desk
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
MLA K.N. Rajanna: ರಸ್ತೆಯಲ್ಲಿ ನಮಾಜ್ ಮಾಡಲು ಮುಸ್...
18-10-25 09:11 pm
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
19-10-25 10:32 pm
Mangalore Correspondent
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
ದಿನೇಶ್ ಮಟ್ಟುಗೆ ಕಾಂಗ್ರೆಸ್ ಸಿದ್ಧಾಂತ ಗೊತ್ತಿಲ್ಲ,...
18-10-25 11:01 pm
Kantara Controversy, Mangalore: ದೈವದ ಹೆಸರಲ್ಲಿ...
18-10-25 07:26 pm
19-10-25 01:26 pm
Bangalore Correspondent
MSME Fraud, SBI Malikatte, Mangalore': ಕೇಂದ್ರ...
18-10-25 10:49 pm
Auto Driver Assaulted, Traffic Police in Putt...
18-10-25 03:48 pm
Fake Gold Scam, Belthangady Anugraha Society:...
18-10-25 03:27 pm
Illegal Arms Case, Mahesh Shetty Timarodi: ಅಕ...
18-10-25 01:52 pm