ಬ್ರೇಕಿಂಗ್ ನ್ಯೂಸ್
22-06-25 04:57 pm HK News Desk ದೇಶ - ವಿದೇಶ
ಲಕ್ನೋ, ಜೂನ್ 22: ನಾವು ಯೋಗ ಮಾಡುವುದನ್ನು ಒಪ್ಪುತ್ತೇವೆ, ಎಲ್ಲ ಪುರುಷ, ಮಹಿಳೆಯರೂ ಯೋಗವನ್ನು ಮಾಡಬೇಕು. ಮದ್ರಸಾ, ಮಸೀದಿಗಳಲ್ಲೂ ಯೋಗವನ್ನು ಮಾಡಬೇಕು. ಆದರೆ ಸೂರ್ಯ ನಮಸ್ಕಾರ ಯೋಗವನ್ನು ಮಾತ್ರ ವಿರೋಧಿಸುತ್ತೇವೆ. ಇಸ್ಲಾಮ್ ಪ್ರಕಾರ, ಸೂರ್ಯನಿಗೆ ನಮಸ್ಕರಿಸುವ ಯೋಗ ಹರಾಮ್ ಇದ್ದಂತೆ, ನಮಗೆ ನಿಷಿದ್ಧವಾಗಿದೆ. ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬಾರದು. ಹೀಗೆಂದು ಉತ್ತರ ಪ್ರದೇಶದ ಬರೇಲ್ವಿ ಮೂಲದ ಮೌಲಾನಾ ಶಹಾಬುದ್ದೀನ್ ರಜ್ವಿ ಎಂಬವರು ಹೊಸ ವಾದ ಮುಂದಿಟ್ಟಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಬರೇಲ್ವಿ ಜಿಲ್ಲೆಯ ದರ್ಗಾ ಇ-ಅಲಾ- ಹಜ್ರತ್ ನಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಈ ಮಾತು ಹೇಳಿದ್ದಾರೆ. ಸೂರ್ಯನಿಗೆ ನಮಿಸುವುದು ಇಸ್ಲಾಮಿಗೆ ವಿರುದ್ಧ. ಹಾಗಾಗಿ ಸೂರ್ಯ ನಮಸ್ಕಾರ ಮಾಡುವ ಯೋಗ ಮಾಡಬಾರದೆಂದು ಮುಸ್ಲಿಮರಿಗೆ ಹೇಳುತ್ತೇನೆ. ಇಸ್ಲಾಮಿನಲ್ಲೂ ಯೋಗ ಇದೆ, ಯೋಗ ಯಾವುದೇ ಧರ್ಮಕ್ಕೆ ಸಂಬಂಧಪಟ್ಟದ್ದು ಅಲ್ಲ. ಯಾರು ಕೂಡ ಯೋಗವನ್ನು ತಮ್ಮ ಧರ್ಮದ್ದೆಂದು ಹೇಳಬಾರದು. ಸೂರ್ಯ ನಮಸ್ಕಾರ ಎನ್ನುವುದು ಸನಾತನ ಧರ್ಮದಲ್ಲಿ ಇರುವಂಥದ್ದು. ಆದರೆ ಮುಸ್ಲಿಮರಿಗೆ ಸೂರ್ಯ ನಮಸ್ಕಾರ ಹರಾಮ್ ಎಂದು ಹೇಳಿದ್ದಾರೆ.
ಸೂರ್ಯನಿಗೆ ಉಗಿದರೆ ಮುಖಕ್ಕೇ ಬೀಳುತ್ತದೆs
ಆಲ್ ಇಂಡಿಯಾ ಮುಸ್ಲಿಮ್ ಜಮಾತ್ ಕಮಿಟಿಯ ಅಧ್ಯಕ್ಷರೂ ಆಗಿರುವ ರಜ್ವಿ ಮಾತಿಗೆ ಉತ್ತರ ಪ್ರದೇಶದ ಸಚಿವ ಜೆಪಿಎಸ್ ರಾಥೋಡ್ ಪ್ರಬಲ ತಿರುಗೇಟು ನೀಡಿದ್ದು, ಸೂರ್ಯ ಎಷ್ಟು ಸತ್ಯವೋ, ಸೂರ್ಯ ನಮಸ್ಕಾರವೂ ಅಷ್ಟೇ ಸತ್ಯ. ಸೂರ್ಯ ಉದಯಿಸುವುದು ಹೇಗೆಯೋ ಸೂರ್ಯ ನಮಸ್ಕಾರ ಯೋಗವೂ ಹಾಗೇ ಮುಂದುವರಿಯುತ್ತದೆ ಎಂದಿದ್ದಾರೆ. ಸೂರ್ಯನಿಗೆ ಮೇಲೆ ನೋಡಿ ಉಗಿದರೆ ಅದು ಉಗುಳಿದವನ ಮುಖಕ್ಕೇ ಬಂದು ಬೀಳುತ್ತದೆ. ಸೂರ್ಯ ನಮಸ್ಕಾರ ವಿರೋಧಿಸುವವರಿಗೂ ಇದು ಅನ್ವಯ ಆಗುತ್ತದೆ. ಯೋಗ ಅಭ್ಯಾಸ ಅನ್ನುವುದು ಪ್ರಾಚೀನ ಕಾಲದಿಂದ ಬಂದಿರುವಂಥದ್ದು. ಅದನ್ನು ಎಲ್ಲರೂ ಸ್ವೀಕರಿಸಿ ಪಾಲಿಸಬೇಕು. ಅದನ್ನು ತನ್ನ ಮೂಗಿನ ನೇರಕ್ಕೆ ನೋಡಿ ವಿರೋಧಿಸುವುದರಲ್ಲಿ ಅರ್ಥ ಇಲ್ಲ ಎಂದು ಹೇಳಿದ್ದಾರೆ.
A fresh controversy has erupted after a prominent cleric from Uttar Pradesh stated that while Muslims can accept yoga as a form of physical exercise, the practice of Surya Namaskar remains haram (forbidden) under Islamic teachings.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm