ಬ್ರೇಕಿಂಗ್ ನ್ಯೂಸ್
24-06-25 01:02 am HK News Desk ದೇಶ - ವಿದೇಶ
ಕತಾರ್ , ಜೂ 24: ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷಕ್ಕೆ ಅಮೆರಿಕ ಎಂಟ್ರಿ ಕೊಟ್ಟು, ಇರಾನ್ನ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡಿದ ನಂತರ, ಇದೀಗ ಇರಾನ್ ಸಹ ಅಮೆರಿಕಾಗೆ ತೀರುಗೇಟು ನೀಡಿದ್ದು, ಕತಾರ್ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದೆ. ಸೋಮವಾರ ಕತಾರ್ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಆರು ಕ್ಷಿಪಣಿಗಳನ್ನು ಹಾರಿಸಿದೆ, ಆದರೆ ದೋಹಾದಲ್ಲಿ ಮತ್ತಷ್ಟು ಸ್ಫೋಟಗಳು ಕೇಳಿಬಂದಿವೆ ಎಂದು ರಾಯಿಟರ್ಸ್ ವರದಿ ಮಾಡಿದ್ದಾರೆ.
ಇರಾನ್ನಲ್ಲಿ ಮೂರು ಪರಮಾಣು ನೆಲೆಗಳ ಮೇಲೆ ಅಮೆರಿಕ ಸೇನೆಯು ಬಾಂಬ್ ದಾಳಿ ನಡೆಸಿ ಇಸ್ರೇಲ್-ಇರಾನ್ ಯುದ್ಧಕ್ಕೆ ಪ್ರವೇಶಿಸಿದ ಒಂದು ದಿನದ ನಂತರ ಇರಾನ್ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಕತಾರ್ನಲ್ಲಿರುವ ಪ್ರಮುಖ ನೆಲೆಯಾದ ಅಲ್ ಉದೈದ್ ವಾಯುನೆಲೆ ಮೇಲೆ ಆರು ಕ್ಷೀಪಣಿಗಳನ್ನು ಉಡಾಯಿಸಿದೆ.
ಇದಕ್ಕೂ ಮುನ್ನ ಮಧ್ಯಪ್ರಾಚ್ಯದಲ್ಲಿರುವ (ಪಶ್ಚಿಮ ಏಷ್ಯಾ) ಅಮೆರಿಕದ ಪಡೆಗಳ ಮೇಲೆ ಸಂಭಾವ್ಯ ದಾಳಿ ನಡೆಸಲು ಇರಾನ್ ತನ್ನ ಕ್ಷಿಪಣಿ ಉಡಾವಣಾ ಸಾಧನಗಳನ್ನು ಸಜ್ಜುಗೊಳಿಸುತ್ತಿದೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.
ಮುಂದುವರೆದು, ಅಮೆರಿಕದ ಸೇನಾಯು ನಮ್ಮ ಮೇಲೆ ದಾಳಿ ಮಾಡಿದ ನಂತರ, ಕತಾರ್ನ ಅಲ್ ಉದೈದ್ ವಾಯುನೆಲೆಯಲ್ಲಿ ನೆಲೆಗೊಂಡಿದ್ದ ಅಮೆರಿಕದ ಪಡೆಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದೆ. ಇನ್ನು ಈ ಘೋಷಣೆಯನ್ನು ಸರ್ಕಾರಿ ವಾಹಿನಿಯಲ್ಲಿ ಸಮರ ಸಂಗೀತದೊಂದಿಗೆ ಮಾಡಲಾಗಿದ್ದು, ಈ ವೇಳೆ "ಅಮೆರಿಕದ ಆಕ್ರಮಣಕ್ಕೆ ಇರಾನ್ನ ಸಶಸ್ತ್ರ ಪಡೆಗಳ ಪ್ರಬಲ ಮತ್ತು ಯಶಸ್ವಿ ಪ್ರತಿಕ್ರಿಯೆ" ಎಂದು ಅದು ಕರೆದಿದೆ. ಇನ್ನೊಂದೆಡೆ, "ಕತಾರ್ನಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆದ ಬಗ್ಗೆ ಕತಾರ್ ಸರ್ಕಾರಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ನಾವು ಕತಾರ್ನ ಯಾವುದೇ ವ್ಯಕ್ತಿಗೆ ಹಾನಿ ಮಾಡಲು ಬಯಸುವುದಿಲ್ಲ. ಈ ಕ್ರಮ ಅಮೆರಿಕದ ವಿರುದ್ಧ ಮಾತ್ರ. ಅಮೆರಿಕ ಮಾಡಿದಷ್ಟು ಬಾಂಬ್ಗಳನ್ನು ನಾವು ಬೀಳಿಸಿದ್ದೇವೆ" ಎಂದು ಇರಾನ್ ಹೇಳಿದೆ.
ಏತನ್ಮಧ್ಯೆ, ನಾಗರಿಕರು, ನಿವಾಸಿಗಳು, ಸಂದರ್ಶಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು" ಕತಾರ್ ತನ್ನ ವಾಯುಪ್ರದೇಶವನ್ನು ಮುಚ್ಚುತ್ತದೆ ಎಂದು ಕತಾರ್ ಸರ್ಕಾರ ಆದೇಶಿಸಿದ್ದು, ಹೀಗಾಗಿ, ದೋಹಾಗೆ ತೆರಳುತ್ತಿದ್ದ ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಮತ್ತೊಂದೆಡೆ, ಇರಾಕ್ನಲ್ಲಿರುವ ಅಮೆರಿಕಾದ ಸೇನಾ ನೆಲೆಗಳ ಮೇಲೂ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ.
ಕತಾರ್ನಲ್ಲಿರುವ ತಮ್ಮ ನಾಗರಿಕರು ಸ್ಥಳದಲ್ಲಿ ಆಶ್ರಯ ಪಡೆಯುವಂತೆ ಅಮೆರಿಕ ಎಚ್ಚರಿಸಿದೆ. ಈಗಲೇ ಹತ್ತಿರದಲ್ಲಿರುವ ಬಂಕರ್ ಸೇರಿಕೊಳ್ಳಿ ಅಂತ ಅಮೆರಿಕ ಎಚ್ಚರಿಸಿದೆ. ಇನ್ನು ಬ್ರಿಟನ್ ಕೂಡ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತನ್ನ ದೇಶದ ಪ್ರಜೆಗಳಿಗೆ ಸೂಚನೆ ನೀಡಿದೆ.
ಹೆಚ್ಚಿನ ಎಚ್ಚರಿಕೆಯ ಕಾರಣದಿಂದ ಮುಂದಿನ ಸೂಚನೆ ಬರುವವರೆಗೂ ಅಮೆರಿಕನ್ ನಾಗರಿಕರು ಸ್ಥಳದಲ್ಲಿ ಆಶ್ರಯ ಪಡೆಯುವಂತೆ ನಾವು ಶಿಫಾರಸು ಮಾಡುತ್ತೇವೆ ಎಂದು ದೋಹಾದಲ್ಲಿರುವ ಯುಎಸ್ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಕತಾರ್ನಲ್ಲಿರುವ ಅಮೇರಿಕನ್ ಪ್ರಜೆಗಳಿಗೆ ಯುಎಸ್ ಭದ್ರತಾ ಎಚ್ಚರಿಕೆಯನ್ನು ಅನುಸರಿಸಿ, ಹೆಚ್ಚಿನ ಎಚ್ಚರಿಕೆಯ ಕಾರಣ, ಕತಾರ್ನಲ್ಲಿರುವ ಬ್ರಿಟಿಷ್ ಪ್ರಜೆಗಳು ಮುಂದಿನ ಸೂಚನೆ ಬರುವವರೆಗೂ ಸ್ಥಳದಲ್ಲಿ ಆಶ್ರಯ ಪಡೆಯಬೇಕೆಂದು ನಾವು ಶಿಫಾರಸು ಮಾಡುತ್ತೇವೆ ಅಂತ ಬ್ರಿಟನ್ ಕೂಡ ಹೇಳಿದೆ.
What did y'all think was going to happen? Iran has launched attacks against US bases in at least four countries in the Middle East — including Qatar, Bahrain, Kuwait, and Iraq. pic.twitter.com/QxI13l2sWw
— Bill Madden (@maddenifico) June 23, 2025
Iran late on Monday launched "Operation Basharat al-Fath" against US bases in Qatar in response to the American strikes that hit three Iranian nuclear facilities, Isfahan, Fordow, and Natanz, the previous day. The United States has confirmed that its air base in Qatar was targeted by a missile attack from Iran and said no casualties were reported, according to the Associated Press.
10-07-25 09:53 pm
Bangalore Correspondent
ED Raid Congress MLA Subba Reddy: ಮಲೇಶ್ಯಾ, ಬ್...
10-07-25 12:45 pm
ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ ; ಅರ್ಧ ನ...
09-07-25 10:45 pm
Chamarajanagar Heart Attack, Student; 'ಹೃದಯ"ಕ...
09-07-25 04:12 pm
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
11-07-25 12:08 pm
HK News Desk
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
10-07-25 07:23 pm
Mangalore Correspondent
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
10-07-25 08:09 pm
HK News Desk
Kerala Couple, Chit Fund Scam; ಚಿಟ್ ಫಂಡ್ ಹೆಸರ...
10-07-25 01:05 pm
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm
Drugs News, Mangalore: ಮಂಗಳೂರಿಗೆ ಡ್ರಗ್ಸ್ ಪೂರೈ...
09-07-25 10:56 pm
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm