ಬ್ರೇಕಿಂಗ್ ನ್ಯೂಸ್
25-06-25 07:40 pm HK News Desk ದೇಶ - ವಿದೇಶ
ಚೆನ್ನೈ, ಜೂ 24 : ಆಸ್ತಿಗಾಗಿ ನಡೆದ ಜಗಳದಲ್ಲಿ ಮಾಜಿ ಯೋಧನೊಬ್ಬ ತನಗೆ ಸೇರಿದ ನಾಲ್ಕು ಕೋಟಿ ಮೌಲ್ಯದ ಆಸ್ತಿ ಪತ್ರಗಳನ್ನು ದೇವಸ್ಥಾನದ ಹುಂಡಿಗೆ ಹಾಕಿರುವ ವಿಚಿತ್ರ ಘಟನೆಯೊಂದು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ನಡೆದಿದೆ
ನಿವೃತ್ತ ಸೇನಾಧಿಕಾರಿ ಎಸ್. ವಿಜಯನ್ ಅವರೇ ತಮಗೆ ಸೇರಿದ ನಾಲ್ಕು ಕೋಟಿಯ ಆಸ್ತಿಯನ್ನು ದೇವಸ್ಥಾನದ ಹುಂಡಿಗೆ ಹಾಕಿರುವ ವ್ಯಕ್ತಿ.
ಹುಂಡಿ ಎಣಿಕೆ ವೇಳೆ ಕಾಗದ ಪತ್ರ ಪತ್ತೆ ;
ತಮಿಳುನಾಡಿನ ತಿರುವಣ್ಣಾಮಲೈನ ರೇಣುಕಾಂಬಳ ದೇವಸ್ಥಾನದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹೇಳಿರುವಂತೆ ವರ್ಷದ ಕೆಲವು ದಿನಗಳಲ್ಲಿ ದೇವಸ್ಥಾನದ ಹುಂಡಿಯನ್ನು ತೆರೆಯಲಾಗುತ್ತದೆ ಜೊತೆಗೆ ಅದರಲ್ಲಿರುವ ಹಣ ಮತ್ತು ಚಿನ್ನ ಬೆಳ್ಳಿಯ ರೂಪದಲ್ಲಿ ಬಂದಿರುವ ವಸ್ತುಗಳನ್ನು ಲೆಕ್ಕ ಮಾಡಲಾಗುತ್ತದೆ ಅದರಂತೆ ಜೂನ್ 24 ರಂದು ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿತ್ತು ಈ ವೇಳೆ ಹುಂಡಿಯಲ್ಲಿ ಮನೆಗೆ ಸಂಬಂಧಿಸಿದ ಆಸ್ತಿ ಪತ್ರ ಸಿಕ್ಕಿದ್ದು, ಇದನ್ನ ನೋಡಿದ ದೇವಸ್ಥಾನದ ಆಡಳಿತ ಅಧಿಕಾರಿಗಳು ದಂಗಾಗಿದ್ದಾರೆ.
ದೇವಸ್ಥಾನಕ್ಕೆ ಸೇರಿದ್ದು:
ಇನ್ನು ಈ ವಿಚಾರಕ್ಕೆ ಸಂಬಂಧಿಸಿ ದೇವಸ್ಥಾನದ ಆಡಳಿತ ಮಂಡಳಿ ವಿಜಯನ್ ಅವರನ್ನು ಸಂಪರ್ಕಿಸಿ ವಿಚಾರಿಸಿದ ವೇಳೆ, ನಾನು ಸ್ವ ಇಚ್ಛೆಯಿಂದ ನನ್ನ ಮನೆಯ ಕಾಗದ ಪತ್ರಗಳನ್ನು ದೇವಸ್ಥಾನಕ್ಕೆ ನೀಡುತ್ತಿದ್ದೇನೆ ಅಲ್ಲದೆ ಲಿಖಿತ ರೂಪದಲ್ಲೂ ಆಸ್ತಿಯನ್ನು ದೇವಸ್ಥಾನಕ್ಕೆ ನೀಡಲು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.
ಆಸ್ತಿಗಾಗಿ ಜಗಳ:
ವಿಜಯನ್ ಅವರ ಪತ್ನಿ ಕಸ್ತೂರಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದು ಅವರಿಗೆ ಸುಬ್ಬುಲಕ್ಷ್ಮಿ ಮತ್ತು ರಾಜಲಕ್ಷ್ಮಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು ಅವರು ಮದುವೆಯಾಗಿ ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಈ ನಡುವೆ ವಿಜಯನ್ ಮತ್ತು ಪತ್ನಿ ಕಸ್ತೂರಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಕೆಲ ವರುಷಗಳಿಂದ ಬೇರೆ ಬೇರೆಯಾಗಿ ವಾಸವಾಗಿದ್ದಾರೆ. ಜೊತೆಗೆ ಕೆಲವು ತಿಂಗಳ ಹಿಂದೆ ದಂಪತಿಗಳ ನಡುವೆ ಜಗಳ ನಡೆದಿದ್ದು, ಕಸ್ತೂರಿಯವರ ಸಂಬಂಧಿಕರು ವಿಜಯನ್ ಅವರಿಗೆ ಬೆದರಿಕೆ ಹಾಕಿದ ಎಂದು ಹೇಳಲಾಗಿದೆ. ಇದರಿಂದಾಗಿ ತೀವ್ರ ಸಂಕಷ್ಟದಲ್ಲಿದ್ದ ವಿಜಯನ್, ಕೆಲವು ದಿನಗಳ ಹಿಂದೆ ಪಟವೇಡು ಗ್ರಾಮದಲ್ಲಿರುವ ಶ್ರೀ ರೇಣುಕಾಂಬಳ ದೇವಸ್ಥಾನಕ್ಕೆ ಹೋಗಿ ನಾಲ್ಕು ಕೋಟಿ ಮೌಲ್ಯದ ಆಸ್ತಿ ಪತ್ರಗಳನ್ನು ದೇವಸ್ಥಾನದ ಹುಂಡಿಗೆ ಹಾಕಿ ಬಂದಿದ್ದಾರೆ.
ಇನ್ನು ಆಸ್ತಿ ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ವಿಜಯನ್ ನಾನು ದೇವಸ್ಥಾನಕ್ಕೆ ದಾನ ನೀಡಿದ್ದು ನನ್ನ ಸ್ವಂತ ಆಸ್ತಿಯಷ್ಟೇ ಇದು ಪೂರ್ವಜರಿಗೆ ಸೇರಿದ ಆಸ್ತಿಯಲ್ಲ ಇದರ ಸಂಪೂರ್ಣ ಹಕ್ಕು ನನಗೆ ಮಾತ್ರ ಇರುವುದು ಎಂದು ಸ್ಪಷ್ಟಪಡಿಸಿದ್ದಾರೆ.
ದೇವಸ್ಥಾನಕ್ಕೆ ಓಡೋಡಿ ಬಂದ ಪತ್ನಿ, ಮಕ್ಕಳು;
ಇನ್ನು ಮನೆಯ ಕಾಗದ ಪತ್ರಗಳನ್ನು ದೇವಸ್ಥಾನದ ಹುಂಡಿಗೆ ಹಾಕಿರುವ ವಿಚಾರ ಗೊತ್ತಾಗುತ್ತಿದ್ದಂತೆ ಪತ್ನಿ, ಮತ್ತು ಮಕ್ಕಳು ನಮಗೆ ವಿಚಾರ ತಿಳಿಸದೇ ಈ ನಿರ್ಧಾರ ಕೈಗೊಂಡಿದ್ದಾರೆ ದಯವಿಟ್ಟು, ನಮ್ಮ ಮನೆಯ ಕಾಗದ ಪತ್ರಗಳನ್ನು ನಮಗೆ ಒಪ್ಪಿಸಿ ಎಂದು ದೇವಸ್ಥಾನದ ಆಡಳಿತ ಮಂಡಳಿಯನ್ನ ಕೇಳಿಕೊಂಡಿದ್ದಾರೆ, ಇನ್ನು ದೇವಸ್ಥಾನದ ಆಡಳಿತ ಮಂಡಳಿ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.
When authorities of Arulmigu Renugambal Amman temple, which is maintained by HR&CE Department, in Padavedu village near Arani town in Tiruvannamalai district opened a ‘hundi’ for counting at 12.30 p.m. on Tuesday (June 24, 2025), they were in for a huge surprise — they found bundles of original property documents that is worth nearly ₹4 crore.
31-07-25 11:20 pm
Bangalore Correspondent
Kolar woman blood group: ಕೋಲಾರದ ಮಹಿಳೆಯಲ್ಲಿ ವಿ...
31-07-25 10:20 am
Pranab Mohanty, SIT, Dharmasthala; ಎಡಿಜಿಪಿ ಪ್...
30-07-25 06:28 pm
Dharmasthala Burial Site, Atm, Pan Card Found...
30-07-25 05:42 pm
Al Qaeda Arrest, Bangalore: ಕರ್ನಾಟಕ ರಾಜಧಾನಿಗೂ...
30-07-25 11:40 am
31-07-25 10:08 pm
HK News Desk
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
31-07-25 11:16 pm
Mangalore Correspondent
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
Human Skull, Multiple Bones, Dharmasthala, SI...
31-07-25 08:45 pm
31-07-25 06:04 pm
Mangalore Correspondent
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm
Mysuru Drugs, Crime, Mumbai Police: ಮೈಸೂರಿನಲ್...
30-07-25 11:37 am
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm