ಬ್ರೇಕಿಂಗ್ ನ್ಯೂಸ್
25-06-25 10:05 pm HK News Desk ದೇಶ - ವಿದೇಶ
ಕೊಚ್ಚಿ, ಜೂನ್ 25 : ಕೇರಳದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು ಒಬ್ಬರು ಜಿಲ್ಲಾ ನ್ಯಾಯಾಧೀಶರು ಸೇರಿ ಬರೋಬ್ಬರಿ 977 ಪ್ರಮುಖರನ್ನು ಕೊಲ್ಲಲು ಹಿಟ್ ಲಿಸ್ಟ್ ಮಾಡಿತ್ತು ಎಂಬ ಸ್ಫೋಟಕ ಅಂಶವನ್ನು ಎನ್ಐಎ ಬಹಿರಂಗ ಮಾಡಿದೆ. ಬಿಜೆಪಿ ಮತ್ತು ಹಿಂದು ಸಂಘಟನೆ ನಾಯಕರು, ಕಾರ್ಯಕರ್ತರು ಸೇರಿದಂತೆ ಇಡೀ ರಾಜ್ಯದಲ್ಲಿ ಪ್ರಮುಖರ ಹೆಸರು, ಉದ್ಯೋಗ ಮತ್ತು ಫೋಟೊಗಳ ಪಟ್ಟಿಯನ್ನು ಪಿಎಫ್ಐ ಸಿದ್ಧಪಡಿಸಿತ್ತು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
2022ರಲ್ಲಿ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ಆರೆಸ್ಸೆಸ್ ಮುಖಂಡ ಶ್ರೀನಿವಾಸನ್ ಕೊಲೆ ಪ್ರಕರಣದಲ್ಲಿ ಆರೋಪಿಗಳ ಜಾಮೀನು ಅರ್ಜಿಗೆ ಎನ್ಐಎ ವಿರೋಧ ವ್ಯಕ್ತಪಡಿಸಿದ್ದು, ಪಿಎಫ್ಐ ಕುರಿತ ಹಿಟ್ ಲಿಸ್ಟ್ ವರದಿಯನ್ನು ಸಲ್ಲಿಸಿ ಆಕ್ಷೇಪಿಸಿದೆ. ಶ್ರೀನಿವಾಸನ್ ಹತ್ಯೆ ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಬಿಲಾಲ್, ರಿಯಾಸುದ್ದೀನ್ ಅವರು ಜಾಮೀನು ಅರ್ಜಿ ಸಲ್ಲಿಸಿದ್ದಕ್ಕೆ ಪ್ರತಿಯಾಗಿ ಎನ್ಐಎ ಹಲವು ವಿಚಾರಗಳನ್ನು ಉಲ್ಲೇಖಿಸಿದೆ.
ಹಿಟ್ ಲಿಸ್ಟ್ನಲ್ಲಿ ನ್ಯಾಯಾಧೀಶರ ಹೆಸರು
ಪಿಎಫ್ಐ ಕೇರಳ ರಾಜ್ಯಾದ್ಯಂತ ಗಲ್ಲಿ ಗಲ್ಲಿಗಳಲ್ಲೂ ಹಿಂದು ಸಮುದಾಯದ ಪ್ರಮುಖರನ್ನು ಗುರುತಿಸಿ ಕೊಲ್ಲುವುದಕ್ಕೆ ಲಿಸ್ಟ್ ಮಾಡಿತ್ತು. ಪ್ರತಿಯೊಬ್ಬರ ಬಗ್ಗೆಯೂ ಮಾಹಿತಿ ಕಲೆಹಾಕಲು, ಯಾರನ್ನು ಟಾರ್ಗೆಟ್ ಮಾಡಿ ಪಟ್ಟಿ ತಯಾರಿಸಬೇಕೆಂದು ತರಬೇತುಗೊಂಡ ರಿಪೋರ್ಟರ್ ವಿಂಗ್ ಒಂದನ್ನು ಇಟ್ಟುಕೊಂಡಿತ್ತು. ಈ ವಿಂಗ್ ಪಿಎಫ್ಐ ಪಾಲಿಗೆ ಗುಪ್ತಚರ ತಂಡದ ರೀತಿ ಕಾರ್ಯ ನಿರ್ವಹಿಸುತ್ತಿತ್ತು. ಇದೇ ರಿಪೋರ್ಟರ್ ವಿಂಗ್ನಲ್ಲಿ ಶ್ರೀನಿವಾಸನ್ ಹತ್ಯೆ ಆರೋಪಿ ಸಿರಾಜುದ್ದೀನ್ ಸದಸ್ಯನಾಗಿದ್ದ. ಕೇರಳದ ಮಾಜಿ ಜಿಲ್ಲಾ ನ್ಯಾಯಾಧೀಶರು ಸೇರಿದಂತೆ ಅಧಿಕಾರಿಗಳು, ಮುಸ್ಲಿಂ ವಿರೋಧಿಯಾಗಿ ಕಂಡವರನ್ನು, ಹಿಂದುತ್ವ ಪರವಾಗಿ ಕೆಲಸ ಮಾಡುತ್ತಿದ್ದವರನ್ನು ಪಿಎಫ್ಐ ಹಿಟ್ ಲಿಸ್ಟ್ನಲ್ಲಿ ಸೇರಿಸಿತ್ತು. ಅಬ್ದುಲ್ ವಹಾಬ್ ಎಂಬ ಮತ್ತೊಬ್ಬ ಆರೋಪಿಯ ಫೋನ್ ನಲ್ಲಿ ಈ ರೀತಿಯ ಹಿಟ್ ಲಿಸ್ಟ್ ಇರುವುದನ್ನು ಪತ್ತೆ ಮಾಡಿದ್ದು ಅವುಗಳನ್ನು ಸೀಜ್ ಮಾಡಿದ್ದಾಗಿ ಎನ್ಐಎ ಹೇಳಿದೆ.
ಮತ್ತೊಬ್ಬ ಪರಾರಿಯಾದ ಆರೋಪಿ ಅಬ್ದುಲ್ ತಹಾ ಎಂಬಾತನ ಮನೆಯಲ್ಲಿ 500 ಮಂದಿಯ ಹಿಟ್ ಲಿಸ್ಟ್ ವಶಕ್ಕೆ ಪಡೆಯಲಾಗಿದೆ. ಈ ಪಟ್ಟಿಯಲ್ಲಿ ವಕೀಲರು, ಪಕ್ಷದ ಕಾರ್ಯಕರ್ತರು ಸೇರಿ ವಿವಿಧ ವಲಯಗಳ ಜನರು ಇದ್ದಾರೆ. ಟಾರ್ಗೆಟ್ ಆಗಿದ್ದ ವ್ಯಕ್ತಿಗಳ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿದ್ದರು. ಫೋಟೊ, ಉದ್ಯೋಗ, ದೈನಂದಿನ ಚಟುವಟಿಕೆ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿತ್ತು. ಅಗತ್ಯ ಬಿದ್ದ ಸಂದರ್ಭದಲ್ಲಿ ಇವರನ್ನು ಕೊಲೆ ಮಾಡಲು ತರಬೇತುಗೊಂಡ ಸರ್ವಿಸ್ ಟೀಮ್ ರೆಡಿ ಮಾಡಲಾಗಿತ್ತು. ಇವರನ್ನು ಹಿಟ್ ಟೀಮ್ ಎಂತಲೂ ಕರೆಯುತ್ತಿದ್ದರು. ಇವರಿಗೆ ಶಸ್ತ್ರಾಸ್ತ್ರ ಬಳಕೆ ಬಗ್ಗೆ ತರಬೇತಿ ಕೊಡುವುದಕ್ಕಾಗಿಯೇ ಮತ್ತೊಂದು ತಂಡವೂ ಇತ್ತು. ಆಲುವಾ ಜಿಲ್ಲೆಯ ಪೆರಿಯಾರ್ ವ್ಯಾಲಿ ಕ್ಯಾಂಪಸ್ನಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದರು ಎಂಬ ಮಾಹಿತಿಯನ್ನು ಎನ್ಐಎ ಕಲೆಹಾಕಿದ್ದು ಈ ಕುರಿತ ದಾಖಲೆಯನ್ನು ಕೋರ್ಟಿಗೆ ಸಲ್ಲಿಸಲಾಗಿದೆ.
ತಾವು ಮುಗ್ದರು, ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂದು ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದಕ್ಕೆ ಪ್ರತಿಯಾಗಿ ಎನ್ಐಎ ಆಘಾತಕಾರಿ ಅಂಶಗಳನ್ನು ಮುಂದಿಟ್ಟು ಜಾಮೀನು ನಿರಾಕರಣೆಗೆ ವಾದಿಸಿದೆ. ಶ್ರೀನಿವಾಸನ್ ಅವರನ್ನು ದೊಡ್ಡ ಷಡ್ಯಂತ್ರದ ಭಾಗವಾಗಿ ಕೊಲ್ಲಲಾಗಿತ್ತು. ಇವರ ಮೇಲಿನ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಮೇಲ್ನೋಟಕ್ಕೆ ಸತ್ಯಾಂಶ ಕಂಡುಬಂದಿದೆ ಎಂಬ ಎನ್ಐಎ ವಾದ ಪುರಸ್ಕರಿಸಿದ ಎನ್ಐಎ ವಿಶೇಷ ಕೋರ್ಟ್, ಜಾಮೀನು ನಿರಾಕರಿಸಿ ಆದೇಶ ನೀಡಿದೆ.
ಎಸ್ಡಿಪಿಐ ಕಾರ್ಯಕರ್ತ ಸುಬೇರ್ ಎಂಬಾತನ ಹತ್ಯೆಗೆ ಪ್ರತಿಯಾಗಿ ಶ್ರೀನಿವಾಸನ್ ಹತ್ಯೆ ಮಾಡಲಾಗಿತ್ತು. ಎಸ್ಡಿಪಿಐ ಕಾರ್ಯಕರ್ತನನ್ನು ಆರೆಸ್ಸೆಸ್ ಕಡೆಯವರು ಹತ್ಯೆ ಮಾಡಿದ್ದರೆಂದು ಪ್ರಕರಣ ದಾಖಲಾಗಿತ್ತು. 2022ರ ಸೆಪ್ಟೆಂಬರ್ ತಿಂಗಳಲ್ಲಿ ಭಯೋತ್ಪಾದಕ ಕೃತ್ಯ ಮತ್ತು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿದ್ದಾಗಿ ಹೇಳಿ ದೇಶಾದ್ಯಂತ ಪಿಎಫ್ಐ ಸಂಘಟನೆ ನಿಷೇಧಿಸಲಾಗಿತ್ತು.
In a chilling revelation, the National Investigation Agency (NIA) has exposed that the banned radical outfit, Popular Front of India (PFI), had prepared a hit list of 977 individuals in Kerala, including Hindu leaders, activists, professionals, and even a district judge. The list contained personal details, photographs, and occupations of those targeted.
30-08-25 04:51 pm
Bangalore Correspondent
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
30-08-25 06:44 pm
HK News Desk
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
30-08-25 11:08 pm
Mangalore Correspondent
2002ರ ಉಳ್ಳಾಲದ ಚಾರಿತ್ರಿಕ ನಾಗಮಂಡಲದ ರೂವಾರಿ, ಧಾರ್...
30-08-25 11:01 pm
Mangalore, Ganesh Chaturthi, Catholic: ಸಂಘನಿಕ...
30-08-25 10:10 pm
ಕೊಲ್ಲೂರು ; ನದಿಯಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರಿನ...
30-08-25 09:16 pm
Talapady Accident, Mangalore, Ksrtc Bus: ತಲಪಾ...
30-08-25 04:23 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm