ಬ್ರೇಕಿಂಗ್ ನ್ಯೂಸ್
06-07-25 03:53 pm HK News Desk ದೇಶ - ವಿದೇಶ
ವಾಷಿಂಗ್ಟನ್, ಜು 06 : ಅಮೆರಿಕದ ಟೆಕ್ಸಾಸ್ ನಗರದಲ್ಲಿ ಜೂ. 5ರಂದು ಏಕಾಏಕಿ ಮಳೆ, ಬಲವಾರ ಬಿರುಗಾಳಿಗೆ ಗುಡಾಲುಪ್ ನದಿಯಲ್ಲಿ ದಿಢೀರ್ ಪ್ರವಾಹ ಏರ್ಪಟ್ಟು ಆ ನೀರು ಟೆಕ್ಸಾಸ್ ನಗರದೊಳಕ್ಕೆ ನುಗ್ಗಿ ಜನಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸಿದೆ.
ಪ್ರವಾಹದಲ್ಲಿ ಒಂಬತ್ತು ಮಕ್ಕಳು ಸೇರಿದಂತೆ 27 ಜನರು ಸಾವನ್ನಪ್ಪಿದ್ದಾರೆ. ಅನೇಕರು ನಾಪತ್ತೆಯಾಗಿದ್ದಾರೆ. ರಕ್ಷಣಾ ತಂಡಗಳು ನಾಪತ್ತೆಯಾದ ನಿವಾಸಿಗಳನ್ನು ಹುಡುಕುತ್ತಿವೆ. ಕೆರ್ ಕೌಂಟಿಯ ಕ್ರಿಶ್ಚಿಯನ್ ಬೇಸಿಗೆ ಶಿಬಿರವಾದ ಕ್ಯಾಂಪ್ ಮಿಸ್ಟಿಕ್ನ 24 ಬಾಲಕಿಯರು ಪ್ರವಾಹದಲ್ಲಿ ಸಿಲುಕಿದ್ದಾರೆ. ಗುಡಾಲುಪೆ ನದಿಯಲ್ಲಿ ನೀರಿನ ಮಟ್ಟ ಕೇವಲ 45 ನಿಮಿಷಗಳಲ್ಲಿ 26 ಅಡಿಗಳಷ್ಟು ಏರಿಕೆಯಾಗಿ ಪ್ರವಾಹಕ್ಕೆ ಕಾರಣವಾಯಿತು. ಮೊದಲು ನದಿಯ ಪಕ್ಕದಲ್ಲಿದ್ದ ಕ್ಯಾಬಿನ್ಗಳು, ಮನೆಗಳು ಮತ್ತು ವಾಹನಗಳು ಕೊಚ್ಚಿಹೋದವು, ಆನಂತರ ನೀರು ಟೆಕ್ಸಾಸ್ ನಗರದೊಳಕ್ಕೆ ನುಗ್ಗಿತು ಎಂದು ಮೂಲಗಳು ತಿಳಿಸಿವೆ.
ಈ ಕುರಿತಂತೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜನರ ರಕ್ಷಣೆಗಾಗಿ ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ಈವರೆಗೆ ಅಂದಾಜು 240 ಜನರನ್ನು ರಕ್ಷಿಸಲಾಗಿದೆ. ಹೆಲಿಕಾಪ್ಟರ್ಗಳು, ದೋಣಿಗಳು ಮತ್ತು ಡ್ರೋನ್ಗಳನ್ನು ಬಳಸಿ ಹುಡುಕಾಟ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ದಿಢೀರ್ ಪ್ರವಾಹದಿಂದ ನಾಪತ್ತೆಯಾದ ಮಕ್ಕಳ ಫೋಟೋಗಳನ್ನು ಕುಟುಂಬಗಳು ಸಾಮಾಜಿಕ ಸೋಶಿಯಲ್. ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರವಾಹ ಬರುವ ಮೊದಲು ಯಾವುದೇ ಎಚ್ಚರಿಕೆ ಇರಲಿಲ್ಲ ಎಂದು ಕೆಲವು ನಿವಾಸಿಗಳು ಹೇಳಿದ್ದಾರೆ.
ಸ್ಥಳೀಯ ಅಧಿಕಾರಿಗಳು ಪ್ರವಾಹದ ಬಗ್ಗೆ ನಿರೀಕ್ಷಿಸಿರಲಿಲ್ಲ. ಈ ಬಗ್ಗೆ ಹವಾಮಾನ ಇಲಾಖೆಯಿಂದಲೂ ಯಾವುದೇ ಮುನ್ಸೂಚನೆಯಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಅಕ್ಯುವೆದರ್ ಮತ್ತು ಅಮೆರಿಕದ ರಾಷ್ಟ್ರೀಯ ಹವಾಮಾನ ಸೇವೆ ಬಿರುಗಾಳಿ ಬರುವ ಮುಂಚೆಯೇ ಎಚ್ಚರಿಕೆಗಳನ್ನು ನೀಡಿದ್ದವು ಎಂದು ಹೇಳಿವೆ.
In the early hours of Friday, floods swept across Texas Hill Country. The Guadalupe River rose 26 feet within 45 minutes, according to state officials. The flooding killed at least 14 children and 18 adults, officials said at a press conference on Saturday afternoon. Frantic search efforts continue for 27 girls from a local Christian summer camp — Camp Mystic — who remain missing, as well as other missing individuals.
19-10-25 07:00 pm
HK News Desk
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
MLA K.N. Rajanna: ರಸ್ತೆಯಲ್ಲಿ ನಮಾಜ್ ಮಾಡಲು ಮುಸ್...
18-10-25 09:11 pm
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
19-10-25 07:58 pm
Mangalore Correspondent
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
ದಿನೇಶ್ ಮಟ್ಟುಗೆ ಕಾಂಗ್ರೆಸ್ ಸಿದ್ಧಾಂತ ಗೊತ್ತಿಲ್ಲ,...
18-10-25 11:01 pm
Kantara Controversy, Mangalore: ದೈವದ ಹೆಸರಲ್ಲಿ...
18-10-25 07:26 pm
Ullal, Someshwara, Pillar: ಸೋಮೇಶ್ವರ ಪಿಲಾರಿನಲ್...
17-10-25 09:36 pm
19-10-25 01:26 pm
Bangalore Correspondent
MSME Fraud, SBI Malikatte, Mangalore': ಕೇಂದ್ರ...
18-10-25 10:49 pm
Auto Driver Assaulted, Traffic Police in Putt...
18-10-25 03:48 pm
Fake Gold Scam, Belthangady Anugraha Society:...
18-10-25 03:27 pm
Illegal Arms Case, Mahesh Shetty Timarodi: ಅಕ...
18-10-25 01:52 pm