ನೀರಿಗೆ ಬಿದ್ದ ಮಗುವನ್ನು ರಕ್ಷಿಸಲು ಹೋಗಿ ತಾಯಿ ಮತ್ತು ಅಜ್ಜ ನೀರುಪಾಲು !

23-12-20 05:04 pm       Headline Karnataka News Network   ದೇಶ - ವಿದೇಶ

ಕಾಲುವೆಗೆ ಬಿದ್ದ 5 ವರ್ಷದ ತನ್ನ ಮಗಳನ್ನು ರಕ್ಷಿಸಲು ಹೋದ ಶಿಕ್ಷಕಿ ಮತ್ತು ಆಕೆಯ ತಂದೆ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಲಕ್ನೋ, ಡಿ.23 : ಅಣೆಕಟ್ಟು ಬಳಿಯ ಕಾಲುವೆಗೆ ಬಿದ್ದ 5 ವರ್ಷದ ತನ್ನ ಮಗಳನ್ನು ರಕ್ಷಿಸಲು ಹೋದ ಶಿಕ್ಷಕಿ ಮತ್ತು ಆಕೆಯ ತಂದೆ ಇಬ್ಬರು ಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮೃತ ದುರ್ದೈವಿಗಳನ್ನು ನಾಜಿಯಾ ಶರೂನ್(31) ಮತ್ತು ಈಕೆಯ ತಂದೆ ಟಿ.ಪಿ ಹಸ್ಸೆನಾರ್(61) ಎಂದು ಗುರುತಿಸಲಾಗಿದೆ. ನಾಜಿಯಾ ಲಲಿತ್‍ಪುರ್ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿದ್ದಳು. ಈಕೆ ತಂದೆ ತಿರುವನಂತಪುರನ ಕಿಲಿಮನೋರ್‍ನ ಪುಲಿಮಥ್ ನಿವಾಸಿಯಾಗಿದ್ದರು.

ನಾಜಿಯಾ ತನ್ನ ಮಗಳು ಹಾಗೂ ತಂದೆ ಮೂವರು ಸೇರಿ ಲಲಿತ್‍ಪುರ್‍ ನಲ್ಲಿರುವ ಮತಾತಿಲ ಡ್ಯಾಂ ಬಳಿಯಿರುವ ಪಾರ್ಕಿಗೆ ಹೋಗಿದ್ದಾರೆ. ಈ ವೇಳೆ ಕೊಳದ ಬಳಿ ಆಟವಾಡುತ್ತಿದ್ದ ಮಗು, ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ತಂದೆ- ಮಗಳು ಇಬ್ಬರು ಕಾಲುವೆಗೆ ಹಾರಿದ್ದಾರೆ. ಆದರೆ ಕಾಲುವೆಯಲ್ಲಿ ಬಿದ್ದ ಮಗುವನ್ನು ಅಲ್ಲೇ ಹತ್ತಿರದಲ್ಲಿ ಇದ್ದ ಸ್ಥಳೀಯರು ಬಂದು ರಕ್ಷಿಸಿದ್ದಾರೆ. ಇನ್ನು ತಂದೆ-ಮಗಳನ್ನು ರಕ್ಷಿಸುವಷ್ಟರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. 

ಮುಳುಗು ತಜ್ಞರ ಸಹಾಯದಿಂದ ತಂದೆ - ಮಗಳ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ. ಇಬ್ಬರ ಮೃತದೇಹವನ್ನು ಉತ್ತರ ಪ್ರದೇಶದಿಂದ ಕೇರಳದ ಪುಲಿಮತ್‍ಗೆ ತಂದು ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.