ಬ್ರೇಕಿಂಗ್ ನ್ಯೂಸ್
24-08-25 01:47 pm HK News Desk ದೇಶ - ವಿದೇಶ
ವಾಷಿಂಗ್ಟನ್, ಆ.24: ಅಮೆರಿಕಕ್ಕೆ ಹೋಗಲಿಚ್ಛಿಸುವ ಅಥವಾ ಅದಾಗಲೇ ನೆಲೆಸಿರುವ ವಲಸಿಗರ ಪಾಲಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರವಲಸೆ ನೀತಿಗಳು ದುಃಸ್ವಪ್ನವಾಗಿ ಪರಿಣಮಿಸಿವೆ. ಇದಕ್ಕೆ ಸಾಕ್ಷಿಯೆಂಬಂತೆ, ಈ ವರ್ಷದ ಜನವರಿಯಿಂದ ಜೂನ್ ನಡುವೆ ಅಮೆರಿಕದಲ್ಲಿರುವ ವಲಸಿಗರ ಸಂಖ್ಯೆಯಲ್ಲಿ 15 ಲಕ್ಷ ಇಳಿಕೆಯಾಗಿದೆ. ಹೀಗಾಗಿರುವುದು 1960ರ ಬಳಿಕ ಇದೇ ಮೊದಲು.
ಪ್ಯೂ ಸಂಶೋಧನಾಸಂಸ್ಥೆಯವರ ವರದಿ ಪ್ರಕಾರ, ಕಳೆದ ವರ್ಷ 5.3 ಕೋಟಿ ಇದ್ದ ವಲಸಿಗರ ಸಂಖ್ಯೆ 5.1 ಕೋಟಿಗೆ ಕ್ಷೀಣಿಸಿದೆ. ಇದರ ಪರಿಣಾಮ ದುಡಿಯುವ ವರ್ಗದ ಮೇಲೂ ಆಗಿದ್ದು, 750000 ಕಾರ್ಮಿಕರು ಕಡಿಮೆಯಾಗಿದ್ದಾರೆ. ಇಲ್ಲಿ ಅಮೆರಿಕನ್ನರು ಅತಿ ಕಡಿಮೆಯಿದ್ದು, ವಲಸಿಗರ ಮೇಲೆ ಅವಲಂಬಿತವಾಗಿದೆ ಎಂಬುದು ಗಮನಾರ್ಹ.
ಅಚ್ಚರಿಯೆಂದರೆ, ಅಕ್ರಮ ವಲಸಿಗರ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ. ಅಂಥವರ ಸಾಮೂಹಿಕ ಗಡೀಪಾರು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಇವೆಲ್ಲದರ ಹೊರತಾಗಿಯೂ, ಅತಿ ಹೆಚ್ಚು ವಲಸಿಗರಿರುವ ದೇಶಗಳ ಪೈಕಿ ಅಮೆರಿಕ ಅಗ್ರಸ್ಥಾನದಲ್ಲಿದೆ. ಜೂನ್ನಲ್ಲಿ ವಲಸಿಗರು ಶೇ.15.4 ರಷ್ಟು, ಜನವರಿಯಲ್ಲಿ ಶೇ.15.8ರಷ್ಟಿದ್ದರು.
ಟ್ರಂಪ್ ಮೂಹಿಕ ಗಡೀಪಾರು, ವಲಸಿಗರ ಮೇಲೆ ಕಠಿಣ ನಿರ್ಬಂಧಗಳಂತಹ ಕ್ರಮ ಕೈಗೊಳ್ಳುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. 2024ರಲ್ಲಿ ಜೋ ಬೈಡೆನ್ ಅವಧಿಯಲ್ಲೇ ಕ್ರಮಗಳನ್ನು ಕೈಗೊಳ್ಳಲಾಗಿತ್ತಾದರೂ ಟ್ರಂಪ್ ಬಂದಮೇಲೆ ಅದು ಅತಿರೇಕಕ್ಕೆ ಹೋಗುತ್ತಿದೆ.
For those aspiring to move to the United States — or already residing there — former President Donald Trump’s stringent immigration policies have become nothing short of a nightmare. According to recent data, the number of immigrants in the U.S. dropped by 1.5 million between January and June this year — marking the first such decline since the 1960s.
11-12-25 12:44 pm
HK News Desk
ಬೆಂಗಳೂರು ದೇವನಹಳ್ಳಿ ಬಳಿ ಭೀಕರ ಅಪಘಾತ ; ಡಿವೈಡರ್ ಹ...
11-12-25 12:14 pm
Transport Minister Ramalinga Reddy: ಆರ್ಟಿಒ...
10-12-25 09:40 pm
ಬೆಂಗಳೂರಿನಲ್ಲಿ ರಸ್ತೆ ಅಪಘಾತ ; ಆರು ತಿಂಗಳ ಹಿಂದಷ್ಟ...
10-12-25 05:37 pm
ಅಧಿಕಾರ ಹಂಚಿಕೆ ಬಗ್ಗೆ ಗೊಂದಲ ; ಯಾರೂ ಆ ಬಗ್ಗೆ ಮಾತನ...
10-12-25 12:58 pm
11-12-25 02:09 pm
HK News Desk
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
10-12-25 11:04 pm
Mangalore Correspondent
ಮಂಗಳೂರಿನಲ್ಲಿ ಆರು ತಿಂಗಳಿನಿಂದ ಡ್ರಗ್ಸ್ ಬೇಟೆ ; ಕಾ...
10-12-25 10:51 pm
Bharath Kumdel, Instagram, Target Group: ಭರತ್...
10-12-25 08:45 pm
“Board Exams Made Easier: AI Shikshak Breaks...
10-12-25 06:01 pm
Mangalore Accident, Gowjee Events owner Death...
10-12-25 04:00 pm
10-12-25 10:14 pm
Udupi Correspondent
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm