ಬ್ರೇಕಿಂಗ್ ನ್ಯೂಸ್
31-08-25 12:00 pm HK News Desk ದೇಶ - ವಿದೇಶ
ವಾಷಿಂಗ್ಟನ್, ಆ.31: ಜಾಗತಿಕ ಮಟ್ಟದಲ್ಲಿ ಉದ್ಯಮ ವಲಯವನ್ನು ತಲ್ಲಣಗೊಳಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿಸುಂಕ ಕ್ರಮಗಳು ಕಾನೂನುಬಾಹಿರ ಎಂದು ಅಮೆರಿಕದ ಫೆಡರಲ್ ಮೇಲ್ಮನವಿ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಆದರೆ ಡೊನಾಲ್ಡ್ ಟ್ರಂಪ್ ಸರ್ಕಾರ ತನ್ನ ಸುಂಕ ನೀತಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಹಾಗಿದ್ದರೂ ಸುಂಕ ನೀತಿಗಳನ್ನು ಅಕ್ಟೋಬರ್ ಮಧ್ಯಭಾಗದ ವರೆಗೂ ಯಥಾಸ್ಥಿತಿ ಇರಿಸುವಂತೆ ಹೇಳಿರುವ ನ್ಯಾಯಾಲಯ ಮೇಲ್ಮನವಿ ಸಲ್ಲಿಸಲು ಟ್ರಂಪ್ ಸರಕಾರಕ್ಕೆ ಅವಕಾಶ ನೀಡಿದೆ. ಆದರೆ ಕೋರ್ಟ್ ಆದೇಶಕ್ಕೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದು, ಫೆಡರಲ್ ಮೇಲ್ಮನವಿ ನ್ಯಾಯಾಲಯ ತಪ್ಪಾಗಿ ತೀರ್ಪು ನೀಡಿದೆ ಎಂದು ಜರೆದಿದ್ದಾರೆ. ಜಾಗತಿಕ ವಲಯದಲ್ಲಿ ವಿರೋಧ ಎದುರಾಗಿರುವಾಗಲೇ ಫೆಡರಲ್ ಕೋರ್ಟ್ ನೀಡಿರುವ ತೀರ್ಪು ಅಮೆರಿಕ ಅಧ್ಯಕ್ಷರ ಆರ್ಥಿಕ ನೀತಿಗಳಿಗೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ.
ಜಗತ್ತಿನ ವಿವಿಧ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವ ವಿಚಾರದಲ್ಲಿ ಅಧ್ಯಕ್ಷರು ತುರ್ತು ಆರ್ಥಿಕ ಅಧಿಕಾರದ ವ್ಯಾಪ್ತಿಯನ್ನು ಮೀರಿದ್ದಾರೆ. ಸುಂಕ ಕ್ರಮ ಜಾರಿಗೊಳಿಸಲು ವಿದೇಶಗಳ ಮೇಲೆ ವ್ಯಾಪಾರ ಮಾತುಕತೆಯ ಅಸ್ತ್ರ ಬಳಸಿಕೊಂಡಿದ್ದಾರೆ ಎಂದು ಹೇಳಿರುವ ಮೇಲ್ಮನವಿ ನ್ಯಾಯಾಲಯ, ಅಧೀನ ನ್ಯಾಯಾಲಯಗಳ ತೀರ್ಪನ್ನು ಎತ್ತಿ ಹಿಡಿದಿದೆ. ಇದೇ ವೇಳೆ, ಟ್ರಂಪ್ ಎಕ್ಸ್ ನಲ್ಲಿ ತನ್ನ ಸರ್ಕಾರದ ನೀತಿಯನ್ನು ಸಮರ್ಥಿಸಿದ್ದು ಸುಂಕ ವಿಚಾರದಲ್ಲಿ ಮೇಲ್ಮನವಿ ನ್ಯಾಯಾಲಯ ತಪ್ಪಾಗಿ ತೀರ್ಪು ನೀಡಿದೆ. ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತೇವೆ. ಕೊನೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವೇ ಗೆಲ್ಲುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ. ಸದ್ಯ ಜಾರಿಯಲ್ಲಿರುವ ಸುಂಕಗಳು ರದ್ದಾದರೆ ದೇಶಕ್ಕೆ ದೊಡ್ಡ ವಿಪತ್ತು ಎದುರಾಗಲಿದೆ. ದೇಶದ ಆರ್ಥಿಕತೆ ದುರ್ಬಲಗೊಳ್ಳಲಿದೆ ಎಂದು ಟ್ರಂಪ್ ಬರೆದಿದ್ದಾರೆ.
ಉಕ್ರೇನ್ ಯುದ್ಧಕ್ಕೆ ಭಾರತ ಕಾರಣವಲ್ಲ..!
ಉಕ್ರೇನ್ ಯುದ್ಧಕ್ಕೆ ಭಾರತ ಕಾರಣವೆಂಬ ಅಮೆರಿಕ ಅಧಿಕಾರಿಗಳ ಮಾತಿಗೆ ಅಮೆರಿಕನ್ ಯಹೂದಿ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. "ರಷ್ಯಾದ ತೈಲ ಖರೀದಿಸಿದ ಮಾತ್ರಕ್ಕೆ ಉಕ್ರೇನ್ -ರಷ್ಯಾ ಸಂಘರ್ಷಕ್ಕೆ ಭಾರತ ಕಾರಣ ಎಂಬಂತೆ ಬಿಂಬಿಸುವುದು ಅಮೆರಿಕ ಸಂಬಂಧದ ದೃಷ್ಟಿಯಿಂದ ಒಳ್ಳೆಯದಲ್ಲ, ಭಾರತದ ವಿರುದ್ಧದ ಅನಗತ್ಯ ಹೇಳಿಕೆಗಳು ಭವಿಷ್ಯದಲ್ಲಿ ತೊಂದರೆಗೀಡು ಮಾಡಲಿವೆ ಎಂದು ಹೇಳಿದೆ. ''ದೇಶದ ಇಂಧನ ಆಗತ್ಯತೆ ಪೂರೈಸಲು ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿದೆ. ಹಾಗೆಂದ ಮಾತ್ರಕ್ಕೆ ಪುಟಿನ್ ನಡೆಸುತ್ತಿರುವ ಯುದ್ಧಾಪರಾಧಕ್ಕೆ ಭಾರತ ಕಾರಣವಾಗುವುದಿಲ್ಲ ಎಂದು ಯಹೂದಿಗಳ ಸಂಘ ಪ್ರತಿಪಾದಿಸಿದೆ.
ಟಾಯ್ಲೆಟ್ ನಲ್ಲಿ ಅಮೆರಿಕ ಬ್ರ್ಯಾಂಡ್ !
ಇದೇ ವೇಳೆ, ಅಮೆರಿಕದ ಸುಂಕ ನೀತಿಗಳನ್ನು ಬಲವಾಗಿ ಖಂಡಿಸಿರುವ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಚೇಕ್ ಸುಲ್ಲಿವಾನ್, ''ಭಾರತದ ಮೇಲಿನ ಪ್ರತಿಸುಂಕ ಕ್ರಮಗಳು ಅಮೆರಿಕದ ಜಾಗತಿಕ ಪ್ರತಿಷ್ಠೆ ಹಾಳು ಮಾಡುವ ಜತೆಗೆ ಹೊಸದಿಲ್ಲಿಯನ್ನು ಬೀಜಿಂಗ್ ಸನಿಹಕ್ಕೆ ಕೊಂಡೊಯ್ಯಲಿದೆ ಎಂದಿದ್ದಾರೆ. "ಟ್ರಂಪ್ ಸುಂಕ ನೀತಿಗಳಿಂದ ಜಾಗತಿಕ ಮಟ್ಟದಲ್ಲಿ ಅಮೆರಿಕ ಬ್ರ್ಯಾಂಡ್ ಟಾಯ್ಲೆಟ್ ಸೇರಿದೆ. ಅಮೆರಿಕದ ರಕ್ಷಣಾ ಗೋಡೆಯಂತಿದ್ದ ಭಾರತವನ್ನು ಚೀನಾದತ್ತ ವಾಲುವಂತೆ ಮಾಡಿದೆ ಎಂದಿದ್ದಾರೆ.
In a significant ruling, a U.S. federal appeals court has declared former President Donald Trump’s retaliatory tariff measures illegal, dealing a major blow to his economic policies. The court observed that Trump exceeded his emergency economic authority by imposing tariffs on multiple countries and using them as leverage in trade negotiations.
08-12-25 10:39 pm
Bangalore Correspondent
DK Shivakumar, Yathindras: ಡಿಸಿಎಂ ಡಿಕೆಶಿ ತಮಗೊ...
08-12-25 06:58 pm
ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ್ ಕೆಎಸ್ ಸಿಎ ನೂತನ...
08-12-25 11:26 am
Gangavati Accident, Koppal: ಪ್ರಿ ವೆಡ್ಡಿಂಗ್ ಶೂ...
07-12-25 10:21 pm
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
08-12-25 10:11 pm
Mangalore Correspondent
Mangalore, Puttur, Mahesh Shetty Timarodi: ಪ್...
08-12-25 04:52 pm
ಬಂಡವಾಳ ಇಲ್ಲದೆ ಆದಾಯದ ಅವಕಾಶ ; ಎಸ್ಸೆಸ್ಸೆಲ್ಸಿ, ಪಿ...
08-12-25 01:42 pm
ಮುಂದುವರಿದ ಇಂಡಿಗೋ ಬಿಕ್ಕಟ್ಟು ; ಮಂಗಳೂರಿನಲ್ಲಿ ಡಿ....
08-12-25 11:23 am
ಉಡುಪಿ ಶ್ರೀಕೃಷ್ಣ ಮಠಕ್ಕೆ ಆಂಧ್ರಪ್ರದೇಶ ಡಿಸಿಎಂ ಪವನ...
07-12-25 10:45 pm
08-12-25 09:29 pm
Mangalore Correspondent
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm