Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ; ಮನೆ ಪೂರ್ತಿ ಧ್ವಂಸ, ಒಬ್ಬ ವ್ಯಕ್ತಿ ಛಿದ್ರ, ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟ ಶಂಕೆ 

31-08-25 01:04 pm       HK News Desk   ದೇಶ - ವಿದೇಶ

ಕಣ್ಣೂರು ಜಿಲ್ಲೆಯ ಕಣ್ಣಾಪುರಂ ಎಂಬಲ್ಲಿನ ಮನೆಯೊಂದರಲ್ಲಿ ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಭಾರೀ ಸ್ಫೋಟ ಸಂಭವಿಸಿದ್ದು, ವ್ಯಕ್ತಿಯೊಬ್ಬ ಛಿದ್ರ ಛಿದ್ರಗೊಂಡಿದ್ದಾನೆ. ಇನ್ನೊಬ್ಬ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾನೆ. ಕಣ್ಣೂರು ನಗರದ ಚಾಲಾಡ್ ನಿವಾಸಿ ಮುಹಮ್ಮದ್ ಆಶಮ್ ಮೃತಪಟ್ಟವರೆಂದು ಗುರುತು ಪತ್ತೆ ಮಾಡಲಾಗಿದೆ. 

ಕಾಸರಗೋಡು, ಆ.31 : ಕಣ್ಣೂರು ಜಿಲ್ಲೆಯ ಕಣ್ಣಾಪುರಂ ಎಂಬಲ್ಲಿನ ಮನೆಯೊಂದರಲ್ಲಿ ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಭಾರೀ ಸ್ಫೋಟ ಸಂಭವಿಸಿದ್ದು, ವ್ಯಕ್ತಿಯೊಬ್ಬ ಛಿದ್ರ ಛಿದ್ರಗೊಂಡಿದ್ದಾನೆ. ಇನ್ನೊಬ್ಬ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾನೆ. ಕಣ್ಣೂರು ನಗರದ ಚಾಲಾಡ್ ನಿವಾಸಿ ಮುಹಮ್ಮದ್ ಆಶಮ್ ಮೃತಪಟ್ಟವರೆಂದು ಗುರುತು ಪತ್ತೆ ಮಾಡಲಾಗಿದೆ. 

ಘಟನೆಯಲ್ಲಿ ಮನೆ ಸಂಪೂರ್ಣ ಧ್ವಂಸಗೊಂಡಿದ್ದು, ಮೃತಪಟ್ಟ ವ್ಯಕ್ತಿಯ ದೇಹ ಛಿದ್ರಗೊಂಡಿದೆ. ಮೂವರು ವ್ಯಕ್ತಿಗಳು ಬಾಡಿಗೆ ಪಡೆದಿದ್ದ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯೊಳಗೆ ಬಾಂಬ್ ನಿರ್ಮಾಣ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧಿಸಿ ಅನು ಮಲಿಕ್ ಎಂಬಾತನನ್ನು ಕಾಞಂಗಾಡ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

Major explosion levels house in Kannur; Police suspect accident during  illegal explosives making

One dead in massive blast at rented house in Kannur; Crime branch takes  over the probe

Kannur Blast | കണ്ണപുരം കീഴറയിലെ സ്‌ഫോടനം; വീട് വാടകയ്ക്ക് എടുത്ത അനൂപ്  മാലിക് ഒളിവില്‍ ; പൊടിക്കുണ്ട് സ്ഫോടന കേസിലെ മുഖ്യപ്രതി - Jaihind TV

Kannur Bomb Blast | कन्नूरमध्ये बॉम्ब बनवताना भीषण स्फोट; एकाचा मृत्यू

Kannur Blast Updates: കണ്ണൂരിൽ വാടക വീട്ടിൽ വൻ സ്ഫോടനം; ഒരാൾ മരിച്ചു -  Kannur Kannapuram Blast in Rented house one Death police case registered  hfq - Malayalam News

ಸ್ಫೋಟ ನಡೆದ ಮನೆಯನ್ನು ಅನು ಮಲಿಕ್ ಬಾಡಿಗೆಗೆ ಪಡೆದಿದ್ದು, ಮೃತ ವ್ಯಕ್ತಿ ಈತನ ಸಂಬಂಧಿ. ಇವರು ಪೆರಿಯಾರಂನಲ್ಲಿ ಬಿಡಿ ಭಾಗಗಳ ಅಂಗಡಿ ಹೊಂದಿದ್ದು ವ್ಯಾಪಾರ ಮಾಡುತ್ತಿದ್ದರು ಎಂದು ಮನೆಯ ಮಾಲೀಕ ಗೋವಿಂದನ್ ತಿಳಿಸಿದ್ದಾರೆ. ಆಸುಪಾಸಿನ ಮನೆ, ಕಟ್ಟಡಗಳಲ್ಲಿಯೂ ಬಿರುಕು ಉಂಟಾಗಿದ್ದು ಆ ಮನೆ ಪೂರ್ತಿಯಾಗಿ ನೆಲಸಮಗೊಂಡಿದೆ. ಸ್ಥಳದಲ್ಲಿ ಪಟಾಕಿ ದಾಸ್ತಾನು ಮಾದರಿಯ ವಸ್ತುಗಳೂ ಪತ್ತೆಯಾಗಿವೆ. ಬಾಂಬ್ ತಯಾರಿ ನಡೆಸುತ್ತಿದ್ದಾಗ ಸ್ಫೋಟಗೊಂಡಿರುವ ಶಂಕೆಯೂ ವ್ಯಕ್ತವಾಗಿದೆ. 

ಅನು ಮಲಿಕ್ ಈ ಹಿಂದೆಯೂ ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾನೆ. 2016ರಲ್ಲಿ ಕಣ್ಣೂರಿನ ಪೋಡಿಕುಂಡು ಎಂಬಲ್ಲಿ ಅನು ಮಲಿಕ್ ವಾಸವಿದ್ದ ಎರಡು ಅಂತಸ್ತಿನ ಮನೆಯೊಂದರಲ್ಲಿ ಸ್ಫೋಟ ನಡೆದಿತ್ತು. ಪರಿಸರದ 15 ಮನೆಗಳಿಗೂ ಹಾನಿಯಾಗಿತ್ತು. ಘಟನೆಯಲ್ಲಿ ಮಲಿಕ್ ಪತ್ನಿ, ಮಗು ಸೇರಿ ಹತ್ತು ಮಂದಿ ಗಾಯಗೊಂಡಿದ್ದರು. ಮಲಿಕ್ ಸ್ಥಳೀಯವಾಗಿ ದೇವಸ್ಥಾನಗಳಿಗೆ ಪಟಾಕಿ ದಾಸ್ತಾನುಗಳ ಪೂರೈಕೆ ಮಾಡುತ್ತಿದ್ದರು ಎನ್ನುವ ಮಾಹಿತಿಯೂ ಇದ್ದು ಶುಕ್ರವಾರ ರಾತ್ರಿ ತಡವಾಗಿ ಮನೆಗೆ ಬಂದಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ.

A powerful explosion rocked a house in Kannapuram, Kannur district, around 2 a.m. on Saturday, leaving one man dismembered and another critically injured. The deceased has been identified as Muhammad Asham of Chalad, Kannur, while the injured has been hospitalized.