ಬ್ರೇಕಿಂಗ್ ನ್ಯೂಸ್
30-08-25 11:08 pm Mangalore Correspondent ಕರಾವಳಿ
ಮಂಗಳೂರು, ಆ.30 : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಆರೋಪ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಆರೋಪಿ ಚಿನ್ನಯ್ಯನನ್ನು ಬೆಳ್ತಂಗಡಿಯಿಂದ ಬೆಂಗಳೂರಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಚಿನ್ನಯ್ಯ ಹೇಳಿಕೆಯಲ್ಲಿ ತಿಳಿಸಿರುವಂತೆ, ಸೌಜನ್ಯಾ ಪರ ಹೋರಾಟಗಾರ ಜಯನ್ ಅವರ ಬೆಂಗಳೂರಿನ ಮನೆಗೆ ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ವಿಚಾರಣೆ ವೇಳೆ ಚಿನ್ನಯ್ಯ ಜಯಂತ್ ಹೆಸರು ಬಾಯ್ಬಿಟ್ಟಿದ್ದು ಇದರಂತೆ ಬೆಂಗಳೂರಿನ ಮಲ್ಲಸಂದ್ರದಲ್ಲಿರುವ ಮನೆಗೆ ಎಸ್‌ಐಟಿ ಅಧಿಕಾರಿಗಳು ಶನಿವಾರ ತೆರಳಿದ್ದಾರೆ. ಮಲ್ಲಸಂದ್ರದಲ್ಲಿರುವ ಜಯಂತ್ ಅವರ ಬಾಡಿಗೆ ಮನೆಯಲ್ಲಿ ಮಹಜರು ನಡೆಸಿದ್ದಾರೆ. ಜಯಂತ್ ಬಾಡಿಗೆ ಮನೆಯಲ್ಲಿ ಚಿನ್ನಯ್ಯ ಏಪ್ರಿಲ್ ತಿಂಗಳಲ್ಲಿ ಕೆಲವು ದಿನಗಳ ಕಾಲ ಉಳಿದುಕೊಂಡಿದ್ದ ಎನ್ನಲಾಗ್ತಿದೆ.
ಇದೇ ವೇಳೆ, ಖಾಸಗಿ ವಾಹಿನಿಗೆ ಮಾಹಿತಿ ಹಂಚಿಕೊಂಡಿರುವ ಜಯಂತ್, ಬೆಂಗಳೂರಿನಲ್ಲಿ ಮಗ ಮತ್ತು ಮಗಳು ಇದ್ದಾರೆ. ಚಿನ್ನಯ್ಯನ ಜೊತೆಗೆ ಬೆಂಗಳೂರು ತೆರಳಿದ್ದಾಗ ಎರಡು ದಿನ ನಮ್ಮ ಜೊತೆಗೆ ಇದ್ದ. ನಮ್ಮ ಮನೆಯಲ್ಲೇ ಉಳಿಯುವಂತೆ ಹೇಳಿದ್ದೆವು. ಆನಂತರ, ದೆಹಲಿಗೂ ಹೋಗಿದ್ದೆವು. ಮಟ್ಟೆಣ್ಣನವರ್, ಸುಜಾತಾ, ನಾನು ಮತ್ತು ಚಿನ್ನಯ್ಯ ಸೇರಿ ದೆಹಲಿಗೆ ಹೋಗಿದ್ದೆವು. ದೆಹಲಿಯಲ್ಲಿ ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಲು ಹೋಗಿದ್ದೆವು. ಆದರೆ ಅದು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.
ನಾವು ದೆಹಲಿಗೆ ಹೋಗಿದ್ದು ನಿಜ. ಬೆಂಗಳೂರಿನಲ್ಲಿ ಉಳಿದುಕೊಂಡಿದ್ದೂ ನಿಜ. ಆ ವೇಳೆಗೆ, ವಿಷಯ ಇಷ್ಟು ದೊಡ್ಡದು ಆಗುತ್ತೆ ಅಂತ ಗೊತ್ತಿರಲಿಲ್ಲ. ಆದರೆ ಚಿನ್ನಯ್ಯನೇ ತಲೆಬುರುಡೆ ತಂದಿರೋದು. ಆತ ಹೆಣ ಹೂತು ಹಾಕಿದ್ದು ಸತ್ಯ. ಈಗ ಮಾತ್ರ ಆತ ನಡೆದುಕೊಳ್ಳುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ಈಗ ತಲೆಬುರುಡೆ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾನೆ. ಮೊನ್ನೆ ತಿಮರೋಡಿ ತೋಟದಲ್ಲಿ ಇತ್ತೆಂದು ಹೇಳಿದ್ದ. ಲ್ಯಾಬ್ ನಲ್ಲಿ ತಂದಿದ್ದರೆ ಎಲ್ಲಿಂದ ಅಂತ ಹೇಳಲಿ ಮತ್ತು ಆ ಲ್ಯಾಬ್ ನವರನ್ನು ತನಿಖೆ ಮಾಡಲಿ. ನಾವು ಬೆಂಗಳೂರಿನಲ್ಲಿ ಒಟ್ಟಿಗೆ ಉಳಿದಿದ್ದು ಅಪರಾಧ ಅಂತಾದರೆ ಅದಕ್ಕೆ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಜಯನ್ ಹೇಳಿದ್ದಾರೆ.
In a fresh development in the Dharmasthala human remains burial case, SIT officials probing the allegations reportedly took key accused Chinnayya from Beltangady to Bengaluru for a spot inspection. As per Chinnayya's statement, the SIT team visited the residence of activist Jayan in Malleshwaram, Bengaluru, to verify certain details.
31-03-26 10:13 am
HK News Staffer
ತಮಿಳುನಾಡಿನಲ್ಲಿ ಬಿಜೆಪಿ ಸೀಟು ಹಂಚಿಕೆಯಲ್ಲಿ ಲೋಪ ;...
29-03-26 10:19 am
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
31-03-26 11:00 pm
HK News Staffer
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
ಗಲ್ಫ್ ಯುದ್ಧ ಎಫೆಕ್ಟ್ ; ಡಾಲರ್ ಮುಂದೆ ರುಪಾಯಿ ಮಹಾಪ...
30-03-26 10:31 pm
ಹರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಬೂತ್ ; ಶುಲ್ಕ ಕ...
28-03-26 04:06 pm
31-03-26 10:06 pm
HK News Desk
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಿಂದ ಹೊರಬಿದ್...
31-03-26 03:01 pm
ಮಂಗಳೂರು ಬಂದರಿಗೆ ಬರಲಿದೆ ಮತ್ತೆರಡು ಎಲ್ಪಿಜಿ ಹೊತ್ತ...
30-03-26 11:13 pm
31-03-26 11:11 am
HK News Staffer
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm
ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸ...
29-03-26 10:22 pm
ಅರ್ಕುಳ ಬಳಿ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಗೆ ಹಿ...
29-03-26 07:49 pm