ಬ್ರೇಕಿಂಗ್ ನ್ಯೂಸ್
30-09-25 04:03 pm HK News Desk ದೇಶ - ವಿದೇಶ
ಇಸ್ಲಮಾಬಾದ್, ಸೆ 30 : ಪಾಕಿಸ್ತಾನದ ಕ್ವೆಟ್ಟಾದಲ್ಲಿ ಮಂಗಳವಾರ ಮಧ್ಯಾಹ್ನ ಭಾರಿ ಬಾಂಬ್ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲೇ 10 ಮಂದಿ ಮೃತಪಟ್ಟಿದ್ದು, 32ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸಹಿತ ವಾಹನ ತರಲಾಗಿದ್ದು ಕಟ್ಟಡದ ಬಳಿ ಒಳರಸ್ತೆಗೆ ನುಗ್ಗುತ್ತಲೇ ಸ್ಫೋಟಿಸಲಾಗಿದೆ. ಬ್ಲಾಸ್ಟ್ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕ್ವೆಟ್ಟಾದ ಜರ್ಘುನ್ ರಸ್ತೆಯಲ್ಲಿರುವ ಎಫ್ಸಿ (ಫ್ರಂಟಿಯರ್ ಕಾರ್ಪ್ಸ್ - ಸೇನಾ ತುಕಡಿ) ಪ್ರಧಾನ ಕಚೇರಿಯ ಬಳಿಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಸ್ಪೋಟದ ಬಳಿಕ ಅದೇ ಪ್ರದೇಶದಲ್ಲಿ ಗುಂಡಿನ ದಾಳಿ ಸದ್ದು ಕೇಳಿಬಂದಿದೆ. ಸ್ಥಳಕ್ಕೆ ರಕ್ಷಣಾ ತಂಡ ಮತ್ತು ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.


ಸ್ಫೋಟಕ ತುಂಬಿದ ವಾಹನವು ಮಾಡೆಲ್ ಟೌನ್ನಿಂದ ಎಫ್ಸಿ ಪ್ರಧಾನ ಕಚೇರಿಯ ಬಳಿಯ ರಸ್ತೆಯ ಕಡೆಗೆ ತಿರುಗಿದಾಗಲೇ ಸ್ಫೋಟ ಸಂಭವಿಸಿದೆ. ಕ್ವೆಟ್ಟಾ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸ್ಫೋಟದ ಶಬ್ದವು ಎಷ್ಟು ಪ್ರಬಲವಾಗಿತ್ತೆಂದರೆ, ಅದು ಮೈಲುಗಳಷ್ಟು ದೂರದಲ್ಲಿ ಕೇಳಿಬಂತು, ಇದು ಪ್ರದೇಶವನ್ನು ಮಾತ್ರವಲ್ಲದೆ ಇಡೀ ನಗರವನ್ನು ಭಯಭೀತಗೊಳಿಸಿತು ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯಕ್ಕೆ ಸ್ಫೋಟದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಬಲೂಚಿಸ್ತಾನ್ ಬಂಡುಕೋರ ಗುಂಪು ಈ ದಾಳಿ ನಡೆಸಿರುವ ಸಾಧ್ಯತೆ ಇದೆ. ಬಲೂಚಿಸ್ತಾನ್ ಸ್ವತಂತ್ರ ಆಗಬೇಕೆಂದು ಈ ಭಾಗದಲ್ಲಿ ಬಲೂಚಿ ಲಿಬರೇಶನ್ ಆರ್ಮಿ ಪರ ಹೋರಾಟಗಾರರು ದಾಳಿ ನಡೆಸುತ್ತಿದ್ದಾರೆ.
A powerful suicide bombing rocked Quetta’s Zarghoon Road near the Frontier Corps headquarters on Tuesday afternoon, killing at least 10 people and injuring more than 32. CCTV footage of the blast has gone viral on social media. Police said an explosives-laden vehicle detonated as it turned toward the FC office, followed by gunfire in the area.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm