ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ್ತಿಯ ಹತ್ಯೆ ; ವೆಬ್ ಸಿರೀಸ್ ಆಡಿಷನ್ ಕರೆಸಿ ಸ್ಟುಡಿಯೋದಲ್ಲೇ ಕೂಡಿಹಾಕಿದ್ದ ಕಿರಾತಕ ! 

31-10-25 12:55 pm       HK News Desk   ಕ್ರೈಂ

ದೇಶದ ವಾಣಿಜ್ಯ ನಗರಿ ಮುಂಬೈನ ಪೊವಾಯಿ ಪಪ್ರದೇಶದಲ್ಲಿರುವ 'ಆರ್‌ಎ ಸ್ಪುಡಿಯೊ'ದಲ್ಲಿ ವ್ಯಕ್ತಿಯೊಬ್ಬ ಒತ್ತೆಯಾಗಿರಿಸಿದ್ದ 17 ಮಕ್ಕಳು ಹಾಗೂ ಇಬ್ಬರು ವಯಸ್ಕರನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಪಾರು ಮಾಡಿಸಿದ್ದಾರೆ. ಕ್ವಿಕ್ ರೆಸ್ಪಾನ್ಸ್ ಟೀಮ್ ಮತ್ತು ಇತರ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. 

ಮುಂಬೈ, ಅ.31 : ದೇಶದ ವಾಣಿಜ್ಯ ನಗರಿ ಮುಂಬೈನ ಪೊವಾಯಿ ಪಪ್ರದೇಶದಲ್ಲಿರುವ 'ಆರ್‌ಎ ಸ್ಪುಡಿಯೊ'ದಲ್ಲಿ ವ್ಯಕ್ತಿಯೊಬ್ಬ ಒತ್ತೆಯಾಗಿರಿಸಿದ್ದ 17 ಮಕ್ಕಳು ಹಾಗೂ ಇಬ್ಬರು ವಯಸ್ಕರನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಪಾರು ಮಾಡಿಸಿದ್ದಾರೆ. ಕ್ವಿಕ್ ರೆಸ್ಪಾನ್ಸ್ ಟೀಮ್ ಮತ್ತು ಇತರ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. 

ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿ ರೋಹಿತ್ ಆರ್ಯ (50) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ರೋಹಿತ್ ಆರ್ಯ, ವೆಬ್ ಸಿರೀಸ್ ಗೆ ಆಡಿಷನ್ ನಡೆಸುವುದಾಗಿ ಹೇಳಿ ನಾಲ್ಕು ದಿನಗಳಲ್ಲಿ ಸುಮಾರು 100 ಮಕ್ಕಳನ್ನು ಸ್ಪುಡಿಯೋಗೆ ಕರೆಸಿಕೊಂಡಿದ್ದ. ಅದರಲ್ಲಿ 83 ಮಕ್ಕಳನ್ನು ಮನೆಗೆ ಕಳುಹಿಸಿ, ಉಳಿದ 17 ಮಕ್ಕಳು ಹಾಗೂ ಇತರ ಇಬ್ಬರು ವಯಸ್ಕರನ್ನು ಒತ್ತೆಯಾಗಿರಿಸಿಕೊಂಡಿದ್ದ. ಈತನ ವಶದಲ್ಲಿದ್ದ ಮಕ್ಕಳು 8 ರಿಂದ 15 ವರ್ಷದೊಳಗಿನವರಾಗಿದ್ದು ಅವರೆಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಿ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‌

ಕಾರ್ಯಾಚರಣೆ ನಡೆಸಿದ್ದು ಹೇಗೆ?

ಗುರುವಾರ ಮಧ್ಯಾಹ್ನ 1.45 ಗಂಟೆ ಸುಮಾರಿಗೆ ಪೊವೈ ಪೊಲೀಸ್ ಠಾಣೆಗೆ ಫೋನ್ ಕರೆ ಬಂದಿತ್ತು. ''ವ್ಯಕ್ತಿಯೊಬ್ಬ ಮಹಾವೀರ್ ಕ್ಲಾಸಿಕ್ ಬಿಲ್ಡಿಂಗ್ ನಲ್ಲಿರುವ ಆರ್‌ಎ ಸ್ಟುಡಿಯೊದಲ್ಲಿ ಮಕ್ಕಳನ್ನು ಒತ್ತೆಯಾಗಿಸಿದ್ದಾನೆ" ಎಂದು ಕರೆ ಮಾಡಿದ್ದ ವ್ಯಕ್ತಿ ನೀಡಿದ್ದ. ತಕ್ಷಣವೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 

ಪೊಲೀಸರು ಸಂಧಾನ ನಡೆಸಿದರೂ ಮಕ್ಕಳ ಬಿಡುಗಡೆಗೆ ರೋಹಿತ್ ಒಪ್ಪಲಿಲ್ಲ, ಆಗ ಪೊಲೀಸರು ಅಗ್ನಿಶಾಮಕ ದಳದ ಏಣಿ ಮೂಲಕ ಮೊದಲ ಮಹಡಿಯಲ್ಲಿದ್ದ ಸ್ಪುಡಿಯೋವನ್ನು ಬಾತ್ ರೂಮ್ ಮೂಲಕ ಪ್ರವೇಶಿಸಿದ್ದಾರೆ. ಈ ವೇಳೆ ರೋಹಿತ್ ಆರ್ಯ ತನ್ನ ಕೈಲಿದ್ದ ಗನ್ ಮೂಲಕ ಪೊಲೀಸರತ್ತ ಗುಂಡು ಹಾರಿಸಿದ್ದಾನೆ. ಪೊಲೀಸರು ಪ್ರತಿ ದಾಳಿ ನಡೆಸಿದಾಗ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬಳಿಕ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ.

A tense drama unfolded in Mumbai’s Powai area on Thursday when police rescued 17 children and two adults who had been held hostage inside the RA Studio by a man claiming to be a casting director for a web series. The suspect was shot by police during a rescue operation and later died in the hospital.