ಫರಿದಾಬಾದ್‌ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕೇಜಿ ಆರ್ ಡಿಎಕ್ಸ್, ಎಕೆ -47 ಗನ್ ವಶಕ್ಕೆ, ರಾಜಧಾನಿ ದೆಹಲಿ ಬಳಿಯಲ್ಲೇ ಭಾರೀ ಸ್ಫೋಟಕ ಪತ್ತೆ  

10-11-25 03:04 pm       HK News Desk   ದೇಶ - ವಿದೇಶ

ಬಂಧಿತ ಕಾಶ್ಮೀರಿ ವೈದ್ಯನೊಬ್ಬ ನೀಡಿದ ಮಾಹಿತಿ ಮೇರೆಗೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಫರೀದಾಬಾದ್‌ನಲ್ಲಿ 300 ಕಿಲೋ ಆರ್‌ಡಿಎಕ್ಸ್, ಒಂದು ಎಕೆ -47 ರೈಫಲ್ ಮತ್ತು ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ನವದೆಹಲಿ, ನ.10 : ಬಂಧಿತ ಕಾಶ್ಮೀರಿ ವೈದ್ಯನೊಬ್ಬ ನೀಡಿದ ಮಾಹಿತಿ ಮೇರೆಗೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಫರೀದಾಬಾದ್‌ನಲ್ಲಿ 300 ಕಿಲೋ ಆರ್‌ಡಿಎಕ್ಸ್, ಒಂದು ಎಕೆ -47 ರೈಫಲ್ ಮತ್ತು ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಭಯೋತ್ಪಾದಕರ ನಂಟು ಆರೋಪದಲ್ಲಿ ಬಂಧಿತನಾಗಿದ್ದ ಡಾ.ಆದಿಲ್ ಅಹ್ಮದ್ ರಾಥರ್ ನೀಡಿದ ಮಾಹಿತಿ ಆಧರಿಸಿ ಸ್ಫೋಟಕಗಳನ್ನು ವಶಪಡಿಸಲಾಗಿದೆ. ಪೊಲೀಸರು ಕಾಶ್ಮೀರ ಕಣಿವೆಯಲ್ಲಿ ವೈದ್ಯನಿಗೆ ಸೇರಿದ ಲಾಕರ್‌ನಿಂದ ಎಕೆ -47 ರೈಫಲ್ ಮತ್ತು ಇತರ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು. ಪೊಲೀಸರು ಆರೋಪಿಯನ್ನು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಸಾಗಣೆ ಆರೋಪದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. 

ಪುಲ್ವಾಮಾ ಜಿಲ್ಲೆಯ ನಿವಾಸಿ ಶಕೀಲ್ ಅಹ್ಮದ್ ಎಂಬವರ ಪುತ್ರ ಮುಜಾಮಿಲ್ ಶಕೀಲ್ ಎಂಬ ಮತ್ತೊಬ್ಬ ವೈದ್ಯನ ಪಾತ್ರವೂ ಇದೇ ವೇಳೆ ಬಹಿರಂಗಗೊಂಡಿದೆ. ಫರೀದಾಬಾದ್‌ನಲ್ಲಿ ವಶಪಡಿಸಿದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಡಾ. ಮುಜಾಮಿಲ್ ಸಹಾಯ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

ರಾಥರ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ. ವೈದ್ಯನೊಬ್ಬ ಬಂಧನ ಆಗಿರುವುದು ಭಯೋತ್ಪಾದನಾ ಜಾಲದಲ್ಲಿ ಉನ್ನತ ಶಿಕ್ಷಣ ಪಡೆದ ವೃತ್ತಿಪರರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ರಾಜಧಾನಿ ದೆಹಲಿ ಹತ್ತಿರದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕಗಳನ್ನ ಸಾಗಿಸಿದ್ದು ಹೇಗೆಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

Acting on information provided by a detained Kashmiri doctor, Jammu and Kashmir Police have seized 300 kilograms of RDX, an AK-47 rifle, and a large quantity of ammunition from Faridabad, near the national capital New Delhi.