ಬ್ರೇಕಿಂಗ್ ನ್ಯೂಸ್
05-01-21 05:38 pm Satish. N ದೇಶ - ವಿದೇಶ
ತಿರುವನಂತಪುರಂ, ಜ.5: ಕೇರಳದ ಕೊಟ್ಟಾಯಂ ಮತ್ತು ಆಲಪ್ಪುಳ ಜಿಲ್ಲೆಯಲ್ಲಿ ಹಕ್ಕಿಜ್ವರ ಕಂಡುಬಂದಿದ್ದು ಪಿಣರಾಯಿ ವಿಜಯನ್ ಸರಕಾರ ರಾಜ್ಯದಾದ್ಯಂತ ಹೈ ಅಲರ್ಟ್ ಘೋಷಿಸಿದೆ.
ಆಲಪ್ಪುಳ ಜಿಲ್ಲೆಯ ನೆಡುಮುಡಿ, ತೇಕ್ಕಡಿ, ಪಲ್ಲಿಪಾಡ್, ಕರುವಟ್ಟ ಪಂಚಾಯತ್ ಏರಿಯಾಗಳಲ್ಲಿ ಹಕ್ಕಿಜ್ವರದ ಲಕ್ಷಣ ಕಂಡುಬಂದಿದ್ದರೆ, ಕೊಟ್ಟಾಯಂ ಜಿಲ್ಲೆಯ ನೀಂದೂರ್ ಪಂಚಾಯತಿನ ಬಾತುಕೋಳಿ ಫಾರ್ಮ್ ನಲ್ಲಿ ಹಕ್ಕಿ ಜ್ವರ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಸರಕಾರ ರಾಜ್ಯ ವಿಪತ್ತು ಎಂದು ಘೋಷಣೆ ಮಾಡಿದ್ದು ರಾಜ್ಯ ವ್ಯಾಪಿ ಕಟ್ಟೆಚ್ಚರಕ್ಕೆ ಸೂಚನೆ ನೀಡಿದೆ.
ಕೊಟ್ಟಾಯಂ ನೀಂದೂರಿನ ಫಾರ್ಮ್ ನಲ್ಲಿ ಸೋಮವಾರ ಒಂದೇ ದಿನ 1700 ಬಾತುಕೋಳಿಗಳು ಸತ್ತಿದ್ದವು. ಇದೇ ವೇಳೆ ಕುಟ್ಟನಾಡ್ ವಲಯದ 34 ಸಾವಿರ ಸೇರಿ ಒಟ್ಟು ಕೊಟ್ಟಾಯಂ ಜಿಲ್ಲೆಯಲ್ಲಿ 40 ಸಾವಿರ ಕೋಳಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ.
ಇದೇ ವೇಳೆ, ಆಲಪ್ಪುಳ ಜಿಲ್ಲೆಯ ಕುಟ್ಟನಾಡ್ ಮತ್ತು ಕಾರ್ತಿಕಪಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಕೋಳಿ, ಬಾತುಕೋಳಿ, ಮೊಟ್ಟೆ, ಮಾಂಸಗಳ ಸೇವನೆ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.
ಇದೇ ವೇಳೆ, ವಲಸೆ ಹಕ್ಕಿಗಳ ಬಗ್ಗೆ ನಿಗಾ ಇಡಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗ್ಲೇ ಉತ್ತರ ಭಾರತದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಹಕ್ಕಿಜ್ವರದ ಬಾಧೆ ಕಂಡುಬಂದಿದೆ. ಹಿಮಾಚಲ ಪ್ರದೇಶದ ಪೊಂಗ್ ಧಾಮ್ ಸರೋವರ ವ್ಯಾಪ್ತಿಯ ಪಕ್ಷಿಧಾಮದಲ್ಲಿ 1800ಕ್ಕೂ ಹೆಚ್ಚು ವಲಸೆ ಹಕ್ಕಿಗಳು ಸತ್ತು ಬಿದ್ದಿರುವುದು ಪತ್ತೆಯಾಗಿತ್ತು.
ಹಕ್ಕಿಜ್ವರ ಸಾಂಕ್ರಾಮಿಕ ರೋಗವಾಗಿದ್ದು ಒಂದರಿಂದ ಇನ್ನೊಂದಕ್ಕೆ ಸುಲಭದಲ್ಲಿ ಹರಡುತ್ತದೆ. ಹಕ್ಕಿಗಳನ್ನು ಬರಿಗೈಯಲ್ಲಿ ಮುಟ್ಟುವುದರಿಂದ ಮತ್ತು ಅದರ ಎಂಜಲು ದೇಹಕ್ಕೆ ಸೋಕಿದರೆ ಮಾನವನಿಗೂ ವೈರಸ್ ಹರಡುತ್ತದೆ. ನ್ಯುಮೋನಿಯಾ ಮಾದರಿಯ ಜ್ವರ, ಕೆಮ್ಮು ಕಂಡುಬರುತ್ತದೆ. ಜ್ವರಕ್ಕೆ ಸಕಾಲದಲ್ಲಿ ಔಷಧಿ ಸಿಗದೇ ಇದ್ದರೆ ಮಾನವನಿಗೂ ವೈರಸ್ ಬಾಧೆ ಮಾರಣಾಂತಿಕ ಆಗುತ್ತದೆ.
The Pinarayi Vijayan-led Kerala government said on Tuesday that bird flu has been declared as a state-specific disaster adding that a high alert has been issued after the virus was found in some parts of Kottayam and Alappuzha districts.
30-08-25 04:51 pm
Bangalore Correspondent
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
30-08-25 06:44 pm
HK News Desk
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
30-08-25 11:08 pm
Mangalore Correspondent
2002ರ ಉಳ್ಳಾಲದ ಚಾರಿತ್ರಿಕ ನಾಗಮಂಡಲದ ರೂವಾರಿ, ಧಾರ್...
30-08-25 11:01 pm
Mangalore, Ganesh Chaturthi, Catholic: ಸಂಘನಿಕ...
30-08-25 10:10 pm
ಕೊಲ್ಲೂರು ; ನದಿಯಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರಿನ...
30-08-25 09:16 pm
Talapady Accident, Mangalore, Ksrtc Bus: ತಲಪಾ...
30-08-25 04:23 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm