ಬ್ರೇಕಿಂಗ್ ನ್ಯೂಸ್
08-01-21 11:58 am Headline Karnataka News Network ದೇಶ - ವಿದೇಶ
ವಾಷಿಂಗ್ಟನ್, ಜ.8 : ಅಮೆರಿಕ ಕಾಂಗ್ರೆಸ್ ಕೊನೆಗೂ ಜೋ ಬೈಡೆನ್ ಅವರ ಗೆಲುವನ್ನು ಘೋಷಿಸಿದ್ದು ಡೊನಾಲ್ಡ್ ಟ್ರಂಪ್ ತಮ್ಮ ಸೋಲನ್ನು ಒಪ್ಪಿಕೊಳ್ಳುವುದರ ಜೊತೆಗೆ ಇದೇ ಜನವರಿ 20ರಂದು ಅಧಿಕಾರ ಹಸ್ತಾತರಿಸುವುದಾಗಿ ಹೇಳಿದ್ದಾರೆ.
ಜ.7ರಂದು ಅಮೆರಿಕದ ಸಂಸತ್ತು ಮತ್ತು ಎಲೆಕ್ಟೋರಲ್ ಕಾಲೇಜ್ ಫಲಿತಾಂಶವನ್ನು ಅಂಗೀಕರಿಸುವುದಾಗಿ ಹೇಳಿದ್ದು ಈ ಮೂಲಕ ಜೋ ಬೈಡೆನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ಅನುವು ಮಾಡಿಕೊಟ್ಟಿದೆ.

2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಘೋಷಣೆಯಾಗುತ್ತಲೇ ಅತ್ತ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕದ ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ್ದರು. ಘಟನೆಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು ಐತಿಹಾಸಿಕ ಎನ್ನುವ ರೀತಿ ಟೀಕೆ ಕೇಳಿಬಂದಿದೆ. ಟ್ರಂಪ್ ಬೆಂಬಲಿಗರು ಈ ರೀತಿಯ ಹಿಂಸಾಚಾರ ನಡೆಸಿದ್ದನ್ನು ಅಲ್ಲಿನ ಮಾಧ್ಯಮಗಳು ತೀವ್ರ ಟೀಕಿಸಿದ್ದವು. ಇದರ ಬೆನ್ನಲ್ಲೇ ತಾನು ಚುನಾವಣೆ ಫಲಿತಾಂಶವನ್ನು ಒಪ್ಪಿಕೊಂಡು ಕ್ರಮಬದ್ಧವಾಗಿ ಅಧಿಕಾರ ಹಸ್ತಾಂತರ ಮಾಡಲಿದ್ದೇನೆ ಎಂದು ಟ್ರಂಪ್ ಘೋಷಣೆ ಮಾಡಿದ್ದಾರೆ.
ನವೆಂಬರ್ ಮೊದಲ ವಾರದಲ್ಲಿ ಅಮೆರಿಕ ಸಂಸತ್ತಿಗೆ ಚುನಾವಣೆ ನಡೆದಿದ್ದು ತೀವ್ರ ಪೈಪೋಟಿ ಎದುರಾಗಿತ್ತು. ಕ್ಯಾಲಿಫೋರ್ನಿಯಾ, ಫ್ಲೋರಿಡಾ ರಾಜ್ಯಗಳಲ್ಲಿ ಹಣಾಹಣಿ ಏರ್ಪಟ್ಟ ಕಾರಣ ಡೊನಾಲ್ಡ್ ಟ್ರಂಪ್ ಕಾನೂನು ಹೋರಾಟಕ್ಕೆ ಇಳಿದಿದ್ದರು. ತನ್ನ ಅಧಿಕಾರ ಬಲದಿಂದ ಚುನಾವಣೆ ಫಲಿತಾಂಶ ನಿರ್ಬಂಧಿಸಿ ಮುಂದುವರಿಯಲು ಕಸರತ್ತು ನಡೆಸಿದ್ದರು. ಆದರೆ, ಫಲಿತಾಂಶ ತಡೆಹಿಡಿದು ನಡೆಸಿದ ಹೋರಾಟದಲ್ಲೂ ಟ್ರಂಪ್ ಪರವಾಗಿ ಜಯ ಲಭಿಸಲಿಲ್ಲ. ಹೀಗಾಗಿ ಇಲೆಕ್ಟೋರಲ್ ಕಾಲೇಜು ಕಡೆಗೂ ಫಲಿತಾಂಶ ಘೋಷಿಸಿತ್ತು. ಅದರಂತೆ, ಅಧಿಕಾರ ಹಸ್ತಾಂತರ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು. ಎಲ್ಲವೂ ಅಂದ್ಕೊಂಡ ರೀತಿಯಲ್ಲಿ ನಡೆದರೆ ಜ.20ರಿಂದ ಅಮೆರಿಕದ ದೊಡ್ಡಣ್ಣನಾಗಿ ಜೋ ಬಿಡೆನ್ ಅಧಿಕಾರದ ಗಾದಿ ಏರಲಿದ್ದಾರೆ.
President Donald Trump conceded on Thursday that Joe Biden will be the next US president, a day after his supporters stormed the US Capitol as Congress was certifying Biden's victory in a stunning assault on American democracy.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 02:39 pm
HK News Staffer
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm