ಕೊರೋನ ಎಫೆಕ್ಟ್ ; 55 ವರ್ಷಗಳಲ್ಲಿ ಮೊದಲ ಬಾರಿಗೆ ಗಣರಾಜ್ಯೋತ್ಸಕ್ಕೆ ಯಾವುದೇ ವಿದೇಶಿ ಅತಿಥಿ ಇಲ್ಲ..!

15-01-21 12:08 pm       Headline Karnataka News Network   ದೇಶ - ವಿದೇಶ

ಕೊರೋನ ವೈರಸ್ ನಿಂದ ಉಂಟಾಗಿರುವ ಪರಿಸ್ಥಿತಿಯಿಂದಾಗಿ ಈ ವರ್ಷದ ಗಣರಾಜ್ಯೋತ್ಸವದಿನದಂದು ವಿದೇಶಿ ನಾಯಕರು ಮುಖ್ಯ ಅತಿಥಿಯಾಗಿ  ಭಾಗವಹಿಸುತ್ತಿಲ್ಲ.

ಹೊಸದಿಲ್ಲಿ, ಜ.15 : ಜಾಗತಿಕ ಮಟ್ಟದಲ್ಲಿ ಕೊರೋನ ವೈರಸ್ ನಿಂದ ಉಂಟಾಗಿರುವ ಪರಿಸ್ಥಿತಿಯಿಂದಾಗಿ ಈ ವರ್ಷದ ಗಣರಾಜ್ಯೋತ್ಸವದಿನದಂದು ವಿದೇಶಿ ನಾಯಕರು ಮುಖ್ಯ ಅತಿಥಿಯಾಗಿ  ಭಾಗವಹಿಸುತ್ತಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಗುರುವಾರ ಪ್ರಕಟಿಸಿದೆ.

5 ದಶಕಗಳ ಬಳಿಕ ಮೊದಲ ಬಾರಿ ದೇಶದ ಗಣರಾಜ್ಯೋತ್ಸವ ಪರೇಡ್ ನಲ್ಲಿ ವಿದೇಶದ ಮುಖ್ಯ ಅತಿಥಿ ಭಾಗವಹಿಸುತ್ತಿಲ್ಲ.

ಜಾಗತಿಕ ಮಟ್ಟದಲ್ಲಿ ಕೋವಿಡ್-19 ಪರಿಸ್ಥಿತಿಯ ಕಾರಣಕ್ಕೆ  ಈ ವರ್ಷ ವಿದೇಶದ ರಾಜ್ಯದ ಮುಖ್ಯಸ್ಥರು ಅಥವಾ ಸರಕಾರದ ಮುಖ್ಯಸ್ಥರಿಗೆ ನಮ್ಮ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸದೆ ಇರಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಪತ್ರಿಕಾಗೋಷ್ಠಿಯಲ್ಲಿ ತಿಳಿಸದರು.

ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ತನ್ನ ಭೇಟಿಯನ್ನು ರದ್ದುಪಡಿಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಭಾರತವು ಜಾನ್ಸನ್ ರನ್ನು ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಆಹ್ವಾನ ನೀಡಿತ್ತು. ಭಾರತದ ಆಹ್ವಾವನ್ನು ಅವರು ಸ್ವೀಕರಿಸಿ ಇದೊಂದು ಮಹಾ ಗೌರವ ಎಂದಿದ್ದರು ಇಂಗ್ಲೆಂಡ್ ನಲ್ಲಿ ಮತ್ತೊಮ್ಮೆ ಕೊರೋನ ಆರ್ಭಟ ಜೋರಾದ ಕಾರಣ ಜಾನ್ಸನ್ ಭಾರತದ ಭೇಟಿಯನ್ನು ರದ್ದುಪಡಿಸಿದ್ದರು.

ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸಿದ ನಂತರ ಕೇಂದ್ರ ಸರ್ಕಾರವು ಈ ಮಾರ್ಗಗಳ ಬಗ್ಗೆ ಯೋಚಿಸುತ್ತಿದೆ ಎಂದು ವರದಿ ಮಾಡಿದೆ ಮತ್ತು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾರತಕ್ಕೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ರೂಪಾಂತರಿ ಕರೋನವೈರಸ್ ವ್ಯಾಪಕವಾಗಿ ಬ್ರಿಟನ್ ನಲ್ಲಿ ಹರಡಿರುವ ಹಿನ್ನಲೆಯಲ್ಲಿ ಅಲ್ಲಿ ಲಾಕ್ ಡೌನ್ ವಿಧಿಸಲಾಗಿದೆ.ಈ ಹಿನ್ನಲೆಯಲ್ಲಿ ಈಗ ಅವರು ಭಾರತಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ.

1966 ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಅಕಾಲಿಕ ನಿಧನದಿಂದಾಗಿ ಭಾರತವು ಯಾವುದೇ ರಾಷ್ಟ್ರ ಮುಖ್ಯಸ್ಥರಿಗೆ ಕೊನೆಯ ಬಾರಿಗೆ ಆಹ್ವಾನವನ್ನು ಕಳುಹಿಸಿರಲಿಲ್ಲ. ಇಂದಿರಾ ಗಾಂಧಿ ನೇತೃತ್ವದ ಹೊಸ ಸರ್ಕಾರವು ಗಣರಾಜ್ಯೋತ್ಸವದ ಮೆರವಣಿಗೆಗೆ ಕೇವಲ ಎರಡು ದಿನಗಳು ಮುಂದಿರುವಂತೆಯೇ  ಜನವರಿ 24, 1966 ರಂದು ಪ್ರಮಾಣವಚನ ಸ್ವೀಕರಿಸಿತು.

India will not invite any foreign dignitary to be the Chief Guest at the upcoming Republic Day celebrations, the Official Spokesperson of the Ministry of External Affairs said on Thursday.