ಕೊರೊನಾ ಮಹಾಮಾರಿ ವಿರುದ್ಧ ಸಂಜೀವಿನಿ ಲಸಿಕೆಗೆ ಮೋದಿ ಚಾಲನೆ

16-01-21 11:48 am       Headline Karnataka News Network   ದೇಶ - ವಿದೇಶ

ಐತಿಹಾಸಿಕ ಬೃಹತ್ ಕೊರೊನಾ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.

ನವದೆಹಲಿ, ಜನವರಿ 16: ಭಾರತದಾದ್ಯಂತ ಐತಿಹಾಸಿಕ ಬೃಹತ್ ಕೊರೊನಾ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.

ನೀಡಲಾಗುತ್ತಿದ್ದು, ಈ ಬೃಹತ್ ಲಸಿಕಾ ಕಾರ್ಯಕ್ರಮ ಎಲ್ಲಾ ರಾಜ್ಯಗಳಲ್ಲೂ ಆರಂಭವಾಗಿದೆ. ಈ ಐತಿಹಾಸಿಕ ಲಸಿಕಾ ಕಾರ್ಯಕ್ರಮದ ಕುರಿತು ಪ್ರಧಾನಿ ಮೋದಿ ಅವರು ಮಾತುಗಳನ್ನಾಡಿದ್ದಾರೆ.

ಲಸಿಕೆಗಳ ಸಂಶೋಧನೆ, ಅಭಿವೃದ್ಧಿಗೆ ದೇಶದ ವಿಜ್ಞಾನಿಗಳು ಹಾಗೂ ವೈದ್ಯರಿಗೆ ಧನ್ಯವಾದ ಸಲ್ಲಿಸಿದ ಅವರು, ದೇಶದಲ್ಲಿ ನೀಡುತ್ತಿರುವ ಈ ಎರಡು ಕೊರೊನಾ ಲಸಿಕೆಗಳು ಬಹಳ ಮುಖ್ಯವೆಂದು ನಾನು ಜನರಿಗೆ ಹೇಳುತ್ತೇನೆ. ಎಲ್ಲರೂ ಈ ಅಭಿಯಾನಕ್ಕೆ ಸಹಕರಿಸಬೇಕು ಎಂದು ಕೋರಿದರು.

"ಎಂದಿಗೂ ಎಚ್ಚರ ತಪ್ಪಬೇಡಿ":

ಲಸಿಕೆ ಆರಂಭವಾಗಿದೆ ಎಂದು ಮಾಸ್ಕ್‌ಗಳನ್ನು ತೆಗೆಯುವುದು ಮತ್ತು ಮೊದಲ ಡೋಸ್ ಪಡೆದ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ತಪ್ಪನ್ನು ಮಾಡಬೇಡಿ ಎಂದು ವಿನಂತಿಸುತ್ತೇನೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕಾ ಪ್ರಕ್ರಿಯೆಯನ್ನು ಇತಿಹಾಸದಲ್ಲಿ ಎಂದಿಗೂ ನಡೆಸಲಾಗಲಿಲ್ಲ. ಭಾರತ ಮೊದಲ ಹಂತದಲ್ಲಿಯೇ 3 ಕೋಟಿ ಜನರಿಗೆ ಲಸಿಕೆ ನೀಡುತ್ತಿದೆ. ಎರಡನೇ ಹಂತದಲ್ಲಿ, ನಾವು ಈ ಸಂಖ್ಯೆಯನ್ನು 30 ಕೋಟಿಗೆ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಕೊರೊನಾ ಸೋಂಕು ಕಾಣಿಸಿಕೊಂಡು ಎಲ್ಲರೂ ಆತಂಕದಿಂದ ಕೈಚೆಲ್ಲಿದ ಸಂದರ್ಭವನ್ನೇ ಭಾರತ ಸವಾಲಾಗಿ ತೆಗೆದುಕೊಂಡಿತು. ಅತಿ ಕಡಿಮೆ ಅವಧಿಯಲ್ಲಿ, ಒಂದಲ್ಲಾ, ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಯಿತು. ಇದು ನಮ್ಮ ವಿಜ್ಞಾನಿಗಳು, ವೈದ್ಯರಿಗೆ ಸಲ್ಲಬೇಕಾದ ಗರಿಮೆ ಎಂದು ಹೇಳಿದರು.

Prime Minister Narendra Modi on Saturday launched India’s vaccination drive against the coronavirus