ದೆಹಲಿ ; ದೇಶದಲ್ಲಿ ಮೊದಲ ಲಸಿಕೆ ಪಡೆದ ಪೌರ ಕಾರ್ಮಿಕ ಮತ್ತು ಏಮ್ಸ್ ನಿರ್ದೇಶಕ

16-01-21 01:46 pm       Headline Karnataka News Network   ದೇಶ - ವಿದೇಶ

ಮೊದಲ ಕೋವಿಡ್ ಲಸಿಕೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮನೀಶ್ ಕುಮಾರ್ ಎಂಬ ಪೌರ ಕಾರ್ಮಿಕನಿಗೆ ನೀಡಲಾಗಿದೆ.

Photo credits : Photo Credits: ANI

ನವದೆಹಲಿ, ಜ.16: ಕೊರೊನಾ ಮಹಾಮಾರಿಯ ವಿರುದ್ಧ ಭಾರತದಲ್ಲಿ ಜಗತ್ತಿನಲ್ಲೇ ಅತಿದೊಡ್ಡ ಲಸಿಕಾ ಅಭಿಯಾನ ನಡೆದಿದೆ. ಮೊದಲ ಹಂತದಲ್ಲಿ ಮೂರು ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಸಿಬಂದಿಗೆ ಈ ಲಸಿಕೆ ದೊರೆಯಲಿದ್ದು, ಮೊದಲ ಕೋವಿಡ್ ಲಸಿಕೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮನೀಶ್ ಕುಮಾರ್ ಎಂಬ ಪೌರ ಕಾರ್ಮಿಕನಿಗೆ ನೀಡಲಾಗಿದೆ.

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಉಪಸ್ಥಿತಿಯಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ದೇಶಾದ್ಯಂತ ಏಕಕಾಲದಲ್ಲಿ ನಡೆಯುವ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ, ಏಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಕೂಡ ಕೊರೊನಾ ಲಸಿಕೆಯನ್ನು ಪಡೆದರು.

ಭಾರತ ಸರಕಾರ ದೇಶದಲ್ಲಿ ಅಭಿವೃದ್ಧಿ ಪಡಿಸಲಾದ ಎರಡು ಲಸಿಕೆಗೆ ಅಧಿಕೃತ ಅನುಮೋದನೆ ನೀಡಿದೆ. ಭಾರತದ್ದೇ ಆದ ಸೇರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯನ್ನು ದೇಶಾದ್ಯಂತ ಜನರಿಗೆ ನೀಡಲು ಸರಕಾರ ಒಪ್ಪಿಗೆ ನೀಡಿದೆ. ಮೊದಲ ಹಂತದಲ್ಲಿ ಕೊರೊನಾ ವಿರುದ್ಧ ಹೋರಾಡಿದ ಆರೋಗ್ಯ ಸಿಬಂದಿಗೆ ಲಸಿಕೆಯನ್ನು ನೀಡಲು ಸರಕಾರ ಮುಂದಾಗಿದೆ.

ಲಸಿಕೆ ವಿತರಣೆಗೂ ಮುನ್ನ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೆಲವು ದೇಶಗಳ ಜನಸಂಖ್ಯೆಯೇ 3 ಕೋಟಿಗಿಂತ ಕಡಿಮೆ ಇದೆ. ಅಂಥದ್ರಲ್ಲಿ ಭಾರತದಲ್ಲಿ ಮೊದಲ ಹಂತದಲ್ಲೇ ಮೂರು ಕೋಟಿ ಜನರಿಗೆ ಕೊರೊನಾ ವಿರುದ್ಧ ಲಸಿಕೆ ನೀಡಲು ತಯಾರಿ ನಡೆಸಿದ್ದು ದೊಡ್ಡ ಸಾಧನೆ. ಇದಕ್ಕಾಗಿ ನಮ್ಮ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ. ಸಣ್ಣ ಅವಧಿಯಲ್ಲಿ ಸ್ವದೇಶಿಯಾಗಿ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು ಭಾರತೀಯ ವಿಜ್ಞಾನಿಗಳು ಸ್ವಾವಲಂಬನೆಯತ್ತ ಮುನ್ನಗ್ಗುತ್ತಿರುವುದರ ಸಂಕೇತ ಎಂದು ಬಣ್ಣಿಸಿದರು.

The national capital has been one of the worst-hit by Covid-19 among Indian cities, with 6.31 lakh infected people till now and 10,732 deaths related to the pandemic.