ಬ್ರೇಕಿಂಗ್ ನ್ಯೂಸ್
29-01-21 12:32 pm Headline Karnataka News Network ದೇಶ - ವಿದೇಶ
ನವದೆಹಲಿ, ಜ.29: ಗಣರಾಜ್ಯೋತ್ಸವದ ಹಿಂಸಾಚಾರದ ಬಗ್ಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ತಮ್ಮ ಬಜೆಟ್ ಅಧಿವೇಶನದ ಜಂಟಿ ಭಾಷಣದಲ್ಲಿ ಪ್ರಸ್ತಾಪಿಸಿದರು.
ಗಣರಾಜ್ಯೋತ್ಸವದಂತಹ ಪವಿತ್ರ ದಿನದಂದು ತ್ರಿವರ್ಣ ಧ್ವಜವನ್ನು ಅವಮಾನಿಸುವುದು ಬಹಳ ದುರದೃಷ್ಟಕರ ಸಂಗತಿ. ಸಂವಿಧಾನವೇ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ನೀಡಿದೆ. ಅದೇ ಸಂವಿಧಾನವೇ ಕಾನೂನನ್ನು ಗಂಭೀರವಾಗಿ ಪಾಲಿಸಬೇಕು ಎಂಬುದನ್ನು ನಮಗೆ ಕಲಿಸುತ್ತದೆ ಎಂದು ಹೇಳಿದರು.
ನಮ್ಮ ಸರ್ಕಾರ ಸಂವಿಧಾನ ಬದ್ಧವಾಗಿ ಶಾಂತಿಯುತ ಪ್ರತಿಭಟನೆಗಳಿಗೆ ಗೌರವ ನೀಡಿದೆ. ಕೆಲವು ದಿನಗಳ ಹಿಂದೆ ಗಣರಾಜ್ಯೋತ್ಸವದಂತಹ ಪವಿತ್ರ ದಿನದಂದು ನಡೆದ ತ್ರಿವರ್ಣ ಧ್ವಜದ ಅಪಮಾನ ದುರದೃಷ್ಟಕರ. ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟ ಸಂವಿಧಾನವೇ ಕಾನೂನು ಪಾಲಿಸಬೇಕು ಎಂಬುದನ್ನು ಬೋಧಿಸುತ್ತದೆ.
ನೂತನ ಕೃಷಿ ಕಾಯ್ದೆಗಳಿಂದ ರೈತರಿಗೆ ಅಧಿಕಾರ:
ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದ ಮೂರು ಕೃಷಿ ಕಾನೂನುಗಳು ರೈತರಿಗೆ ಅಧಿಕಾರ ನೀಡುತ್ತವೆ ಎಂದು ರಾಷ್ಟ್ರಪತಿ ಹೇಳಿದರು.
ಮೂರು ಹೊಸ ಕೃಷಿ ಕಾನೂನುಗಳನ್ನು ರಚಿಸುವ ಮೊದಲು, ಹಳೆಯ ವ್ಯವಸ್ಥೆಯಡಿಯಲ್ಲಿದ್ದ ಹಕ್ಕು ಮತ್ತು ಸೌಲಭ್ಯಗಳಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂದು ನನ್ನ ಸರ್ಕಾರ ಸ್ಪಷ್ಟಪಡಿಸಲು ಬಯಸಿದೆ. ಈಗಿನ ಕೃಷಿ ಸುಧಾರಣೆಗಳ ಮೂಲಕ ಸರ್ಕಾರವು ರೈತರಿಗೆ ಹೊಸ ಹಕ್ಕುಗಳನ್ನು ನೀಡಿದೆ ಎಂದರು.
ಸಾಂಕ್ರಾಮಿಕ ಸಮಯದಲ್ಲಿ ಬಡವರಿಗೆ ಸರ್ಕಾರ ದಾಖಲೆಯ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಆರ್ಥಿಕತೆ ನಿಭಾಯಿಸಲು ಆರ್ಥಿಕ ಪ್ಯಾಕೇಜ್ ಘೋಷಣೆ ಜತೆಗೆ ನನ್ನ ಸರ್ಕಾರವು ಯಾವುದೇ ಬಡವರು ಹಸಿವಿನಿಂದ ಬಳಲದಂತೆ ನೋಡಿಕೊಂಡಿತ್ತು ಎಂದು ಹೇಳಿದರು.
ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ಎಂಟು ಕೋಟಿ ಜನರಿಗೆ ತಿಂಗಳಿಗೆ ಐದು ಕೆಜಿ ಉಚಿತ ಆಹಾರ ಧಾನ್ಯಗಳನ್ನು ಎಂಟು ತಿಂಗಳವರೆಗೆ ನೀಡಲಾಗಿದೆ. ವಲಸೆ ಕಾರ್ಮಿಕರು, ದಿನಗೂಲಿ ಮತ್ತು ಮನೆಗಳಿಂದ ದೂರ ವಾಸಿಸುವ ಕಾರ್ಮಿಕರನ್ನು ಸರ್ಕಾರ ಸವಲತ್ತುಗಳನ್ನು ನೀಡಿದೆ ಎಂದು ರಾಷ್ಟ್ರಪತಿ ಹೇಳಿದರು.
ಭಾರತದ ಜನರಿಗೆ ಕೋವಿಡ್ -19 ಸಾಂಕ್ರಾಮಿಕ ಮತ್ತು ಸಂಬಂಧಿತ ತೊಂದರೆಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಸಾಂಕ್ರಾಮಿಕ ಸಮಯದಲ್ಲಿ ತೀವ್ರವಾಗಿ ಬಳಲುತ್ತಿರುವ ಎಲ್ಲ ಕ್ಷೇತ್ರಗಳ ಉನ್ನತಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಪರಿಚಯಿಸಿದೆ ಎಂದು ಕೋವಿಂದ್ ಹೇಳಿದರು.
ತಮ್ಮ ಭಾಷಣಕ್ಕೂ ಮುನ್ನ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ರಾಷ್ಟ್ರಪತಿಗಳು ಹಾಗೂ ಸಂಸತಿನ ಸದಸ್ಯರು ಸಂತಾಪ ಸೂಚಿಸಿದರು.
The recent acts of dishonouring the National Flag and showing disrespect to the auspicious occasion of the Republic Day are unfortunate. While the Constitution gives us the right to freedom of expression it is also expected that we abide by the laws and rules with equal sincerity
— President of India (@rashtrapatibhvn) January 29, 2021
Under the ‘Pradhan Mantri Garib Kalyan Yojana’, 80 crore people were provided an additional 5 kg free food grains per month for 8 months. The Government was also mindful of the plight of migrant labourers, workers and those who were away from their homes.
— President of India (@rashtrapatibhvn) January 29, 2021
In this fight against the pandemic, we have also suffered the untimely loss of life of a number of our countrymen. Our beloved former President and my predecessor Shri Pranab Mukherjee too passed away during the pandemic.
— President of India (@rashtrapatibhvn) January 29, 2021
Budget 2021 Session President Ram Nath Kovind says Most Unfortunate On Farmers' Flag Atop Red Fort
23-04-25 01:06 pm
Bangalore Correspondent
ಒಂದೇ ಸಮುದಾಯವನ್ನು ಶಿಕ್ಷಣ, ಉದ್ಯೋಗ ಕಾರಣಕ್ಕೆ ಪ್ರತ...
22-04-25 10:15 pm
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
23-04-25 01:03 pm
Mangalore Correspondent
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm